ಕರುಣಾಳು ಪರಮೇಶ(ಕುಸುಮ ಷಟ್ಪದಿ)

ಕರುಣಾಳು ಪರಮೇಶ
(ಕುಸುಮ ಷಟ್ಪದಿ)

ಕರುಣಿಸೋ ಪರಮೇಶ
ಕರುಣೆಯನು ತೋರಿಸೋ!
ಕಂಭಸುತ ಕರುಣಾಳು ಕಾಪಾಡು ಬಾ|
ಕಡುಕಷ್ಟ ಪಡುತಿಹೆನು
ಕಾಣುತಿಹೆ ನೀನಿಂದು
ಕಡುಲೋಭಿ ಜಿಪುಣನಾ ಕಾಪಾಡಿದೆ||. ೧||

ಕಡುಬಡವ ಕುಚೇಲನ
ಕರ ಪಿಡಿದು ಕಾಪಾಡಿದೆ
ಕನಕನಿಗೆ ಕಿಂಡಿಯಲಿ ಮೊಗವನ್ನು ತೋರ್ದೆ|
ಕಾಪಾಲಿ ಶಿವನನ್ನು
ಕಂಟಕದಿ ನೀ ಸಲಹಿದೆ
ಕಡುಕಷ್ಟ ಪಡುತಿರುವೆ ಕಾಪಾಡು ನೀ||. ||೨||

ಮೊರೆಯಿಟ್ಟ ಪಾಂಚಾಲಿ
ಮಾನವನು ಉಳಿಸಿದೇ
ಮದನಪಿತ ಮಾಧವನೆ ಕರುಣಾಸಿಂಧು|
ಮೋಹಿನಿಯೆ ಸುಧೆಯಂಚಿ
ಮೋಹವನು ಬೀರಿದಳೆ
ಮೋಹನ ನಾಗಶಯನನೆ ಕರುಣಾಳು|| ||೩||

ನಾಗರಾಜು.ಹ.
ಬೆಂಗಳೂರು

Related post

1 Comment

  • ಸಾಹಿತ್ಯ ಮೈತ್ರಿ ಡಾಟ್ ಕಾಂ. ಸಂಸ್ಥಾಪಕರಾದ ಶ್ರೀ ಚಂದ್ರು ರವರಿಗೆ ನನ್ನ ಕವನ ಪ್ರಕಟಣೆಗಾಗಿ ಹೃತ್ಪೂರ್ವಕ ಧನ್ಯವಾದಗಳು ಮಿತ್ರರೇ!!

Leave a Reply

Your email address will not be published. Required fields are marked *