ಕೇಳೇ ಗೆಳತಿ…..
ಸಾಹಿತ್ಯ ಮೈತ್ರಿ ಇವಳು ಸಹ
ನನ್ನ ಗೆಳತಿ…..
ಅದೆಷ್ಟು ಸೊಗಸಾದ ಗೆಳತನ
ಅವಳ ಜೊತೆಗಿನ ನನ್ನ ಒಡನಾಟ
ಎಷ್ಟು ಮಧುರ….
ಈಗ ಅವಳಿಗೆ ತುಂಬಿದೆ ವರ್ಷ
ಆ ಹರುಷವ ಹಂಚುವೆ ನಾ ನಿನ್ನ ಜೊತೆ….
ಎಷ್ಟು ಸ್ವಾರಸ್ಯ ಅವಳೊಡನಾಟದಲ್ಲಿ…
ನೋವು ನಲಿವುಗಳ ಸಂಗಮ.
ಬಗೆ ಬಗೆಯ ಲೇಖನ ಕವಿತೆ , ಶುಭಾಶಯಗಳ
ಆಗರ, ಅವಳ ಒಡಲು..
ಒಂದಕ್ಕಿಂತ ಒಂದು ಭಿನ್ನ
ಚಿತ್ರಗಳಂತೂ ಅವಳ ಭಾವಗಳ
ಸಾರವನ್ನೇ ಸಾರುತ್ತವೆ…..
ಗೆಳತಿ…
ಸಾಹಿತ್ಯ ಮೈತ್ರಿಯ ಪರಿಚಯವಾದದ್ದೇ
ನಿನ್ನಿಂದ….
ಅವಳ ಸಹವಾಸ ಮಾಡಿಸಿದ ನಿನಗೆ
ಅವಳ ಕತೃ ಗಳಿಗೆ ನನ್ನ ನಮನ
ಇನ್ನು ಮುಂದೆ ಮುಂದೆ ಹರಡಲಿ
ಅವಳ ಕೀರ್ತಿಪತಾಕೆ…
ಎಂಬ ಹಾರೈಕೆ
ಅವಳ ಈ ಗೆಳತಿಯಿಂದ.
ದಿವ್ಯ. ಎಲ್. ಎನ್. ಸ್ವಾಮಿ