ಜಾಡಮಾಲಿ
ಮುರಿದು ಮೂಲೆಗುಂಪಾದ
ನನ್ನ ಕಳೆದಿರುಳ ಕನಸುಗಳ
ಕಸಗುಡಿಸಿ ಹಾಕಲು
ಉದ್ದುದ್ದ ಕಿರಣಗಳ
ಪೊರಕೆ ಹಿಡಿದು
ಮೊದಲ ದಿಸೆಯಲ್ಲಿ
ಕಾಣಿಸಿಕೊಳ್ಳುತ್ತಾನೆ
ಬೆಳಿಗ್ಗೆಯ ಜಾಡಮಾಲಿ
ಸೂರ್ಯ
ಮಾಯಾ
ಹೆಂಡ ಕುಡಿದ
ಮಂಗನ ಮಂಗತ್ವ
ಹೆಚ್ಚಾಗುತ್ತದೆ
ಆದರೆ ಹೆಣ್ಣು ಕಂಡ
ಮನುಷ್ಯನ ಮನುಷ್ಯತ್ವ
ಮಾಯವಾಗುವುದೇಕೆ ?
ಡಿ ಎನ್ ಸುರೇಶ್
ಹವ್ಯಾಸಿ ಪತ್ರಕರ್ತರು