ಒಂದು ನಿಮಿಷದ ಕಥೆ

ರಾಮಯ್ಯನವರು ತುಂಬಾ ದುಃಖಿತರಾಗಿದ್ದರು. ಅದೇ ಕಲ್ಲು ಬಂಡೆಯ ಪಾರ್ಕಿನಲ್ಲಿ ಮೊಮ್ಮೊಗುವಿನೊಂದಿಗೆ ಖುಷಿ ಖುಷಿಯಾಗಿ ಆಟವಾಡಿದ ಕ್ಷಣಗಳು ಆ ಒಂದು ಘಟನೆಯಿಂದ ಕ್ಷಣ ಮಾತ್ರದಲ್ಲಿ ಕರಗಿ ಹೋಗಿತ್ತು. ಅದೇ ಘಟನೆಯನ್ನು ಮತ್ತೆ ಮತ್ತೆ ನೆನಸಿಕೊಂಡು ಅಳುತ್ತಿದ್ದರು. ಅಷ್ಟಕ್ಕೂ ಆದದ್ದಿಷ್ಟೇ… ನಿನ್ನೆ ನೆಡೆದ ಘಟನೆ….

ಪಾರ್ಕಿನಲ್ಲಿ ರಾಮಯ್ಯನವರು ಮೊಮ್ಮೊಗ ರಾಮುವಿನೊಂದಿಗೆ ಹೆಜ್ಜೆ ಹಾಕುತ್ತ ಹರಟುತ್ತ ಆಟವಾಡಿಸುತ್ತಾ ಏನೇನೋ ಮಾತನಾಡುತ್ತ ಇದ್ದಾಗ ಒಡನೆಯೇ ರಾಮು ‘ತಾತ ನಾಳೆ ನನ್ನ ಬರ್ತ್ಡೇ ಇದೆ, ನಾಳೆ ನನ್ನ ಫ್ರೆಂಡ್ಸ್ ನ ಮನೆಗೆ ಕರೆಯುವೆ, ಬಂದವರಿಗೆ ಸ್ವೀಟ್ಸ್ ಕೊಡೋಣ’ ಎನ್ನುತ್ತಿದ್ದಂತೆ ಆ ಪುಟ್ಟ ಮಗುವಿನ ಮುಖ ನೋಡಿ ರಾಮಯ್ಯನವರು ಖುಷಿಯಿಂದ ಮಗುವನ್ನು ಎತ್ತಿ ಮುದ್ದಾಡುತ್ತಾ ಮನೆಗೆ ಹೋದರು. ಮನೆಯ ಕಾರು ಚಾಲಕ ಗಣೇಶ ನನ್ನು ಕರೆದು ‘ಗಣೇಶ ನಾಳೆ ಮಗುವಿನ ಹುಟ್ಟಿದಹಬ್ಬ ಈ ಸಾವಿರ ರೂಪಾಯಿ ತಗೊಂಡು ಒಳ್ಳೆಯ ಚಾಕೋಲೇಟ್ ಕೊಂಡು ಕೊಂಡು ಬಾ’ ಎಂದಾಗ ಗಣೇಶ ಆಯ್ತು ಸರ್ ಎಂದು ತಲೆ ಆಡಿಸಿ ಬಂದದ್ದೇ ರಾತ್ರಿ ವೇಳೆ.

ಮರುದಿನ ಎಂದಿನಂತೆ ಎಲ್ಲರು ಹುಟ್ಟಿದ ಹಬ್ಬದ ಸಂಭ್ರದಲ್ಲಿ ಇದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಕೇಕು ಮತ್ತು ಇತರೆ ಸಿಹಿ ತಿಂಡಿ ತಂದರು ರಾಮುವಿಗೆ ಚಾಕೋಲೇಟ್ ಎಂದರೆ ಬಲು ಇಷ್ಟವಾದದ್ದರಿಂದ ಎಲ್ಲಾ ಮಕ್ಕಳಿಗೂ ತಂದಿದ್ದ ಚಾಕೋಲೇಟ್ ಕೊಡಿಸಲಾಯಿತು. ಮಕ್ಕಳೆಲ್ಲ ಖುಷಿ ಇರುವುದನ್ನು ನೋಡಿ ರಾಮಯ್ಯನವರಿಗೆ ಅದೆಂತದ್ದೋ ಹೇಳತೀರದ ಆನಂದ.

ಕೆಲವೇ ಕ್ಷಣಗಳಲ್ಲಿ ಎಲ್ಲವು ತಾರುಮಾರು! ಎಲ್ಲಾ ಮಕ್ಕಳು ತಲೆ ಸುತ್ತಿ ಬಿದ್ದದ್ದನ್ನು ಕಂಡು ರಾಮಯ್ಯನವರು ಹಾಗು ಬಂದ ಅಥಿತಿಗಳಿಗೆ ಏನು ಮಾಡದೆಂದು ತೋಚದಾಯಿತು. ಕೂಡಲೇ ವೈದ್ಯರನ್ನು ಕರೆತರಲಾಯಿತು. ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಟ್ಟ ವೈದ್ಯರು ಇದಕ್ಕೆಲ್ಲಾ ವಿಷ ಆಹಾರವೇ ಕಾರಣ, ಮಕ್ಕಳು ತಿಂದ ಚಾಕಲೇಟ್ ತಯಾರಿಕೆಯ ಅವಧಿ ಮೀರಿದ್ದೇ ಇದಕ್ಕೆಲ್ಲಾ ಕಾರಣ ಎಂದು ಷರಾ ಬರೆದರು.

ರಾಮಯ್ಯನವರು ಕೂಡಲೇ ಚಾಲಕ ಗಣೇಶನನ್ನು ಕರೆದು ಏನಾಯಿತು ಎಂದು ವಿಚಾರಿಸಿದಾಗ ಅವನು ಹೆದರಿ ನೆಡದಿದ್ದೆಲ್ಲಾ ಹೇಳಿದನು.

ಕ್ಷಮಿಸಿ ಸರ್ ಅದು ನನಗೆ ಪರಿಚಿತ ಇರುವ ವೆಂಕೋಬನ ಅಂಗಡಿಯಿಂದ ತಂದದ್ದು. ಅವನು ಈ ಚಾಕೋಲೇಟ್ ಕೊಟ್ಟು, ಇದು ಸ್ವಲ್ಪ ಹಳೆಮಾಲು ಅಷ್ಟೇ, ಅರ್ಧ ರೇಟ್ಗೆ ತಗೋ ಎಂದು ಕೊಟ್ಟ. ಸಾವಿರ ರೂಪಾಯಿ ಎಂದು ನಾ ಸುಳ್ಳು ಹೇಳಿದೆ. ಆದರೆ ಈಗೆ ಆಗುತದ್ದೆ ಎಂದು ಊಹಿಸಿರಲಿಲ್ಲ ಎಂದಾಗ ರಾಮಯ್ಯನವರು ತುಂಬಾ ಸಿಟ್ಟಿನಿಂದಲೇ ಎರಡು ಬಾರಿಸಿ ಪೊಲೀಸರನ್ನು ಕರೆಸಿದರು.

ಎಲ್ಲವನ್ನು ವಿಚಾರಣೆ ಮಾಡಿದ ಪೊಲೀಸರು ಅಂಗಡಿಯವನನ್ನು ಹಾಗು ಚಾಲಕನನ್ನು ಬಂಧಿಸಿ, ರಾಮಯ್ಯನವರಿಗೆ, ಮಕ್ಕಳು ನಾಳೆ ಆರೋಗ್ಯದಿಂದ ಚೇತರಿಸಿಕೊಳ್ಳದಿದ್ದಲ್ಲಿ ನಿರ್ಲಕ್ಷೆ ಆಧಾರದಡಿ ಕೇಸು ಧಾಖಲಿಸಿ ನಿಮ್ಮನ್ನು ಸಹ ಬಂಧಿಸಲಾಗುವುದು ಎಂದು ಎಚ್ಚರಿಸಿ ಹೋದರು.

ಅದೇ ಪಾರ್ಕ್ ಅದೇ ಸಮಯ ಘಟನೆ ಬೇರೆ ಅಷ್ಟೇ

ದುಃಖಿತರಾದ ರಾಮಯ್ಯನವರಿಗೆ ತಾತ ಎನ್ನುವ ಕೂಗು ಕೇಳುತ್ತಲೇ ಮುಖ ಅರಳಿಸಿ ನೋಡುತ್ತಾರೆ ಮಗ ಮತ್ತು ಸೊಸೆ ಮೊಮ್ಮಗುವಿನೊಂದಿಗೆ ಬಂದಿದ್ದಾರೆ. ಮಗನು ರಾಮಯ್ಯನವರನ್ನು ಸಂತೈಸುತ್ತ ಅಪ್ಪ ಇದರಲ್ಲಿ ಎಲ್ಲರದು ತಪ್ಪು ಇದೆ. ಅವಧಿ ಮೀರಿದ ಚಾಕೋಲೇಟ್ ತಂದದ್ದು ಗಣೇಶನ ತಪ್ಪು. ಪರಿಶೀಲನೆ ಮಾಡದೆ ಎಲರಿಗೂ ಹಂಚಿದ್ದು ಪಾಲಕರಾದ ನಮ್ಮ ತಪ್ಪು.

ಅಂಗಡಿಯವನ ಮೇಲೆ ಕೇಸು ದಾಖಲಿಸಿದ್ದೇನೆ. ಅವನನ್ನು ಒದ್ದು ಒಳಗೆ ಹಾಕಿದ್ದಾರೆ. ಈಗ ವೈದ್ಯರು ಹೇಳಿದ್ದಾರೆ ಉಳಿದ ಮಕ್ಕಳ ಅರೋಗ್ಯ ಚೇತರಿಸಿಕೊಳ್ಳುತ್ತಿದೆ ಎಂದು. ನೆಡೆಯಿರಿ ಮನೆಗೆ ಹೋಗೋಣ ಎಂದಾಗ ರಾಮಯ್ಯನವರಿಗೆ ಅರ್ಧ ಜೀವ ಬಂದಂತಾಯಿತು.

ಅವರು ಅಳುತ್ತಾ ಈ ಘಟನೆಯಿಂದ ಪಾಠ ಕಲಿತೆ ಭವಿಷ್ಯದಲ್ಲಿ ಅವಧಿ ಪರಿಶೀಲನೆ ಮಾಡದೆ ಯಾವುದೇ ಪದಾರ್ಥ ಕೊಳ್ಳುವುದಿಲ್ಲ ಎಂದು ಮನೆ ಕಡೆ ಭಾರವಾದ ಹೆಜ್ಜೆಗಳನ್ನು ಹಾಕಿದರು.

ನೀತಿ: ಮಾನ್ಯರೆ ಹಾಗು ಮಕ್ಕಳೇ ಅಂಗಡಿಯಲ್ಲಿ ಯಾವುದೇ ಪದಾರ್ಥದ ಅವಧಿಯನ್ನು ಪರಿಶೀಲನೆ ಮಾಡದೆ ಕೊಂಡುಕೊಳ್ಳುವುದು ಅನಾಹುತಕ್ಕೆ ಕಟ್ಟಿಟ್ಟ ಬುತ್ತಿ!

ಪವನ್ ಕುಮಾರ್ ಕೆ ವಿ.

(ಈ ಕಥೆ ಹಿಂದೆ ಪ್ರತಿಲಿಪಿಯಲ್ಲಿ ಪ್ರಕಟವಾಗಿದೆ)

Related post

Leave a Reply

Your email address will not be published. Required fields are marked *