ಕರುಣಾಳು ಬಾ ಬೆಳಕೆ

ಕರುಣಾಳು ಬಾ ಬೆಳಕೆ

ಸಿರಿಯ ಪಂಜರವ ಹರಿದೊಗೆದು
ಸುಖದ ಮೂಲವ ಹುಡುಕುತ
ಬೋಧಿ ವೃಕ್ಷದಡಿ ತಪವಗೈದು
ದಿವ್ಯ ಜ್ಞಾನವನು ಪಡೆದರು ಬುದ್ಧ

ಅಳುವವರ ಕಂಬನಿಯೊರೆಸಲು
ವರ್ಗ ವರ್ಣ ಲಿಂಗ ಭೇದಗಳಳಿಸಲು
ಗುಡಿಸಲೊಳಿರುವವರ ಹುಡುಕುತ
ನಡೆದರು ಕರುಣಾಮೂರ್ತಿ ಬುದ್ಧ

ಕೊಲ್ಲಲಿಲ್ಲ ನೀವು ಪಾಪಿಗಳನು
ದ್ವೇಷಿಸಲಿಲ್ಲ ನೀವು ಕೋಪಿಗಳನು
ಕಿತ್ತೊಗೆದಿರಿ ನೀವು ಪಾಪಿಗಳ
ಮನದಾಳದ ಕೊಳೆತ ಕಸವನು

ದುಃಖದ ಮೂಲ ಆಸೆಯ ಬಿಡಿಸಿ
ಶುದ್ಧಾಚರಣೆಯ ದೀಕ್ಷೆಯ ನೀಡಿ
ಜ್ಞಾನಾರ್ಥಿಗಳಿಗೆ ಜ್ಞಾನ ದಾಸೋಹ
ಆರಂಭಿಸಿದ ವಿಶ್ವಗುರು ಬುದ್ಧ

ಜ್ಞಾನದ ಸುದೀಪ ಹೊತ್ತಿಸಿ
ಅಜ್ಞಾನದ ತಮವ ಓಡಿಸಿದ
ಕರುಣಾಳು ಬೆಳಕು ಬುದ್ಧ
ಮತ್ತೊಮ್ಮೆ ಅವತರಿಸಿ ಬನ್ನಿ

ಡಾ. ಗುರುಸಿದ್ಧಯ್ಯಾ ಸ್ವಾಮಿ
ಅಕ್ಕಲಕೋಟ ಮಹಾರಾಷ್ಟ್ರ
ಮೊಬೈಲ್ 9175547259

Related post