ಕಾಲಮಾನದ ಸತ್ಯ
ಕಾಲವು ನಿಂತಲಿ ನಿಲ್ಲದೆ
ಓಡಿ ವರುಷವೊಂದು ಉರುಳಿದೆ!
ಕಂಡ ಕನಸುಗಳು ಕರಗದೆ..
ಮನದಲಿ ಹಾಗೇ ಉಳಿದಿದೆ!!
ಕಾಲವದು ಕಾಲಿಲ್ಲದೆಯೂ ಸಾಗಿ
ಗಮ್ಯದೆಡೆಗೆ ರೊಯ್ಯನೆ ಓಡಿದೆ!
ತನ್ನದೇ ಹಠವೆಂಬಂತೆ ನುಗ್ಗಿ..
ಅದನು ತಡೆದ ಕರಗಳನು ದಾಟಿದೆ!!
ಕಾಲವೆನ್ನಲು ಅದು ನಡೆದು ಓಡಿ
ಸಮಯವೆನಲು ಮತ್ತೆ ಕಾಡಿದೆ!
ಹೊಸತನವನರಸಿ ದಿಕ್ಕುಗಳಲಿ ಸುತ್ತಾಡಿ..
ಕಡೆಗೆ ಬಿಡದೆ ಗುರಿಯ ಮುಟ್ಟಿದೆ!!
ಕಾಲವನು ತಡೆವ ಶಕ್ತಿ
ನೀ ಹೇಳು ಜಗದಿ ಯಾರಿಗಿದೆ!
ಮುಂದಡಿಯಿರಿಸಿ ಸಾಗಿದೆ ಅಳುಕದೆ…
ಹಿಂದಕೆ ಕಾಲವೆಂದೂ ಚಲಿಸಲಾರದೆ!!
ಸುಮನಾ ರಮಾನಂದ