ಇಲ್ಲಿ ಕಾಣಿಸುವ ಪಾತ್ರಗಳು ಕೇವಲ ಕಾಲ್ಪನಿಕ
ಯಾರನ್ನೂ ಉದ್ದೇಶಿಸಿದವಲ್ಲ..
ವಿರೋಧಿಸುತ್ತೇನೆ ಈ ಹೇಳಿಕೆಗೆ
ಹಾಗಾದರೆ ಕಾಲ್ಪನಿಕ ಪಾತ್ರಗಳು ರೂಪುಗೊಂಡ ಬಗೆ ಹೇಗೆ?
ನಮ್ಮನ್ನು ಬ್ರಮೆಗೆ ದೂಡಿದವರಾರು?
ನಾವೇಕೆ ಹುಚ್ಚರಾದೆವು ಬಲೆಗೆ ಬಿದ್ದವೇಕೆ ಕುರಿಮಂದೆಯೊಳಗೆ..
ಒಮ್ಮೊಮ್ಮೆ ಯೋಚಿಸುತ್ತೇನೆ..
ನಾನೇಕೆ ಹುಡುಕುತ್ತಿದ್ದೇನೆ ಸಾಂಗತ್ಯಕ್ಕಾಗಿ
ಬಹುದೊಡ್ಡ ಹೆದ್ದಾರಿ ಇದೆ..
ಸಾಗಬಹುದಲ್ಲವೇ ನನ್ನ ಪಾಡಿಗೆ..
ಉರುಳಿ ಹೋಗಲಿ ದಿನಗಳು ಬಹು ಬೇಗನೇ
ರಜಾ ದಿನಗಳಲ್ಲಿ ಅರ್ಥವಿಲ್ಲ.
ಸ್ವಾರ್ಥಿಗಳು ನಾವು ಎಲ್ಲವೂ ನಮ್ಮ, ನಮ್ಮ ಅನುಕೂಲಕ್ಕೆ.
ಕಾಲನ ಹೊಡೆತಕ್ಕೆ ರಜಾ ಚೀಟಿ ಅಂಟಿಸಲಾದೀತೆ.?
ನಾನು ಪ್ರಶ್ನಿಸಲು ಆರಂಭಿಸಿದೆ
ಜನ ದಡ್ಡರೆಂದರು..
ನಿಜವಾಗಿಯೂ ನಾನು ದಡ್ಡನೇ ಆಗಿದ್ದೆ..
ನಾನು ನಿರುತ್ತರಿಗಳನ್ನು ಎಡತಾಗಿದ್ದೆ.
ಕಣ್ಣು ಕಂಡ ಪ್ರಪಂಚದಲ್ಲಿ ನಾನು
ಬ್ರಮಾದೀನನಾಗಿದ್ದೇನೆ..
ಸತ್ಯ ಎದುರುಗಿದ್ದರೂ
ಕಾಲ್ಪನಿಕ ಎನ್ನುವ ಬೆರಗಿಗೆ..
ಈ ರಾತ್ರಿಯ ಕತ್ತಲು ಮುಂಜಾವಿಗೆ ಬೆಳಗು..
ಪವನ ಕುಮಾರ ಕೆ ವಿ
ಬಳ್ಳಾರಿ