ಒಲವಿನ ಸವಿಬಂಧನ
ಮೊದಲ ಸಲ ನೋಡಿರಲು
ಕಂಗಳ ಕದತೆರೆದು ನಿ ಬಂದಿದ್ದೆ..!
ಒಲವಿನ ಆ ನಿನ್ನ ನೋಟಕೆ..
ಕಣ್ಣಂಚಲಿ ನಾ ಬಂಧಿಯಾಗಿದ್ದೆ!!
ಮಂದಹಾಸದಿ ನಿ ನಕ್ಕಾಗ
ನೂರೆಂಟು ಕನಸು ನಾ ಕಂಡಿದ್ದೆ..!
ಹೃದಯವು ಬಿಡದೆ ಮಿಡಿದಾಗಲೇ..
ಇನಿಯನಿವನೇ ಎಂದು ಬಗೆದಿದ್ದೆ!!
ಕಣ್ಣಬಿಂಬದಲಿ ಸದಾ ನೀನಿರಲು
ಜನ್ಮಜನ್ಮಗಳೇ ನಂಬಿಕೆಯಲಿ ಕಾದಿದ್ದೆ..!
ನಿ ತೋರಿದ ಒಲುಮೆಯ ಭಾವಕೆ..
ಮನದಲೇ ನಿನ್ನ ನಾ ವರಿಸಿದ್ದೆ!!
ಹೇಳು ಕೃಷ್ಣಾ..ನೀನೇಕೆ ನಿನಗಾಗಿ
ಮೀಸಲಾದ ರಾಧೆಯ ತೊರೆದಿದ್ದೆ..!
ನೀ ಬಂದೇ ಬರುವೆಯೆಂದು ನನಗಾಗಿ..
ನಾ ನಿನ್ನ ಮನದುಂಬಿ ಪ್ರೀತಿಸಿದ್ದೆ!!
ಸುಮನಾ ರಮಾನಂದ