ಕತ್ತಲ ಕಂಬನಿ
ಅವತ್ತ ಸುಡು ಸುಡು ಬಿಸಿಲು ಇತ್ತು. ಬಿಸಿಲಿನ್ಯಾಗ ಮಂದಿಯೆಲ್ಲಾ ಬಿಸಿಲಿನ ತಾಪಕ್ಕ ರೋಸಿ ಹೋಗಿದ್ರು . ಅವತ್ತು ರವಿವಾರ ಬೇರೆ ಇತ್ತು. ಲಗೂನ ಕೆಲಸ ಮುಗಿಸಿ ದಾವಾಖಾನಿಯಿ೦ದ ಮನೆಗೆ ಹೋಗಬೇಕನ್ನೋ ಗಡಿಬಿಡಿಲಿದ್ರು ಡಾಕ್ಟರ್ ಸಂಜಯ್ ಅವರು ಹೆಂಡತಿ ಮಕ್ಕಳ ಜೊತೆ ಬಜಾರ್ ಸುತ್ತಬೇಕು ಹೆ೦ಡತಿ ಮಕ್ಕಳ ಜೊತೆ ಸಮಯ ಕಳಿಬೇಕು. ಈ ಡಾಕ್ಟರಕಿ ಕೆಲಸ ಸಾಕಾಗೇತಿನಂಗರ ಅಂತ ಗಡಿಬಿಡಿಲಿದ್ರು.
ಅಷ್ಟರಲ್ಲಿ ನರ್ಸ್ ಬಂದ್ರು, ಸರ್ ಒಬ್ರು ಪೇಷಂಟ್ ಈದರ್ರೀ ಈಗ ಬ೦ದರ, ಅಯ್ಯೋ ದೇವಾ ನ೦ಗರ ಮನಿಗ್ ಹೋಗೋರೈತಿ ಅಂತದ್ರಾಗ ಪೇಷಂಟ್ ಬಂದರ ಅಂತೀನಿ .ಬೇರೆಯಾರಿಗರ ನೋಡಾಕೆಳ್ರಿ ಅಂದ್ರು ಡಾಕ್ಟರ್. ನರ್ಸ್ ಇಲ್ಲ ಸರ್ ನಿವೇನೋಡ್ಬೇಕಂತ್ರಿ ಅವ್ರಿಗೇ ಅಷ್ಟರಾಗ! ಡಾಕ್ಟ್ರ ಫೋನ್ ರಿಂಗಾಗಕತಿತ್ತು. ಡಾಕ್ಟು ಫೋನ್ ನೋಡಿದ್ರು ಅಯ್ಯೋ ಮನ್ಯಾಗ ಅವೆಲ್ಲ ನಂಗೆ ಕಾಯಕತ್ಯರೇನು ನಂದು ಯಾವಾಗ್ಲೂ ಇದ ಆತು ನೋಡ್ರಿ ಅಂತ ಬಾಜೂಕಿದ್ದ ಟೇಬಲ್ ಬೆಲ್ ನ ಬಾರಿಸಿದ್ರು ಅಷ್ಟರಾಗ ಪೇಷಂಟ್ ಬಂದು ಕಾಯಕತಿದ್ರು ಬೆಲ್ ನ ಅವಾಜ್ ಕೇಳಿ ನರ್ಸು ಓಡಿ ಬಂದ್ ಏನಾಯ್ತು ಸರ್ ಅಂದ್ರು ಆ ಪೇಷಂಟ್ ಕಳಸರಿ ಒಳ್ಗಡೆ ಹೂ!
ಸರ್! ರಾಮಣ್ಣ ಪಾಟೀಲ್ ಅವು ಬರ್ರೀ , ಪೇಷಂಟ್ ಜೋಡಿ ಅವನ ಮಗ ಒಳಗ್ ಬಂದ್ರು ನಮಸ್ಕಾರ್ ರೀ ಸರ ಅಂದ್ರು , ಡಾಕ್ಟ್ರು ಬರಿ!! ನೀವು ರಾಮಣ್ಣ ಪಾಟೀಲ್ ಏನಿ? ಹೌದು ರೀ ಅ೦ದ ರಾಮಣ್ಣ. ಕುಂದುರ್ರಿ ಅಂದ್ರು ಏನು ತ್ರಾಸು ಆಗ್ವೇತ್ರಿ ನಿಮ್ಮಕಣ್ಣಿಗ ಅ೦ತ ಗಡಿಬಿಡಿಯಾಲ್ಲೇ ಡಾಕ್ಟ್ರು ರಾಮಣ್ಣನ್ನ ಕೇಳಿದ್ರು ರಾಮಣ್ಣನ ಗಮನಾಯೆಲ್ಲ ಅವನ ಮಗನ್ನ್ಯಾಲಿತ್ತು .
ಅವ ನನ್ನ ಮಗ ಅದಾನ್ರೀ ಅವ್ನಿಗೆ ಹೊರಗ್ ಕಳುಸುರೀ ಹೇಳ್ತಿನಿ ಅಂದ ರಾಮಣ್ಣ. ಅವನಿಗ್ಯಾಕೆ ಇರ್ಲಿ ಬಿಡ್ರಿ, ಹೇಳ್ರಿ ಏನ್ ತ್ರಾಸು. ಇಲ್ಲ ಡಾಕ್ಟೇ ನೀವು ಅವನ್ನ ಹೊರಗೆ ಕಳುಸ್ತಿ, ಡಾಕ್ಟರಿಗೆ ಮನೆಗ್ ಬ್ಯಾರೆ ಹೊಗೋದೈತಿ ಫೋನ್ ಒಂದರಮೇಲೊಂದು ಬೇರೆ ಬರಾಕತ್ತಿತ್ತು. ಅದುನ್ನ ಸೈಲೆಂಟ್ ಮಾಡಿ ಅವ್ನಿಗೇನ್ರಾ ಚೆಕಪ್ ಮಾಡೋದಾದಹೆನ್ರಿ ರಾಮಣ್ಣ ಇಲ್ರಿ ನಂಗಷ್ಟೇ ಅದ. ಮತ್ತೆ ಅವ್ನು ಇರ್ಲಿಲಾ। ಮತ್ತ . ಬ್ಯಾಡ್ರಿ ಅವನಿಗೆ ಕಳ್ಗಾಂಗಿಲ್ಲೇನ್ರಿ ಮತ್ತ ಅಲ್ಲೀತನಕ ದೀರ್ಹಿಡಿದಿದ್ದ ಡಾಕ್ಟ್ರೇ ಅಯ್ಯೋ ದೇವ್ರೇ ಇದೇನಂತೀನಿ ನಂಗರ ಮನೀಗ್ ಹೋಗೊದೈತಿ ಲಘುನ ಅಂತಾದ್ರಾಗ ಇವಾ ಏನು ಇಂಗಾಡಕತ್ಯಾನ ಅಂತೀನಿ ಅ೦ತ ತನ್ನ ಮನದಾಗ ಡಾಕ್ಟ್ರು ಅನ್ಕೊಂಡ್ರು.
ಆಯ್ತು ಸರಿ ಅಂತ ಸಿಟ್ಟನ್ಯಾಗ ಪುಟ್ಟ ನೀನು ಹೊರಗ್ ಕುಂದ್ರು ಆಮ್ಯಾಲೆ ಮತ್ತ ಕರೀತೀನಿ, ಹೂ ರೀ ಅಂತ ಹುಡುಗ ಹೊರಗ್ ಹೋಗಿ ಅಲ್ಲಿದ್ದ ಕುರ್ಚಿಮ್ಯಾಗ ಕುಂತ ಅವನ ಲಕ್ಷ ಯಲ್ಲಾ ಆ ಗೋಡೆಮ್ಯಾಲಿನ ಚಿತ್ರಪಟದ ಮ್ಯಾಲಿತ್ತು. ಡಾಕ್ಟ್ರು ಅವ ಹೋಗ್ಯಾನ್ರೀ ಮತ್ತ ನಿಮ್ಗ ಏನ್ ತ್ರಾಸಗಕಥೆತಿ ಹೇಳ್ರಿ ಅಂತ ಏರುದ್ದನಿಯಿಂದಾನೆ ಹೇಳಿದ್ರು. ಬ್ಯಾಸರಾ ಮಾಡ್ಕೋಬೇಡ್ರಿ ಸಾಹೇಬ್ರ ನಂಗೆ ಎರಡು ಕಣ್ಣು ಕಾಣಂಗಿಲ್ರಿ ಈಗಾರಎದುರಿಂದ್ದ ಮಂದಿನೂಕಾಣಂಗಿಲ್ಲರೀ . ಹೌದ! ನನಗೆ ನನ್ನ ಅಪ್ಪನಿಂದ ಬಳುವಳಿಯಾಗ್ ಬಂದ ವಂಶಪಾರಂಪರಿಕವಾಗಿ ಬರಬಹುದಾದ ಕಾಚಬಿಂದು (ಗ್ಲಾಕೋಮಾ ) ಕಾಯಿಲೆ ಬಂದೇತ್ರಿ ನನ್ ಕಣ್ಣಿಗೇ. ಅದ್ರ ನಿನ್ನಮಗನ್ನ ಯಾಕ ಕಳ್ಲಿದ್ರಿ?.
ರಾಮಣ್ಣ ಡಾಕ್ಟನ್ನ ದಿಟ್ಟಿಸಿ ನೋಡಿ ಸಾಹೇಬ್ರ ನಂಗೆ ಕಣ್ಣು ಕಾಣಾ೦ಗಿಲ್ಲ ಅ೦ತ ನನ್ನ ಮಗನಿಗೆ ಗೊತ್ತಿಲ್ಲ ರೀ. ಅವನಿಗ್ ಗೊತ್ತದ್ರಾ ಆಜೋಬಾಜು ಮಕ್ಕಳಿಗೆಲ್ಲ ಹೇಳ್ಕೊಂಡು ಬರ್ಥಾನ ಆದ್ರಾ ನಂಗೆ ಅವನು ಹೇಳ್ಕೊಂಡು ಬಾರ್ಥಾನ ಅಂತ ಬ್ಯಾಸ್ತ ಇಲ್ಲ ಕರೆ. ಆದ್ರ ಮತ್ತ ಆಡ್ಕೊಳ್ತಾರೆ ಅಂತೇಳಿ ಭಯ. ಮತ್ತ ಇವನು ಎಲ್ಲಿ ನನ್ನ ಬಿಟ್ಟುಹೊದ್ರೆ ಅ೦ತ ಕಳ್ಲಸಕೇಳಿವ್ರಿರೀ ನಂಗರ ಕಣ್ಣು ಇಲ್ಲಾ ಮೊದ್ಲೇ ಒಬ್ಬ ಮಗನ್ನ ಕಳ್ಳೋದ್ದಿನ್ರೀ ಸಾರ, ಅವ ಇದ್ದಿದ್ರೆ ನಂಗೆ ಎರಡು ಕಣ್ಣಿಲ್ಲ ಅ೦ತ ವಿಚಾರನ ಮಾಡ್ತಿರ್ಲಿಲ್ಲ ನನ್ನ ಇಬ್ಬರು ಮಕ್ಕಳು ಎರಡೂ ಕಣ್ಣಾಗಿರ್ತಿದ್ರು ನಂಗ. ಡಾಕ್ಟ್ರು ಏನಾಗಿತ್ತು ನಿನ್ ಮಗನ್ಗೆ , ರಾಮಣ್ಣ ಸುಮಾರು 6 ವರ್ಷದ ಹಿಂದೆ ನಾನು ನನ್ನ ಹೆಂಡತಿ ಇಬ್ಬರು ಮಕ್ಕಳ್ದೊತೆ ನಮ್ಮ ಜೀವನ ಚಲೋನಡಿಯಕಾತಿತ್ರಿ ಆಗ ಯಾರ್ ಕೆಟ್ಟ್ ಕಣ್ಣು ಬಿತ್ತೋ ಗೊತ್ತಿಲ್ಲ ನಂಗೆ ,ಆಗ ಅವನಿಗೆ 12 ವರ್ಷ ಮಕ್ಕಳ ಜೋಡಿ ಆಟ ಆಡ್ಕೊಂಡ್ ಬೆಳಿಯೋ ವಯಸ್ಸದ್ರಿ. ಒಂದು ದಿನ ಅವಂಗೆ ಶ್ಯಾಲೆಗೆ ಆಟಾ ಆಡುವಾಗ ಅವನ ಕಿಶೆದಾಗಿನ ರೊಕ್ಕಾ ಕೆಳಗೆ ಬಿದ್ದಾಗ ಅವನ್ನ ಅರಿಸ್ಕೊಳ್ಳಕರ ಕುರುಡು ಕಾಂಚಾಣ ಅರುಸ್ಕೊಳೋ ಅಂತ ಅವನ್ನ ದೋಗಸ್ತರೆಲ್ಲ ನಿನ್ನಪ್ಪನಿಗೆ ಕಣ್ಣಿಲ್ಲ ಕುರುಡ ನಿನ್ನಪ್ಪ ಅ೦ತ ಎಲ್ಲರು ಅವನನ್ನ ಇಯಾಳುಸಿದ್ರಂತ ಅದ ಯಾಚನೆಗಾ, ಮನೆಗೆ ಬರ್ಬೇಕಾರ ದಾರಿಯಲ್ಲಿ ಬರ್ತಿದ್ದ ಟ್ರಕ್ (ಲಾರಿ ) ಗೆ ಅಡ್ಡಹೋಗಿ ಟ್ರಕ್ ಮ್ಯಾಲೆ ಹತ್ತಿ ಹೋಗಿತ್ರಿ ಅವನ್ ಪ್ರಾಣ ಹಾರಿತ್ರಿ ಅದ್ರಿಂದ ಮಗನ ನೆನಪು ಕಾಡ್ತದ ಅ೦ತ ಆ ಊರನ್ನ ಬಿಟ್ಟು ಬಂದೀವ್ರಿ.
ಡಾಕ್ಟ್ರು ಕಣ್ಣು ತು೦ಬಿದ್ದವೂ |… ರಾಮಣ್ಣಯಾಕ್ರೀ ಡಾಕ್ಟೇ ನಿಂಕಣ್ಣಗ ನೀರು ಬ೦ದದ .ಅಸೊತಿಗೆ ಡಾಕಿ, ಗೆ ಮನಿಗ್ ಹೋಬೇಕನ್ನೋದ ಮರೆತ್ತೇ ಹೋಗಿತ್ತು. ರಾಮಣ್ಣ ಯಾಕ್ ಡಾಕ್ಟೇ ನನ್ನ ಕಥಿ ಕೇಳಿ ನಿಮ್ ಕಣ್ಣಾಗ ನೀರು ಬಂತೇನ್ರೀ .ಹೌದುರೀ ರಾಮಣ್ಣ ನಿನಿಗೆ ಕಣ್ಣಿಲ್ಲ ಅಂದ್ರೂ ನಿನ್ನ ಮಕ್ಕಳ ಮ್ಯಾಗಿನ್ ಕಾಳಜಿ ನೋಡಿ ನಂಗೆ ಖುಷಿ ಆತ್ರಿ, ಇದ್ರ ನಿಂನಂಥ ತಂದೆ ಇರ್ಬೇಕು.
ನಿನ್ನ ಮಕ್ಕಳಿಗೋಸ್ಕರ ಎಲ್ಲ ನಿನ್ನ ಖುಷಿನೂ ತ್ಯಾಗ ಮಾಡಿ ಬದುಕು ನೆಡಸಾಕತ್ತೀ ಅದನ್ನ ನೋಡಿ ನನ್ನಕಣ್ಣು ತುಂಬಿ ಬಂದವರ್ರಿ ರಾಮಣ್ಣ ನಮ್ಮಕಣ್ಣುಗಳು ಕುರುಡಾದಮಾತ್ರಕ್ಕಾ ನಮ್ಮಕನಸುಗಳು ಕುರುಡಂಥ ಯಾಕ ಅನ್ಕ್ಯೋಬೇಕ್ರಿ. ರಾಮಣ್ಣ, ನಿಮ್ಮ ಬದುಕಿನಾಗ ನಿಮ್ಗ ಕಣ್ಣಿಲ್ಲ ಅಂದ್ರು ನಿನ್ನ ಮಕ್ಕಳನ್ನೇ ಕಣ್ಣು ಅನ್ಕೊಂಡಿ. ಆದ್ರ, ರಾಮಣ್ಣ ನನ್ನ ಬದುಕಿನ್ಯಗ ನನ್ನಮಗನಿಗೆ ಕಣ್ಣಿಲ್ಲಾ ಆದೇವ್ರು ನಮ್ಮ ಮಗನ್ ಬದುಕಿನ್ಯಾಗ ಆಟ ಹಾಡ್ಕಾದ್ರೀ , ನಂಗೆ ನೂರಾರು ಮಂದಿಗೆ ಕಣ್ಣು ಕೊಡೊ ಸಾಮರ್ಥ್ಯನ ಕೊಟ್ಟಾನ ಆದ್ರ ನನ್ನ ಮಗನ್ ಕಣ್ಣುಗಳನ್ನ ಕಿತ್ಕೊಂಡಾನ, ನನ್ನ ಒಬ್ಬನೆ ಮಗನ್ನ ಹುಟ್ಟು ಕುರುಡನ್ನಾಗಿ ಮಾಡ್ಯಾನ , ತಂದೆ ಪ್ರೀತಿ, ತ್ಯಾಗಗಳು ಅಂದ್ರ ಆಕಾಶದಷ್ಟೇ ವಿಶಾಲ ಸಾಗರದಷ್ಟು ಆಳ… ಇವೆರಡನ್ನೂ ಮೀರಿದ್ದು ತಂದೆ ಪ್ರೀತಿ ಅಪ್ಪನಿಗೆ ತನ್ನ ಮಕ್ಕಳ ಮೇಲೆ ಎಷ್ಟೇ ಪ್ರೀತಿ ಕಾಳಜಿ ಇದ್ರೂ ಕೆಲವುಪರಿಸ್ಥಿತಿಗಳಿಗೆ ಕಟ್ಟುಬಿದ್ದು ಅದನ್ನ ತೋರಿಸ್ಕೊಳೋಕಾಗ್ದೆ ತನ್ನೊಳಗೆ ಬಚ್ಚಿಟ್ಟರ್ಶಾನೇ ಯಾವ ಕಥೆ ಕಾದ೦ಂಬರಿಗಳಲ್ಲೂ ಅಚ್ಚು ಉಳಿಯದಂಗ ಯಾವ ಕವಿತೆ ಕವನಗಳ ನಡುವೆನೂ ತನ್ನ ಸುಳಿವೂ ಕೊಡದಂಗ ಎಲೆಮರೆಯಾಗಿನ ಕಾಯಂತೆ ಎಲ್ಲರ ಬದುಕಿನ್ಯಾಗು ಬಂದು ಹೋಗೋ, ಕಂಡು ಕಾಣದಂಗ ದೇವ್ರಾದವನೇ ಅವನೇ ಅಪ್ಪ .
ನಿಸ್ವಾರ್ಥ ಮನೋಭಾವವನ್ನ ಅರಿತು, ನಾವೆಲ್ಲ ಬಾಳಬೇಕಾಗ್ಯದ ಈ ಸಮಾಜದಲ್ಲಿ. ಇಂದಿಗೂ ತಂದೆ ತಾಯಿಯರನ್ನ ಕಡೆಗಣಿಸೋ ಮಕ್ಕಳಿದ್ದಾರೆ. ವಿನಃ ಮಕ್ಕಳನ್ನ ದೊರತಳ್ಳಿದ ತಂದೆತಾಯಿಗಳಿಲ್ಲ ನೋಡ್ರಿ ಇದಂತೂ ಕರೆ ಮಾತದಾ, ಮಕ್ಕಳಿಗೆ ಒಳ್ಳೆ ಜೀವನ ರೂಪಿಸೋ ಬರದಲ್ಲಿ ತನ್ನೆಲ್ಲಾ ಕನಸುಗಳನ್ನ ನೋವುಗಳ್ಳನ್ನ ತಾನೇ ನುಂಗಿಕೊ೦ಡು ಜೀವನವಿಡೀ ಶ್ರಮಿಸೋ ಜೀವ ಅಂದ್ರೆ ಅದಾ ಅಪ್ಪ.
ಇದನ್ನರಿಯದ ಮಕ್ಕಳಿಗೆ ಈ ಕಥೆ ಸ್ಪೂರ್ತಿ ಆಗಲಿ.
ಗೌರಿ ಸುತ
1 Comment
ಅಪ್ಪ ಅಂದ್ರೆ ಆಕಾಶ❤
Superb.. 😊