ಒಂದು ಮಳೆ ಮುತ್ತು
ಕಿಟಕಿಯ ಪಕ್ಕ ಮಲಗಿದ್ದೆ
ಗುಡುಗು ಸಿಡಿಲು ಮಿಂಚಿನ ಆರ್ಭಟದ ಜೊತೆಗೆ
ಜೋರು ಮಳೆ ರಾತ್ರಿ.
ಮಳೆಯಲ್ಲಿ ನೆನೆಯೊಣವೆಂದರೆ ಅವಳು
ನನಗೆ ಮತ್ತು ಮಳೆಗೆ ಬಯ್ಯುವುದು ಖಾತರಿ.
ಒಂದು ಐಡಿಯಾ ಮಾಡಿದೆ
ಹಳೆಯ ಪುಟವೊಂದು ಹರಿದೆ
ದೋಣಿ ಮಾಡಿದೆ
ಹರಿವ ನೀರಿನಲ್ಲಿ ಬಿಡಲು ಬಂದೆ
ಮಳೆಯಲ್ಲಿ ನೆನೆದೆ.
ತನುಮನವೆಲ್ಲ ತಂಪೊ….. ತಂಪು.!!
ನನ್ನಾಕೆ ಇದನ್ನೇ ನೋಡಿ ಬೀಳುವ ಮಳೆಯಲ್ಲಿಯೂ ಕಾವು ಏರಿಸಿ ಮುಖ ಗಪ್ಪಾಗಿಸಿಕೊಂಡು ಬಾಗಿಲ ಬಳಿ ಗದರುತ್ತ
“ಈಗ ಈ ಪೇಪರ್ ದೋಣಿ ವಿಹಾರ ಬೇಕಿತ್ತ ನಿನಗೆ?”
ನಾನು ಉತ್ತರ ಕೊಟ್ಟೆ ನನ್ನ ಹುಚ್ಚು ನಿನಗೆ ಗೊತ್ತಲ್ವ ಅಂದೆ ಅಷ್ಟೇ
ಗೊರ ಗೊರ ಗೊಣಗುತ್ತ ಮಳೆಗೆ ಶಪಿಸುತ್ತಲೇ
ನನ್ನ ತಲೆ ಒರೆಸಿ ಒಂದು ಮುತ್ತನಿಟ್ಟು ಇನ್ನೊಂದು ಸಲ ಮಳೆಗೆ ಹೋಗಬಾರದು ಇದೇ ಲಾಸ್ಟ್ ಎಂದಳು.
ಇಂತಹ ಲಾಸ್ಟ್ ಮಳೆ ಅದೆಷ್ಟು ಆದವೊ ಯಾರಿಗೆ ಗೊತ್ತು?!
ನಾನಂತು ತುಂಬಾ lucky ಸಿಕ್ಕಿತಲ್ಲ ಫ್ರೀ ಮುತ್ತು!
ಪರಮಾತ್ಮ ಪರಶುರಾಮ್. ಎ