ಕಾಲವಾದಾಗ…..

ಕಾಲವಾದಾಗ…..
ಕಾಲನೆಂಬ ರೈಲಿನೊಳಗೆ
ಕುಳಿತು ನಾವು ಚಿಂತಿಸುತ್ತ
ನೆನೆದು ನಮ್ಮ ನೋವು ನಲಿವು
ನಮ್ಮ ನಡೆಯು ಎತ್ತಲೋ!!
ಓಡುತಿತ್ತು ರೈಲು ತಾನು
ಎಲ್ಲರೊಳಗೆ ಒಬ್ಬ ನಾನು
ಅವನ ಊರು ಯಾವುದಿಹುದೊ
ಇವನ ಪಯಣ ಎಲ್ಲಿಗೋ!!!
ಬಂದಿತೆನಲು ಅವನ ಊರು
ತಲುಪಿದಾಗ ಇವನ ಸೂರು
ನಾನು ಮಾತ್ರ ಎಳೆಯುತ್ತಿದ್ದೆ
ನನ್ನ ಬಾಳ ತೇರನು!!
ಅವನು ಇವನು ಮತ್ತು ನಾನು
ಇಳಿಯುತಿರಲು ನಮ್ಮ ಊರು
ಬೇರೆ ಬೇರೆ ಜನರು ಬಂದು
ಏರುತಿರಲು ಬಂಡಿಯ!!
ಇವರು ಅವರು ಮತ್ತೆ ಯಾರೊ
ಏರುತಿರಲು ಅವನ ರೈಲು
ಕಾಲನೊಬ್ಬ ನಗುತಲಿದ್ದ
ಅವನ ಕಾರುಬಾರಲಿ!!

ಸುನೀಲ್ ಹಳೆಯೂರು