ಕನ್ನಡವ ಕಲಿತಿಕೊ
ಕನ್ನಡ ಕಲಿಯೊ ತಮ್ಮ,,
ನೀ ಯಾವುರಾದರೆ ನಮಗೇನು.?
ಕನ್ನಡವೇ ನಮ್ಮಮ್ಮ,,
ಕಲಿತರೆ ನೀನು ನಮ್ಮವನು.!!೧!!
ನಿಮ್ಮ ನಾಡಿನಲಿ ನೀನಾಗಿರು
ನಮ್ಮ ನಾಡಿದು ಬದಲಾಗು.
ಕಷ್ಟಪಡುವೆ ನೀ ಚೆನ್ನಾಗಿರು
ಕನ್ನಡ ನಾಡಿಗೆ ಋಣಿಯಾಗು.!!೨!!
ಕಷ್ಟಪಡುವ ಕೈಗಳನ್ನು
ಬಾಚಿ ಅಪ್ಪಿದೆ ಕರುನಾಡು
ಕೊಟ್ಟಿದೆ ಗಾಳಿ,ನೀರುಗಳನು
ಕನ್ನಡ ಕಲಿತು ಕುಣಿದಾಡು.!!೩!!
ಕರುನಾಡೆಂದರೆ ಕೈಲಾಸ
ಮಾಡು ಕನ್ನಡದ ಸಹವಾಸ
ನಿನಗೆ ಇಲ್ಲ ಆಯಾಸ,,,
ನಿನ್ನವರಿಗೆ ಇಲ್ಲ ಉಪವಾಸ.!!೪!!
ಹೇಳಿ ಕೊಡಲು ನಾವು ಇರುವೆವು
ನಿಮ್ಮಯಾ ಜೊತೆ ಗೆಳೆಯರಾಗಿ.
ಕನ್ನಡ ಕಲಿತರೆ ನಾವು ಬರುವೆವು
ನಿಮ್ಮ ಊರಿಗೆ,ನಿಮ್ಮವರಾಗಿ.!!೫!!
ಹೇಗೆ ಪ್ರಸಾದ್
ಕುದೂರು ಲಕ್ಕೇನಹಳ್ಳಿ