ಕತ್ತಲು ಒಳಗೋ, ಹೊರಗೋ!?
ಬೆಳಕು ಒಳಗೋ, ಹೊರಗೋ!?
ಕಾಡ ಗಾಢಾಂಧಕಾರದಲ್ಲಿ
ಸಾವಿರಾರು ಮಿಣುಕು ಹುಳುಗಳದ್ದೇ
ದೀಪದ ಮೆರವಣಿಗೆ!
ತನ್ನ ಮುಂದಿನ ಕತ್ತಲ ಸೀಳಿಕೊಂಡು
ಹಾರುವ ಈ ಪುಟ್ಟ ಹುಳು
ಹಿಂದುಳಿದವರಿಗೆ ಬೆಳಕಾಗಿದೆ!
ವಿಜ್ಞಾನಿಗಳು ರೇಡಿಯಂ ಅನ್ನು
ಕಂಡು ಹಿಡಿಯುವ ಮುನ್ನವೇ…
ಸೃಷ್ಟಿಕರ್ತನೇ ಜೀವ-ಜಂತುಗಳಲ್ಲಿ
ಅದನ್ನು ಇಟ್ಟು ಕಳಿಸಿದ್ದಾನೆ!
ಕತ್ತಲಲ್ಲಿ ಬದುಕುವವರಿಗೆ ಕಣ್ಣ ಬೆಳಕಾಗಿ,
ದಾರಿ ದೀಪವಾಗಿ!
ಹುಲಿ, ಬೆಕ್ಕು, ನಾಯಿ, ನರಿ
ತೋಳಗಳಂತಹ ಜೀವಿಗಳಲ್ಲಿ
ಕಣ್ಣಾಗಿಸಿದ್ದಾನೆ!
ಈ ಜಗವು ಹೀಗಿದ್ದರೂ ಗೀಜಗವು
ತನ್ನ ಗೂಡಲ್ಲಿ ಬೆಳಕಾಗಿಸಿಕೊಂಡದ್ದು
ಈ ಮಿಣುಕು ಹುಳುವನ್ನೇ!
ಶಕುನಿ ತಾ ತನ್ನ ತಂಗಿ ಗಾಂಧಾರಿಯ
ಕತ್ತಲ ಭಯ ಹೋಗಿಸಲು ಹುಡುಕ ಬಂದದ್ದು
ಈ ಬೆಳಕ ಹುಳುವನ್ನೇ!
ಪುರಾಣದ ಹಿನ್ನೆಲೆಯಿಂದ ಇಂದಿಗೂ
ನಮ್ಮೊಂದಿದ್ದು ಮಿಣುಕುತ್ತಲೇ ಇದೆ!
ಎಲ್ಲ ಕಾಲದ ಕತೆಗಳ ಮೇಲೆ
ಈ ಹುಳು ಮಿಣುಕು ಬೆಳಕ ಬೀರುತ್ತಲೇ ಇದೆ!
ತುಂಕೂರ್ ಸಂಕೇತ್
3 Comments
ಸುಂದರ.ಮಿಣಕು ಮಿಣಕಿದಹಾಗೆ
Good depth poems
Very natural line’s sir