ಓಡುವ ಕುದುರೆಯ ಬಾಲದ ನೇತಾರರು
ಓಡುವ ಕುದುರೆಯ ಬಾಲವ ಹಿಡಿಯುತ
ಬಳಿರೇ ಬಳಿರೇ ಬಳಿರೇ ಎನ್ನುತ
ಉಗಿದದ್ದನ್ನು ಪ್ರಸಾದವೆನ್ನುತ
ಕಾಲಿನ ಉಗುರಿಗೆ ಓಹೋ ಎನ್ನುತ
ಇಂದಿನ ದಿನವ ಇಂದಿಗೇ ಮುಗಿಸುತ..
ಬದುಕುವ ಭಂಡ ಪ್ರಚಂಡರು..
ಕತ್ತೆಯ ತೋರಿಸಿ ಕುದುರೆಯಂದರೂ
ಕುದುರೆಯ ತೋರಿಸಿ ಎಮ್ಮೆಯೆಂದರೂ
ಹ್ಮೂ ಹ್ಮೂ ಹ್ಮೂ ಎನ್ನುತ ಸಾಗುವ ಬುದ್ದಿ ಜೀವಿಗಳು…
ಏನೇ ಬರಲೀ ತಾ.. ತಾ… ತಾ
ಯಾರೇ ಸಾಯಲೀ ತಾ.. ತಾ.. ತಾ.
ಹುಟ್ಟಿಗೂ, ಸಾವಿಗೂ, ಸಂಭ್ರಮಿಸುವ
ತದಾತ್ಮ ಜೀವಿಗಳೂ…
ಅಯ್ಯೋ ಅಪ್ಪ ಅಣ್ಣಾ ಎನ್ನುತ
ವಂಶೋದ್ದಾರಕ ಅಧಿಕಾರ..
ಕೂಡು ಕುಟುಂಬ ರಾಜ್ಯಕ್ಕೇ
ಮಾದರಿ ಎನಿಸಿಕೊಂಡಿಹರು
ಇವ್ರ ಮೇಲೆ ವಿಶ್ವಾಸವಿರಸಿ
ದೇಶದ ಭವಿಷ್ಯ ಕೈಯಲ್ಲಿ ಇರಸಿ
ಕೈ ಕಟ್ಟಿ ಕುಳಿತ ಮತಧಾರ
ನೀ ಎಂತಹ ಕೋಡಂಗೀ
ನೀ ಎಂತಹ ಕೋಡಂಗೀ

ಪವನ್ ಕುಮಾರ್ ಕೆ.ವಿ