ಕನಸಿನ ಬಿಗಿ
ಕನಸಿನ ಬಿಗಿ
ಬಿಗಿಯಾಗಿರಬೇಕು
ಸರಿ ಹೊತ್ತಲ್ಲ
ಬೆರಗಿನ ಸವಿ ನಿದ್ದೆಯ
ಕನಸಿನ ಸಿಹಿ ಇದ್ದರೂ
ಕೂಡ ಕನಸಿಗೆ ಬಿಗಿಯಿರಬೇಕು!
ಗೀಜಗದ ಗೂಡಿಂದ
ಮರಿ ಬಿದ್ದ ಸದ್ದು
ತಾಯಿ ಹಕ್ಕಿಯ ಕಿರಚು ಅತ್ಲಾಗಿರಲು
ಸವಿ ನಿದ್ದೆಗಿಲ್ಲ
ಭಾವನೆಯ ಗೊಡವೆ
ಮಂಪರಿನ ಸಿಹಿ ನಿದ್ದೆ
ನಿನ್ನಲ್ಲೇ ಇರಲು!
ಗಾಡಿಗಳ ಸೌಂಡಿನ ಸದ್ದು
ಕನಸು ಕೆಡಸುವ ರಾವಣ!
ಇಳೆ ಸಂಜೆಯಲಿ ಬಿಗಿಯಾಗಿರು
ಗೋದೂಳಿ ಸಂಜೆಯ ಕೆಮ್ಮಣ್ಣಿನ ಮಳೆಯ
ಹದ ತಂಗಾಳಿಗೆ ಬೆರಸಿ ಸವಿ ನಿದ್ದೆಯ ಕನಸು ಕೆಡಸುತ್ತಿರಲು ತರ ತರದ ಕರ್ತವ್ಯಗಳ ಜಾವ ‘ದ’
ಪಿಶಾಚಿಯ ಭಯ ಇದ್ದು
ಬಿಗಿಯಿದ್ದರೂ ಭಯವಿರಲಿ…
ಒಬ್ಬಂಟಿಯ ಕನಸು
ಸಲಗ ಕ್ಕಿರಬಹುದು
ನಿನ್ನ ಸವಿ ನಿದ್ದೆಗಲ್ಲ!
ಬಿದರು, ಕಬ್ಬು, ನಿನ್ನ ಕಾಲ್ ತೋಳಿಗಲ್ಲ
ಬಿಗಿಯಾಗಿರು ಇದು ಮುಚ್ಚಿಡುವ ಕನಸಲ್ಲ!
ಯಾರ ಸವಿ ನಿದ್ದೆ
ಗೀಜಗನ ಗೂಡು
ಕಾರಿನ ಸೌಂಡು
ಗೋದೂಳಿಯ ಸಂಜೆಯ ಹದ
ಇಲ್ಲಿ ಯಾರಿಗೂ ಹೊಸತಲ್ಲ
ಕು ಶಿ ಚಂದ್ರಶೇಖರ್