ಕ್ಯಾನ್ಸರ್ ಪೀಡಿತರ ಆಶಾಕಿರಣ – ಹರಕ್‌ಚಂದ ಸಾವ್ಲಾ

ಕ್ಯಾನ್ಸರ್ ಪೀಡಿತರ ಆಶಾಕಿರಣ – ಹರಕ್‌ಚಂದ ಸಾವ್ಲಾ

ಇತ್ತೀಚಿನ ದಿನಗಳಲ್ಲಿ ದಿನಬೆಳಗಾಗುವುದರೊಳಗೆ ಕೆಲವರು ಏನೇ ಸಾಧನೆ ಮಾಡದಿದ್ದರು ಹೀರೋಗಳಾಗಿ ಬಿಟ್ಟಿರುತ್ತಾರೆ. ಆದರೆ ಅದೆಷ್ಟೋ ಮಹತ್ತರವಾದ ಸಾಧನೆ ಮಾಡಿಯೂ ಮುಖ್ಯವಾಹಿನಿಗೆ ಬರದ ಅದೆಷ್ಟೋ ಹೀರೋಗಳು ನಮ್ಮ ಮಧ್ಯದಲ್ಲಿದ್ದಾರೆ. ಅಂಗವಿಕಲರ, ರೋಗಿಗಳ, ಬಡವರ ಹಾಗೂ ಅನಾಥರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿರುವ ಸಮಾಜ ಸೇವೆಯಲ್ಲೆ ಜೀವನದ ಸಾರ್ಥಕತೆಯನ್ನು ಕಂಡುಕೊಂಡ ಬಹಳ ಮಂದಿ ನಮ್ಮ ನಡುವೆಯೆ ಇದ್ದಾರೆ. ಏಲೆಮರೆಯ ಕಾಯಿಯಂತೆ ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ಸೇವೆಸಲ್ಲಿಸುತ್ತಿದ್ದಾರೆ.

ಸುಮಾರು 30 ವರ್ಷ ವಯಸ್ಸಿನ ಹುಡುಗನೊಬ್ಬ ದಿನವೂ ಮುಂಬ್ಯೆನ ಟಾಟ ಕ್ಯಾನ್ಸರ್ ಆಸ್ಪತ್ರೆಯ ಮುಂಬಾಗದ ಪಾದಚಾರಿ ಮಾರ್ಗದಲ್ಲಿ ನಿಂತು ತಮ್ಮ ಜೀವನದ ಕೊನೆಯ ದಿನಗಳನ್ನು ಎಣಿಸುತ್ತಿರುವ ರೋಗಿಗಳು ಹಾಗೂ ಅವರನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂದು ಹೆಣಗುವ ಸಪ್ಪೆ ಮೋರೆ ಹಾಕಿಕೊಂಡು ಓಡಾಡುವ ರೋಗಿಗಳ ಸಂಭಂದಿಕರನ್ನು ನೋಡಿದಾಗ ಆ ಯುವಕನ ಕರಳು ಚುರಕ್ ಎನ್ನುತ್ತಿತ್ತು.

ಆ ಆಸ್ಪತ್ರೆಗೆ ಬರುತ್ತಿದ್ದ ಬಹಳಷ್ಟು ಮಂದಿ ಬಡರೋಗಿಗಳಾಗಿರುತ್ತಿದ್ದರು,ಬೇರೆ ಬೇರೆ ಊರುಗಳಿಂದ ಬರುತ್ತಿದ್ದ ಅವರಿಗೆ ಅಲ್ಲಿ ಯಾರನ್ನು ಸಂಪರ್ಕಿಸಬೇಕು, ಏನು ಮಾಡಬೇಕೆಂದೆ ತೊಚುತ್ತಿರಲ್ಲಿಲ್ಲ! ಉಳಿಯಲು ಸ್ಥಳವಿಲ್ಲಾ!! ಹೊಟ್ಟೆಗೆ ಊಟವಿಲ್ಲಾ, ಚಿಕೆತ್ಸೆಗೆ ಹಣ ಮೊದಲೆ ಇಲ್ಲಾ!! ಇದನೆಲ್ಲ ನೋಡಿದ ಆ ಯುವಕ ಖಿನ್ನನಾಗುತ್ತಿದ್ದ, ಮನೆಗೆ ಬಂದು ಇವರಿಗೆಲ್ಲಾ ಏನಾದರೂ ಸಹಾಯ ಮಾಡಬೇಕೆಂದು ಯೋಚಿಸುತ್ತಿದ್ದ. ಹಗಲಿರುಳೆನ್ನದೆ ಯೋಚಿಸಿದ ಮೇಲೆ ಕೋನೆಗೂ ಅವನಿಗೊಂದು ದಾರಿ ತೋರಿತು!!

ಚೆನ್ನಾಗೆ ನೆಡೆಯುತ್ತಿದ್ದ ತನ್ನ ಹೋಟೆಲ್‌ನ್ನು ಬಾಡಿಗೆಗೆ ನೀಡಿದನು, ಇದರಿಂದ ಬಂದ ಮುಂಗಡ ಹಣದಿಂದ ಟಾಟ ಕ್ಯಾನ್ಸರ್ ಆಸ್ಪತ್ರೆಯ ಮುಂಬಾಗದಲ್ಲಿ ಚಟುವಟಿಕೆಯೊಂದನ್ನು ಪ್ರಾರಂಬಿಸಿದನು, ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಹಾಗೂ ಅವರ ಸಂಬAದಿಕರಿಗೆ ಉಚಿತ ಊಟವನ್ನು ಕೊಡಲಾರಂಬಿಸಿದನು,ಮೊದಲಿಗೆ ಐವತ್ತು ಜನರುಬಂದು ಊಟಮಾಡುತ್ತಿದ್ದರು, ನಂತರ, ನೂರು, ಇನ್ನೂರು, ಮುನ್ನೂರು ಹೀಗೆ ಊಟಕ್ಕೆ ಬರುವ ಬಡರೋಗಿಗಳ ಸಂಖ್ಯೆ ಬೆಳೆಯುತ್ತಿದ್ದಂತೆ ಈ ಯುವಕನ ಆದರ್ಶವನ್ನು ನೋಡಿ ಇವನಿಗೆ ಸಹಾಯಹಸ್ತ ಚಾಚಿ ಅನೇಕರು ಮುಂದೆ ಬಂದರು, ವರ್ಷಗಳು ಕಳೆದವು, ಮುಂಬ್ಯೆನ ಬಿಸಿಲು, ಮಳೆಚಳಿ ಗಾಳಿ ಯನ್ನು ಲೆಕ್ಕಿಸದೆ ಇಲ್ಲಿಗೆ ಬರುವವರ ಸಂಖ್ಯೆ ಊಟಕ್ಕೆ ಬರುವವರ ಸಂಖ್ಯೆ ಏಳುನೂರನ್ನು ದಾಟಿತು!! ಇದನ್ನು ಪ್ರಾರಂಬಿಸಿದಾಗ ಈ ರೋಗಿಗಳಿಗೆ ಕೊಡುವ ಉಚಿತ ಅನ್ನದಾಸೋಹ ಇಲ್ಲಿಯವರೆಗೆ ಸುಲಲಿತವಾಗಿ ನೆಡೆದುಕೊಂಡು ಬರುತ್ತದೆಂದು ಇದನ್ನು ಪ್ರಾರಂಬಿಸಿದ ಆ ಯುವಕ ಶ್ರೀ ಹರಕ್‌ಚಂದ್ ಸಾವ್ಲಾರಿಗೂ ಗೊತ್ತಿರಲ್ಲಿಲ್ಲ. ಈಗ ಐವತ್ತೇಳು ವರ್ಷದ ಸಾವ್ಲಾ ಕಳೆದ ಇಪ್ಪತ್ತೆಳು ವರ್ಷದಿಂದ ಈ ಕಾಯಕವನ್ನು ಮಾಡಿಕೊಂಡುಬರುತ್ತಿದ್ದಾರೆ.ಇವರ ಈ ಕಾಯಕ ಇಲ್ಲಿಗೆ ನಿಂತಿಲ್ಲಾ!! ಕ್ಯಾನ್ಸರ್ ಪೀಡಿತ ಬಡರೋಗಿಗಳಿಗೆ ಉಚಿತವಾಗಿ ಔಷದವನ್ನು ಇವರುನೀಡುತ್ತಿದ್ದಾರೆ, ಅದಕ್ಕೊಸ್ಕರವಾಗಿಯೇ ಅವರು ಔಷದ ಬ್ಯಾಂಕ್ ಒಂದನ್ನು ಸಹ ಪ್ರಾರಂಬಿಸಿದ್ದಾರೆ. ಈ ಔಷದ ಬ್ಯಾಂಕನಲ್ಲಿ ಸ್ವಯಂಸೇವಕರಾಗಿ ಮೂರು ಜನ ವ್ಯೆದ್ಯರು ಹಾಗೂ ಮೂರು ಮಂದಿ ಔಷದ ನೀಡುವವರು ಕಾರ್ಯನಿರ್ವಹಿಸುತ್ತಾರೆ. ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಇವರು ಬೊಂಬೆಗಳ ಬ್ಯಾಂಕ್ ಒಂದನ್ನು ತೆರೆದ್ದಿದ್ದಾರೆ, 27 ವರ್ಷಗಳ ಕೆಳೆಗೆ ಪ್ರಾರಂಭವಾದ ಶ್ರೀ ಹರಕ್‌ಚಂದ ಜೀವನ್ “ಜ್ಯೋತಿ ಟ್ರಸ್ಟ್” ಅಲ್ಲದೆ ಇಂಥಹ ಸೂಮಾರು ೬೦ಕ್ಕೂ ಹೆಚ್ಚು ಸಮಾಜಸೇವಾ ಸಂಘ ಸಂಸ್ಥೆಗಳನ್ನು ಇವರು ನೆಡೆಸುತ್ತಿದ್ದಾರೆ.

ಕ್ಯಾನ್ಸರ್ ಪೀಡಿತರನ್ನು ಇವರು ಬಹಳ ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ, ಕಿಮೋಥಿರಪಿಗೊಳಗಾದ ಗಂಟಲು ಕ್ಯಾನ್ಸರ್ ರೋಗಿಗಳಿಗೆ ಆಹಾರ ಜೀರ್ಣವಾಗುವುದಿಲ್ಲವಾದ್ದರಿಂದ ಅವರಿಗೆ ಅರಿಶಿನ ಮಿಶ್ರಿತ ಹಾಲನ್ನು ವಿತರಿಸಲಾಗುತ್ತದೆ. 30 ವರ್ಷದ ಕೆಳಗೆ ಕ್ಯೆತುಂಬ ಸಂಪಾದನೆಯಿದ್ದ ಹೋಟೆಲನ್ನು ಬಿಟ್ಟು ಕೆಲಸಕ್ಕೆ ಸ್ಯೆಲ್ಯುಟ್ ಹೇಳಿ ಕ್ಯಾನ್ಸರ್ ಪೀಡಿತರ ನೆರವಿಗೆ ನಿಂತ ಹರಕ್ ಚಂದ್ 25 ಜನರನ್ನು ದತ್ತುಪಡೆದ್ದಿದ್ದಾರೆ.ಇವರೊಂದಿಗೆ ಕ್ಯೆ ಜೋಡಿಸಿರುವ ಸಮಾನಮನಸ್ಕ 150 ಜನ ಸ್ವಯಂಸೇವಕರ ನೆರವಿನಿಂದಲೆ ದಿನವೂ ಸೂಮಾರು 700 ಜನರಿಗೆ ಇವರು ಊಟ ಕೊಡುತ್ತಾರೆ, ಇದಕ್ಕೆ ಪ್ರತಿದಿನ ಇವರಿಗೆ ತಗಲುವ ವೆಚ್ಚ ಸೂಮಾರು ಹನ್ನೆರಡುಸಾವಿರ ರೂಪಾಯಿಗಳು.ಮಧ್ಯಾನ್ನವಾಗುತ್ತಿದ್ದಂತೆ ಟಾಟ ಕ್ಯಾನ್ಸರ್ ಆಸ್ಪತ್ರೆಯ ಮುಂದಿರುವ ಇವರ ಟ್ರಸ್ಟ್ ಮುಂದೆ ತಟ್ಟೆ ಲೋಟ ಹಿಡಿದು ಸಾಲುಗಟ್ಟಿ ನಿಲ್ಲುವವರ ದೃಶ್ಯ ಸಾಮಾನ್ಯ. ಗಬ್ಬುನಾಥ ಬೀರುವ ಕಿರಿದಾದ ರಸ್ತೆ, ಶಬ್ದ, ಸೊಳ್ಳೆಕಾಟ ಎಲ್ಲದರ ನಡುವೆಯೂ ಇಲ್ಲಿಗೆ ಬರುವ ಯಾವೊಬ್ಬ ರೋಗಿಯೂ ಖಾಲಿ ಹೊಟ್ಟೆಯಲ್ಲಿ ಮಲಗುವುದಿಲ್ಲ. ಈ ಜೀವನ್ ಜ್ಯೋತಿ ಟ್ರಸ್ಟ್ “ಖಿಚಡಿ ಮನೆ” ಎಂದೇ ಪ್ರಸಿದ್ದಿ. ಬೆಳಿಗ್ಗೆ 7:30 ಕ್ಕೆ ಇಲ್ಲಿ ರೋಗಿಗಳು ಸಾಲುಗಟ್ಟಿ ನಿಲ್ಲುತ್ತಾರೆ, ಬೆಳಗ್ಗೆ ತಿಂಡಿಗೆ ಕಿಚಡಿ, ರೊಟ್ಟಿ, ಹಾಲು ಹಾಗೂ ಹಣ್ಣು ವಿತರಿಸಲಾಗುತ್ತದೆ. ಮಧ್ಯಾನ್ನ ಸಣ್ಣ ಪ್ರರ್ಥನೆಯ ನಂತರ ಊಟವನ್ನು ವಿತರಿಸಲಾಗುತ್ತದೆ.

ಇವರ ಜೊತೆ ಇವರ ಮನೆಯವರು ಕೈ ಜೊಡಿಸಿದ್ದು ಬರಿ ಊಟದ ವ್ಯವಸ್ಥೆ ಅಲ್ಲದೇ ಉಚಿತ ಔಷದೋಪಚಾರ ಹಾಗೂ ಕ್ಯಾನ್ಸರ್ ನಿಂದ ಮೃತಪಟ್ಟ ವಾರಸುದಾರರಿಲ್ಲದವರಿಗೆ ಅಂತಿಮ ವಿದಿವಿಧಾನಗಳನ್ನು ಇವರು ನೇರವೇರಿಸುತ್ತಾರೆ.ಇವರ ಆದರ್ಶಕ್ಕೆ ತಲೆಬಾಗಿದ ಸ್ಥಳಿಯರು ಈ “ಜಿವನ್ ಜ್ಯೋತಿ” ಸಂಸ್ಥೆಗೆ ಮನೆಯ ಹಳೆ ನ್ಯೂಸ್ ಪೇಪರ್‌ಗಳನ್ನು ಹಾಗು ಹಳೆಯ ಬಟ್ಟೆಗಳನ್ನು ತಂದು ಕೊಡುತ್ತಾರೆ, ಅದನ್ನು ಮಾರುವ ಟ್ರಸ್ಟ್ ಬಂದ ದುಡ್ಡನ್ನು ಉಚಿತ ಊಟೋಪಚಾರಕ್ಕೆ ಬಳಸಿಕೊಳ್ಳುತ್ತದೆ. ಅಲ್ಲಿನ ಸುತ್ತಮುತ್ತಲಿನ ಜನರು ಇವರ ಜೊತೆ ಕೈ ಜೋಡಿಸಿದ್ದು ಯಾರದ್ದಾದ್ದರು ಮನೆಯಲ್ಲಿ ಹುಟ್ಟಿದ ಹಬ್ಬ, ಮದುವೆ ಮುಂತಾದ ಸಮಾರಂಭಗಳಿದ್ದಾಗ ಟ್ರಸ್ಟಿಗೆ ಸಿಹಿತಿಂಡಿಗಳನ್ನು ತಂದು ಊಟದ ಜೊತೆ ನೀಡುತ್ತಾರೆ.

ಇವರ ತಂಡದ ಸ್ವಯಂಸೇವಕರು ಚಿಕಿತ್ಸೆಯಿಂದ ಚೇತರಿಸಿಕೊಂಡವರನ್ನು ಅವರ ಮನೆಗೆ ತಲುಪಿಸುವವರೆಗೂ ಜವಾಬ್ದಾರಿಯನ್ನು ಹೊರುತ್ತಾರೆ. ಕ್ಯಾನ್ಸರ್ ಪೀಡಿತ ಚಿಕ್ಕ ಚಿಕ್ಕ ಮಕ್ಕಳನ್ನು ಕಂಡರೆ ಕರಳು ಕಿವುಚುತ್ತದೆ ಎನ್ನುವ ಸಾವ್ಲ ಇಂತಹ ಮಕ್ಕಳನ್ನು ಕರೆದುಕೊಂಡು ಸ್ವತಃ ಪ್ರವಾಸ ಹೋಗುವುದು ಅವರ ನೋವನ್ನು ಮರೆಸಲು ಮಕ್ಕಳಿಗೆ ವಿವಿದ ಚಟುವಟಿಕೆಗಳನ್ನು ನೆಡೆಸುತ್ತಾರೆ. ಇಂತಹ ಚಟುವಟಿಕೆಗಳಿಗಾಗಿ ಕ್ಯಾನ್ಸರ್ ಪೀಡಿತರ ಸಹಾಯಕ್ಕಾಗಿ ಹೆಚ್ಚು ಹೆಚ್ಚು ಜನರು ತಮ್ಮೊಂದಿಗೆ ಕೈ ಜೋಡಿಸಬೇಕೆಂದು ಅವರು ವಿನಂತಿಸುತ್ತಾರೆ. ಕಳೆದ 27 ವರ್ಷದಿಂದ ಲಕ್ಷಾಂತರ ಮಂದಿ ಕ್ಯಾನ್ಸರ್ ಪೀಡಿತರು ಹಾಗೂ ಅವರ ಸಂಬಂಧಿಕರಿಗೆ ಉಚಿತವಾಗಿ ಊಟ ಕೊಡುವುದು ಏಂದರೆ ಸಾಮಾನ್ಯವಾದ ಮಾತಲ್ಲಾ!!

ಇಪ್ಪತ್ತು ವರ್ಷದಲ್ಲಿ 200 ಟೆಸ್ಟ್ ಮ್ಯಾಚ್ ಗಳನ್ನು, ನೂರಾರು ಏಕದಿನಪಂದ್ಯಗಳನ್ನು ಆಡಿದ , ನೂರಾರು ಶತಕಬಾರಿಸಿ ಮೂವತ್ತುಸಾವಿರ ರನ್ ಗಳಿಸಿದ ಮಾತ್ರಕ್ಕೆ ಸಚಿನ್ ತೆಂಡುಲ್ಕರನ್ನು ದೇವರೆನ್ನುವ ಲಕ್ಷಾಂತರ ಮಂದಿ ಇದ್ದಾರೆ, ಅದರೆ ಯಾವುದೆ ಸ್ವಾರ್ಥವಿಲ್ಲದೆ ಸ್ವಹಿತವಿಲ್ಲದೆ ಕ್ಯಾನ್ಸರ್ ಪೀಡಿತರಿಗೆ ಸಹಾಯ ಮಾಡುತ್ತಿರುವ ಹರಕ್ ಚಂದ್ ದೇವರೆಂದರೆ ಅತಿಶಯೋಕ್ತಿಯಾಗಲಾರದು. ಕೋಟ್ಯಂತರ ಭಕ್ತರು ದೇವರನ್ನು ಹುಡುಕಿಕೊಂಡು ಫಂಡರಾಪುರ, ತಿರುಪತಿ ತಿಮ್ಮಪ್ಪ,ಶಿರಡಿಯಲ್ಲಿ ದೇವಸ್ಥಾನಗಳಲ್ಲಿ ದೇವರನ್ನು ಹುಡುಕಿಕೊಂಡು ಹೋಗುತ್ತೇವೆ ಆದರೆ ಅಲ್ಲೆಲ್ಲ ನಮಗೆ ದೇವರ ಮೂರ್ತಿಯ ದರ್ಶನವಾಗಬದುದೇ ಹೊರತೊ, ನಿಜವಾದ ದೇವರದ್ದಲ್ಲಾ, ಸಾವ್ಲರಂತಹ ರೂಪದಲ್ಲಿ ದೇವರು ನಮ್ಮ ಮಧ್ಯೆ ಇದ್ದರು ಡೊಂಗಿ ಬಾಬಗಳ, ಬಾಪುಗಳ, ಮಹರಾಜ್‌ಗಳ ಗುರುಗಳ ಹಿಂದೆ ಹುಚ್ಚರಂತೆ ಅಲೆಯುತ್ತೇವೆ. ಕಳೆದ ಇಪ್ಪತ್ತೇಳು ವರ್ಷಗಳಲ್ಲಿ ಲಕ್ಷಾಂತರ ಮಂದಿ ಕ್ಯಾನ್ಸರ್ ಪೀಡಿತರು ಹಾಗೂ ಅವರ ಸಂಬಂಧಿಗಳು ಹರಕ್ ಚಂದ್ ಸಾವ್ಲರಲ್ಲಿ ದೇವರನ್ನು ಕಂಡಿದ್ದಾರೆ ಎಂದರೆ ತಪ್ಪಾಗಲಾರದು, ಐವತ್ತೇಳು ವರ್ಷವಾದರು ಇನ್ನೂ ಅದೇ ಜೀವನೋತ್ಸಾಹ ಹುರುಪಿನಿಂದ ಯುವಕರಂತೆ ಯಾವುದೇ ಫಲಾಪೇಕ್ಷೆ ಇಲ್ಲದೆ ಕ್ಯಾನ್ಸರ್ ಪೀಡಿತರ ಸೇವೆ ಮಾಡುತ್ತಿರುವ ಸಾವ್ಲರವರಿಗೆ ದೊಡ್ಡ ಸೆಲ್ಯುಟ್. ಇಂಥಹವರಲ್ಲವೇ ನಮ್ಮ ಮಧ್ಯೆ ಇರುವ ದೇವರುಗಳು!!

ಇವರ ಈ ಕಾಯಕದಲ್ಲಿ ನೀವು ಸಹಾಯ ಹಸ್ತ ಚಾಚಬೇಕೆಂದರೆ ಜೀವನ್ ಜ್ಯೋತ್ ಕ್ಯಾನ್ಸರ್ (ರೀ) ಟ್ರಸ್ಟ್ ದೂರವಾಣಿ 022-24153453 ಅಥಾವ www.jeevenjyot.in ವೆಬ್ಸೈಟ್ ನಲ್ಲಿ ಸಂಪರ್ಕಿಸಬಹುದು.

ಡಾ|| ಪ್ರಕಾಶ್ ಕೆ.ನಾಡಿಗ್

Related post

Leave a Reply

Your email address will not be published. Required fields are marked *