ಕಣ್ಣೀರ ಕಥೆ
ಎನ್ನ ಮನದಾಳದಿ
ಹುದುಗಿ ಕುಳಿತ
ಕಣ್ಣೀರ ಕುರಿತು ನಾ
ನುಡಿದೆ, ಹೇ ಹೀಗೇಕೆ
ನೀನವಿತು ಕುಳಿತೆ,
ನೀನೊಮ್ಮೆ ಹೊರ
ಬಂದು ಬಿಡಬಾರದೇ ?
ಮತ್ತಷ್ಟು ಒಳಗೇ
ಅಡಗಿದ ಕಣ್ಣೀರು
ಹೊರಬರಲು ತಾ
ಒಪ್ಪಲೇ ಇಲ್ಲ.
ಅನುನಯದಿ
ಕೇಳಿದಾಗ ಅದು
ಉಲಿಯಿತು, ನಾ
ಹೊರಬಂದಲ್ಲಿ ನನ್ನ
ನೋಡಿ ನಗುವರೆಲ್ಲ.
ಒಳಗಿನ ನೋವಿನ
ಕಾವನು ಆರಿಸಲು
ಬರುವವರಾರೂ ಇಲ್ಲ!
ಮನದಲುದಯಿಸಿದ
ಕಣ್ಣೀರ ಹೊರಗಟ್ಟದೆ
ಒಳಗಿಳಿಸುತಲಿ
ಧಗಧಗಿಸುತ್ತಿರುವ
ಒಡಲಾಗ್ನಿಯೆಂಬ
ನೋವ ತಣಿಸಿಬಿಡುವೆ!!
ಶ್ರೀವಲ್ಲಿ ಮಂಜುನಾಥ