ಕತ್ತಲೆ
ಇರುಳಿನಲಿ ರಜನಿಯು ಕಾಣದಿರೆ
ಮನದಲಿ ಆಸೆಯು ಬತ್ತುತಲಿ
ಆವರಿಸುವುದು ಜಗದಲಿ ಕತ್ತಲೆ
ಬಾನಿನ ಅಂಚಿನಲಿ ನೀ ಕಾಣದಿರಲು
ಆಸೆಯ ಹೊಂಗಿರಣ ಹೊರಬರದಿರಲು
ಆವರಿಸುವುದು ಜಗದಲಿ ಕತ್ತಲೆ
ನೇತ್ರಗಳಲಿ ಕಾಂತಿಯುಕ್ಕಿದರೂ
ಮನದ ಅಂಗಳದಿ ಬೆಳಕಿದ್ದರೂ
ದೇಹದೊಳಗೆ ಮೂಡಿದ ಕತ್ತಲೆ
ಒಮ್ಮೊಮ್ಮೆ ಇಷ್ಟವಾಗುವ ಕತ್ತಲೆ
ಹಾಗೆಯೇ ಬೇಸರ ಮೂಡಿಸುವ ಕತ್ತಲೆ
ದಿನದ ನಾಗಾಲೋಟದಿ ಅನಿವಾರ್ಯ ಕತ್ತಲೆ
ಸದ್ವಿಚಾರಗಳ ಬೆಳಕು ಮೊಳೆತು
ದುರ್ಬುದ್ಧಿಗಳ ಕತ್ತಲೆ ಕಳೆದು
ಬದುಕ ಬಂಡಿ ಸುಖದಿ ಸಾಗಲಿ
ಕಷ್ಟದ ಜೀವನಕೆ ಬೆಳಕಾಗಿ
ಅತಿಯಾಸೆಗೆ ನೀ ಕಪ್ಪಾಗಿ
ಸಮಭಾವದಿ ಬೆಳಗು ನೀ ಕತ್ತಲೆ
ಸಿ.ಎನ್. ಮಹೇಶ್