ಕ್ರೈಸ್ತಧರ್ಮೀಯರ ಕಾಶಿ-ವ್ಯಾಟಿಕನ್

ಕ್ರೈಸ್ತಧರ್ಮೀಯರ ಕಾಶಿ-ವ್ಯಾಟಿಕನ್

ಕಾರ್ಯನಿಮಿತ್ತ ಕಳೆದ ಮಾರ್ಚಿಯಲ್ಲಿ ಡೆನ್ಮಾರ್ಕ್‍ಗೆ ಹೋಗುವ ಅವಕಾಶ ಸಿಕ್ಕಿತ್ತು, ಜಾಸ್ತಿ ಸಮಯವಿಲ್ಲದ ಕಾರಣ ಯೂರೋಪಿನ ನಾಲ್ಕ್ಯೆದು ದೇಶಗಳನ್ನಾದರೂ ಸುತ್ತೋಣ ಎಂದು ಡೆನ್ಮಾರ್ಕ್,ಫ್ರಾನ್ಸ್,ಇಟಲಿ ಹಾಗೂ ವ್ಯಾಟಿಕನ್ ಪ್ರವಾಸ ಕೈಗೊಂಡಿದ್ದೆ.

ಪೀಸಾದಿಂದ ಹೋರಟು ರೋಮ್‍ನಲ್ಲಿ ಇಳಿಯುವ ಮೂಲಕ ಇಟಲಿಗೆ ಪಾದರ್ಪಣೆಮಾಡಿದ್ದೆ, ರೋಮಾಟರ್ಮಿನಿಗೆ ಬಂದು ಒಟ್ಟವಿಯಾನೋ ಸ್ಯಾನ್‍ಪ್ಯೆಟ್ರೊ ನಿಲ್ದಾಣದ ಕಡೆ ನೆಡೆದೆವು, ಒಟ್ಟವಿಯಾನೋ ಸ್ಯಾನ್ ಪ್ಯೆಟ್ರೊ ನಿಲ್ದಾಣದಲ್ಲಿ ಇಳಿದು ನೆಲಮಾಳಿಗೆಯಿಂದ ಮೇಲೆ ಬಂದರೆ ನೀವು ವ್ಯಾಟಿಕನ್ ದೇಶದಲ್ಲಿರುತ್ತಿರಿ. ರೋಮ್ ಹಾಗೂ ವ್ಯಾಟಿಕನ್ ಬೇರೆ ಬೇರೆ ದೇಶವಾದರೂ ಇಲ್ಲಿ ಗಡಿ ಸಮಸ್ಯೆಯಿಲ್ಲಾ!! ಪ್ರಪಂಚದ ಅತ್ಯಂತ ಚಿಕ್ಕ ದೇಶವಾದ ವ್ಯಾಟಿಕನ್ ರೋಮ್‍ನ ಭಾಗವಾಗಿದ್ದರೂ ಸ್ವತಂತ್ರ ದೇಶವಾಗಿದೆ. ಹಿಂದುಗಳಿಗೆ ಕಾಶಿ, ಮುಸಲ್ಮಾನರಿಗೆ ಮಕ್ಕಾ- ಮದಿನವಿದ್ದಂತೆ ಕ್ರೈಸ್ತಧರ್ಮೀಯರಿಗೆ ವ್ಯಾಟಿಕನ್ ಪವಿತ್ರ ಕ್ಷೇತ್ರ. ಕ್ರೈಸ್ತ ಧರ್ಮಗುರುಗಳು ಇಲ್ಲೇ ವಾಸಿಸುತ್ತಾರೆ. ಒಂದು ಕಿ.ಮಿ. ವಿಸ್ತೀರ್ಣಕ್ಕಿಂತ ಕಡಿಮೆ ಇರುವ ಈ ದೇಶದ ಜನಸಂಖ್ಯೆ ಅಬ್ಬಬ್ಬಾ ಎಂದರೆ ಒಂದು ಸಾವಿರವಿರಬಹುದು, ಈಗಿನ ಕ್ರೈಸ್ತ ಧರ್ಮಗುರುಗಳಾದ ಪೋಪ್ ಜಾನ್ ಪಾಲ್ ಇಲ್ಲೆ ವಾಸವಾಗಿದ್ದಾರೆ ಸ್ವಿಸ್ ದೇಶದ ಪೋಲಿಸ್ ಪಡೆಯನ್ನು ಈ ದೇಶ ಸುರಕ್ಷತೆಗಾಗಿ ಬಳಸಿಕೊಳ್ಳುತ್ತದೆ. ಆಳೆತ್ತರದ ಕಟ್ಟುಮಸ್ತಾದ ಆಕರ್ಷಕವಾದ ಉಡುಗೆ ತೊಟ್ಟ ಪೋಲಿಸ್ ಪಡೆ ಇಲ್ಲಿ ಸದಾ ಗಸ್ತು ತಿರುಗುತ್ತಿರುತ್ತದೆ. ವ್ಯಾಟಿಕನ್ ದೇಶದಲ್ಲಿ ಸಿಸ್ಟ್ಯೆನ್ ಚರ್ಚ್, ಸಂತಪೀಟರ್ ಚೌಕ, ಸಂತ ಪೀಟರ್ ಚರ್ಚ್ ಹಾಗು ಸಂತ ಪೀಟರ್ ಕೋಟೆ ನೋಡುವಂತಹ ಜಾಗಗಳಾಗಿದೆ.

ಸಿಸ್ಟ್ಯೆನ್ ಚರ್ಚ್

ವ್ಯಾಟಿಕನ ಮ್ಯೂಸಿಯಂನ ಒಂದು ಭಾಗವಾಗಿರುವ ಇದು 1471 ರಿಂದ 1484 ರವರೆಗೆ ಧರ್ಮಗುರುವಾಗಿದ್ದ ನಾಲ್ಕನೇ ಪೋಪ್ ಸಿಕ್ಸಟ್ಸ ಹೆಸರಿನಲ್ಲಿ ಕಟ್ಟಲಾಗಿದೆ. ಈ ಚರ್ಚಿನ ಓಳಗೋಡೆಗಳಲ್ಲಿ ಉತ್ಕೃಷ್ಟವಾದ ಚಿತ್ರಗಳನ್ನು ರಚಿಸಲಾಗಿದೆ, ಮುಖ್ಯದ್ವಾರದ ಎದುರಿನ ಗೋಡೆಯಲ್ಲಿ ಖ್ಯಾತ ಚಿತ್ರಕಾರ ಮೈಕಲ್ ಏಂಜಲೋ ರಚಿಸಿರುವ “ಲಾಸ್ಟ್ ಜಡ್ಜ್ ಮೆಂಟಿನ” ಚಿತ್ರವಂತೂ ನೋಡುಗರನ್ನು ಮನಸೂರೆಗೊಳ್ಳುತ್ತದೆ. ಉತ್ತರದ ಗೋಡೆಯಲ್ಲಿ ಏಸುಕ್ರಿಸ್ತನ ಜೀವನ ಚರಿತ್ರೆಯನ್ನು ಚಿತ್ರಿಸಿದ್ದರೆ, ದಕ್ಷಿಣದ ಗೋಡೆಯಲ್ಲಿ “ಮೊಸೆಸ್” ನ ಕಥೆಗಳನ್ನು ಚಿತ್ರಿಸಲಾಗಿದೆ, ಆದರೆ ಇಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವುದು ಮೈಕಲ್ ಏಂಜಲೋ ಮೇಲ್ಚಾವಣಿಯಲ್ಲಿ ಬರೆದಿರುವ ಸುಂದರ ಚಿತ್ರಗಳು, ವರ್ಷದ 365 ದಿನಗಳು ಈ ಚರ್ಚ್ ಪ್ರಾರ್ಥನೆಗಾಗಿ ತೆಗೆದಿರುತ್ತದೆಯಲ್ಲದೆ ಖಾಯಂ ಅಗಿ ಹಾಡುವ ವಾದ್ಯವೃಂದ ಇಲ್ಲಿ ಇದೆ. ಇದೇ ಜಾಗದಲ್ಲಿ ಪೋಪರ ಆಯ್ಕೆ ನೆಡೆಯುತ್ತದೆ, ಚುರ್ಚಿನ ಓಳಗೆ ಉದ್ದನೆಯ ಚಿಮಣಿ ಇದ್ದು ಇದು ಚರ್ಚಿನ ಮೆಲ್ಚಾವಣಿಯಿಂದ ಹೊರಗೂ ಚಾಚಿದೆ, ಪ್ರತಿಬಾರಿ ಹೊಸ ಪೋಪರ ಆಯ್ಕೆಯಾಗುತ್ತಿದ್ದಂತೆ ಇದರಿಂದ ರಂಗುರಂಗಿನ ಹೊಗೆಯನ್ನು ಬಿಡಲಾಗುತ್ತದೆ.

ಸಂತ ಪೀಟರ್ ಚೌಕ

ಸಿಸ್ಟ್ಯೆನ್ ಚಾಪೆಲ್‍ನಿಂದ ಅರ್ಧ ಕಿ.ಮೀ. ನೆಡೆದು ಬಂದರೆ ಸಿಗುವುದೇ ಸಂತ ಪೀಟರ್ ಚೌಕ, ಸಂತ ಪೀಟರ್ ಚರ್ಚಿನ ಎದುರು ಇರುವ ಚೌಕಾಕಾರದ ವಿಶಾಲವಾದ ಜಾಗ ಇದಾಗಿದ್ದು ಅರ್ಧ ಚಂದ್ರಾಕೃತಿಯಲ್ಲಿ 284 ದಂತಾಕೃತಿಯ ಡೊರಿಕ್ ಮಾದರಿಯ ಕಂಬಗಳನ್ನು ನಿಲ್ಲಿಸಲಾಗಿದೆ, ಈ ಸ್ಥಂಭಗಳ ಮೇಲು ಸಹ ಮ್ಯೆಕೆಲ್ ಎಂಜೆಲೊ ಮತ್ತು ಬೆರ್ನಿನಿ ರಚಿಸಿರುವ ಚಿತ್ರಗಳಿದೆ, ಕ್ರಿಸಮಸ್ ಸಂಧರ್ಭದಲ್ಲಿ ವಿಶಾಲವಾದ ಸ್ಥಳ ಪ್ರಾರ್ಥನೆಗಾಗಿ ಜನರಿಂದ ಕಿಕ್ಕಿರಿದು ತುಂಬಿರುತ್ತದೆಯಲ್ಲದೇ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಲು ಪೋಪ್‍ಗಾಗಿ ಇಲ್ಲಿ ವೇದಿಕೆ ಇದ್ದು ಅಲ್ಲಿಂದಲೇ ಅವರು ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ, 1600 ರಲ್ಲಿ ಪ್ರಸಿದ್ದ ವಿನ್ಯಾಸಕಾರ “ಬೆರ್ನಿನೀ” ಅತ್ಯಂತ ಸುಂದರವಾಗಿ ಇದನ್ನು ನಿರ್ಮಿಸಿದ್ದಾನೆ, ಬೆರ್ನಿನೀ ಹೆಸರಿನಲ್ಲಿ ಇಲ್ಲೊಂದು ಗ್ರ್ಯಾನ್ಯೆಟ್ ನಿಂದ ನಿರ್ಮಿತವಾದ ಸುಂದರ ಕಾರಂಜಿಯು ಇದೆ, ಸೇಂಟ್ ಪೀಟರ್ ಚೌಕ ಶಿಲ್ಪಶಾಶ್ತ್ರದಲ್ಲೇ ಅತ್ಯುತ್ತಮ ಕಲಾಕೃತಿಯಾಗಿದ್ದು ಕಣ್ಮನ ಸೆಳೆಯುತ್ತದೆ, ಚರ್ಚಿನ ಮುಂದಿರುವ ವರ್ತುಳದಲ್ಲಿ ಉದ್ದನೆಯ ಸ್ಥಂಭವಿದ್ದು ಇಲ್ಲಿಂದ ಸೇಂಟ್ ಪೀಟರ್ ಚರ್ಚಿನ ಪೂರ್ಣ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಸಂತ ಪೀಟರ್ ಚರ್ಚ್

ಸಂತ ಪೀಟರ್ ಚೌಕದಿಂದ ಕಾಲು ಕಿಮೀ ನೆಡೆದರೆ ಸಂತ ಪೀಟರ್ ಚರ್ಚ ಸಿಗುತ್ತದೆ, ಇದು ಕ್ರೈಸ್ತ ಧರ್ಮಿಯರಿಗೆ ಅತಿ ಪವಿತ್ರವಾದ ಹಾಗು ಅತಿ ಮುಖ್ಯವಾದ ಚರ್ಚ್ ಇದಾಗಿದ್ದು ವ್ಯಾಟಿಕನ್ ಗುಡ್ಡದ ಮೇಲೆ ನಿರ್ಮಾಣವಾಗಿದೆ, ಕ್ರಿ.ಶ. 64ರಲ್ಲಿ ಸಂತ ಪೀಟರ್‍ನನ್ನು ಸಮಾಧಿಮಾಡಿದ ಸ್ಥಳವಿದಾಗಿತ್ತೆಂದು ಹೇಳುತ್ತಾರೆ, ಸಂತಪೀಟರ್ ಮೊದಲ ಪೊಪ ಧರ್ಮ ಗುರುವಾಗಿದ್ದರಲ್ಲದೇ ಏಸುಕ್ರಿಸ್ತನ ಮೊದಲ ಶಿಷ್ಯರಾಗಿದ್ದನು , ಕ್ರಿಶ 320ರಲ್ಲಿ ಇದರ ನಿರ್ಮಾಣ ಕಾರ್ಯ ಆರಂಭವಾಯಿತಾದರೂ ಕಾಲಕ್ಕೆ ತಕ್ಕಂತೆ ಮಾರ್ಪಾಡುಗಳಾಗುತ್ತ 17ನೆಯ ಶತಮಾನದವರೆಗೂ ಇದರ ನಿರ್ಮಾಣಕಾರ್ಯ ನೆಡೆದಿದೆ,1600 ರವರೆಗೂ ಬೆರ್ನೀನಿ ಈ ಚರ್ಚನ್ನು ಅಂದಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದನು. ಚರ್ಚಿನ ಎದುರಿಗೆ ಐದು ಪ್ರಮುಖ ಪ್ರವೇಶದ್ವಾರಗಳಿದೆ, ಈ ಐದು ದ್ವಾರಗಳು ಧಾರ್ಮಿಕ ಮಹತ್ವವನ್ನು ಪಡೆದ ದ್ವಾರಗಳಾಗಿದ್ದು ಪ್ರತಿ ಇಪ್ಪತ್ತು ವರ್ಷಗಳಿಗೊಮ್ಮೆ ಧರ್ಮಗುರು ಪೋಪರಿಂದ ಒಂದೊಂದು ದ್ವಾರಗಳು ತೆರೆಯಲ್ಪಡುತ್ತದೆ, ಒಂದೊಂದು ಪ್ರವೇಶದ್ವಾರವನ್ನು ದಾಟಿ ಹೋದರೆ ಪಾಪಪರಿಹಾರವಾಗುತ್ತದೆಂದು ನಂಬಿಕೆಇದೆ, ಭ್ಯವ್ಯವಾದ ಚರ್ಚಿನ ಓಳಭಾಗ 210 ಮೀಟರ ಉದ್ದ 114 ಮೀ ಅಗಲ ಹಾಗೂ 47 ಮಿ ಎತ್ತರವಿದೆ, ಪವಿತ್ರ ಶಿಲುಬೆ ಇರುವ ಜಾಗ 186 ಮೀ ಉದ್ದವಿದ್ದು ಹಾಗೂ 46 ಮೀ ಎತ್ತರವಿದೆ,136 ಅಡಿ ಎತ್ತರ ಹಾಗು 42ಮಿ ವ್ಯಾಸದ ಗುಮ್ಮಟವಿದ್ದು ಇದರಲ್ಲಿ ಮ್ಯೆಕೆಲ್ ಏಂಜಲೋ ಸುಂದರ ಚಿತ್ರಗಳನ್ನು ಬಿಡಿಸಿದ್ದಾನೆ, 491 ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋದರೆ ಇಡಿ ವ್ಯಾಟಿಕನ್ ದೇಶದ ವಿಹಂಗಮ ನೋಟವನ್ನು ಕಣ್ತುಂಬಿ ಕೊಳ್ಳಬಹುದು.22,000 ಚದರ ವಿಸ್ತೀರ್ಣ ಹೊಂದಿರುವ ಓಳಾಂಗಣದಲ್ಲಿ ಒಮ್ಮೆಲೆ 20,000 ಜನ ಪ್ರಾರ್ಥನೆ ಸಲ್ಲಿಸಬಹುದು.ಪ್ರಪಂಚದಲ್ಲಿ ಇದಕ್ಕಿಂತ ದೊಡ್ಡ ಚರ್ಚ ಬೆರೆಲ್ಲಿಯೂ ಇಲ್ಲಾ!

ಇಲ್ಲಿಗೆ ಬರುವ ಕ್ರ್ಯೆಸ್ತ ಯಾತ್ರಿಕರು ಸಂತ ಪೀಟರ್‍ನ ಕಂಚಿನ ವಿಗ್ರಹದ ಪಾದವನ್ನು ಚುಂಬಿಸುವ ಮೂಲಕ ಚರ್ಚನ್ನು ಪ್ರವೇಶಿಸುತ್ತಾರೆ, ಅಮೃತ ಶಿಲೆಯಲ್ಲಿ ನಿರ್ಮಿಸಿರುವ ಚರ್ಚಿನ ಇಂಚಿಂಚು ನೊಡಲು ಅರ್ಹವಾಗಿದೆ. ಚರ್ಚ್ ನೊಳಗೆ 40 ರೀತಿಯ ವಿವಿಧ ಭಂಗಿಯ ಬಾಲ ಏಸುವಿನ ಮೂರ್ತಿಗಳು ಮೊಸೈಕ್ ಹಾಗೂ ಲೋಹದ 39 ವಿವಿಧ ಸಂತರ ಮೂರ್ತಿಗಳು ಕಣ್ಮನ ಸೆಳೆಯುತ್ತದೆ. ಈ ಮೂರ್ತಿಗಳಲ್ಲಿ ಮುಖ್ಯವಾದವು ಮೈಕಲ್ ಏಂಜಲೋ ಕೆತ್ತಿದ ಮೇರಿ ಮತ್ತು ಕ್ರೈಸ್ತನ ಶಿಲ್ಪಕಲಾಕೃತಿ ಮನಸೆಳೆಯುತ್ತದೆ. ತನ್ನ ತೊಡೆಯ ಮೇಲೆ ಕ್ರಿಸ್ತನ ದೇಹವನ್ನು ಹೊತ್ತ ಮೇರಿಯ ಚಿತ್ರ ನೋಡುಗರನ್ನು ಮಂತ್ರಮುಗ್ದರನ್ನಾಗಿಸುತ್ತದೆಯಲ್ಲದೇ ಇದರಲ್ಲಿ ಮ್ಯೆಕೆಲ್ ಏಂಜೆಲೋನಾ ಹಸ್ತಾಕ್ಷರವಿದ್ದು, ಇದೊಂದೆ ಕಡೆ ಆತನ ಹಸ್ತಾಕ್ಷರ ಇರುವುದೆಂದು ಹೇಳಲಾಗುತ್ತದೆ. ಅಮೃತ ಶಿಲೆಯ ನೆಲ, ಮ್ಯೆಕೆಲ್ ಏಂಜಲೊ ಬಿಡಿಸಿರುವ ಗೊಡೆಯ ಮೇಲಿನ ಚಿತ್ತಾರಗಳು ಹಾಗು ಚರ್ಚನ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಈ ಚರ್ಚನ್ನು ಪೂರ್ತಿಯಾಗಿ ನೋಡಲು ಸೂಮಾರು 2 ಘಂಟೆ ಬೇಕಾಗುತ್ತದೆ, ಚರ್ಚಿನಿಂದ ಹೊರಬಂದಾಗ ಪೋಪ್‍ನ ನಿವಾಸಕ್ಕೆ ಹೋಗುವ ಮುಖ್ಯದ್ವಾರದಲ್ಲಿ ಸ್ಯೆನಿಕರ ವೇಷದಲ್ಲಿ ಎರಡು ಆಳೆತ್ತರದ ಗೊಂಬೆಗಳು ನಿಂತಿವೆ.

ಗೊಂಬೆಯಂತೆ ನಿಂತ ಆಳೆತ್ತರದ ಮನುಷ್ಯರಾರು?

ಅವರು ಯಾರು ಗೊತ್ತೆ? ಅವರು ದ್ವಾರಪಾಲಕರು, ಗೊಂಬೆಯನ್ನು ನಾಚಿಸುವಂತೆ ನಿಂತಿದ್ದ ಇವರು ಗೊಂಬೆಗಳಲ್ಲಾ, ನಿಜವಾದ ಮನುಷ್ಯರು, ಶಿಸ್ತಿನ ಸಿಪಾಯಿಗಳು, ಮೊದಲು ನಾನು ಅದು ಗೊಂಬೆಗಳೆಂದು ಅಂದುಕೊಂಡಿದ್ದೆ, ಮೊದಲೆ ಗೊಂಬೆಯಂತೆ ಸುಂದರವಾಗಿರುವ ಇಟಾಲಿಯನ್ನರು, ಇನ್ನು ಸೇವಕರಂತೆ ವೇಷಹಾಕಿ ನಿಲ್ಲಿಸಿದರೆ? ಯಾರೋ ಬಂದಿದ್ದರಿಂದ ಅವರು ಪಕ್ಕಕ್ಕೆ ಸರಿದಿದ್ದರಿಂದಲೇ ನಮಗೆ ಗೊತ್ತಾಗಿದ್ದು ಅವರು ನಿಜವಾದ ಮನುಷ್ಯರೆಂದು, ಅವರ ಕೆಲಸವೇ ಅದು, ಎಂಟು ಘಂಟೆಗಳ ಕಾಲ ವೇಷ ಹಾಕಿಕೊಂಡು ನಿಲ್ಲುವುದು, ಇದರಲ್ಲೂ ಪಾಳಿಯಲ್ಲೂ ಕೆಲಸ ಮಾಡುತ್ತಾರಂತೆ,ರೋಮಿನಲ್ಲಿ ಸರ್ಕಾರಿ ಕಛೇರಿಗಳ ಮುಂದೆ ಹೀಗೆ ನಿಂತ ದ್ವಾರಪಾಲಕರ ದೃಷ್ಯ ಸಾಮಾನ್ಯ!ಅವರು ಯಾರ ಕೂಡ ಮಾತನಾಡುವುದು ಇಲ್ಲಾ! ಸರ್ಕಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ, ಅಷ್ಟೇನೂ ವಿದ್ಯಾವಂತರಲ್ಲದ, ಕಟ್ಟುಮಸ್ತಾದ ದೇಹ ನೋಡಲು ಸುಂದರವಾಗಿರುವ ಕೆಲಯುವಕರು ಇಂಥಹ ಕೆಲಸಕ್ಕೆ ಅಲ್ಲಿ ಸೇರುತ್ತಾರೆ, ಏನೇ ಅಗಲಿ ನಿಂತಲ್ಲೇ ಏಂಟು ಘಂಟೆಗಳ ಕಾಲ ನಿಲ್ಲುವುದು ಎಂದರೆ ಇದಕ್ಕೆ ಮಾನಸಿಕ ತಯಾರಿಯೂ ಬೇಕು, ಅಂಥಿಥವರಿಗೆ ಇದು ಸಾದ್ಯವಿಲ್ಲಾ, ರಾಜರ ಕಾಲದಲ್ಲಿ ಹೀಗೆ ಸೈನಿಕರು ದ್ವಾರಪಾಲಕರು ನಿಂತಿರುತ್ತಾರೆಂದು ಕಥೆಯಲ್ಲಿ ಕೇಳಿದ್ದೆವು, ಅದರೆ ವ್ಯಾಟಿಕನ್‍ನಲ್ಲಿ ನಿಜವಾಗಿ ಅದನ್ನು ನೋಡುವ ಅವಕಾಶ ಸಿಕ್ಕಿತು.ಸರ್ಕಾರಿ ಕಛೇರಿಗಳ ಮಟ್ಟಕ್ಕೆ ಅನುಗುಣವಾಗಿ ಇವರ ವೇಷದಲ್ಲೂ ಅದರ ಬಣ್ಣದಲ್ಲೂ ವ್ಯಾತ್ಯಾಸವಿದೆ.ಅವರ ಪಕ್ಕ ಕೆಲವರು ನಿಂತು ¥sóÉೂೀಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು ಅವರು ಸ್ವಲ್ಪವೂ ಅಲೂಗಾಡದೆ ನಿಂತಿರುತ್ತಿದ್ದರು.

ಸಂತ ಏಂಜಲೊ ಕೋಟೆ

ಸಂತ ಪೀಟರ್ ಚರ್ಚ್‍ನಿಂದ 1 ಕಿಮೀ ನೆಡೆದು ಬಂದರೆ ಸಿಗುವುದೆ ‘ಸಂತ ಏಂಜಲೊ ಕೋಟೆ’, ವ್ಯಾಟಿಕನ್ ಸಿಟಿಯಿಂದ ಒಂದು ಕಿ.ಮೀ. ದೂರವಿರುವ ಇದು ರೋಮ್‍ಗೆ ಸೇರಿದ್ದರೂ ಚಾರಿತ್ರಿಕವಾಗಿ ವ್ಯಾಟಿಕನ್ ನಗರದೊಂದಿಗೆ ಇದು ಬೆರೆತುಕೊಂಡಿದೆ. ಶಾಂತವಾಗಿ ಹರಿಯುವ ಟೈಬರ್ ನದಿಯ ದಡದಲ್ಲಿರುವ ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕ್ರಿ.ಶ. 130 ರಿಂದ 139 ರ ಅವಧಿಯಲ್ಲಿ ಹ್ಯಾಡ್ರಿಯನ್ ಚಕ್ರವರ್ತಿ ತನ್ನ ಹಾಗು ತನ್ನ ಕುಟುಂಬದವರಿಗೊಸ್ಕರ ಇದನ್ನು ಟ್ಯೆಬರ್ ನದಿಯ ದಡದಲ್ಲಿ ಕಟ್ಟಿಸಿದ್ದನು. 89 ಮೀಟರ್ ಚೌಕಾಕಾರದ ಅಡಿಪಾಯದ ಮೇಲೆ 64 ಮೀಟರ ವ್ಯಾಸದ ಸಿಲಿಂಡರ್ ಆಕೃತಿಯಲ್ಲಿ ಈ ಕೋಟೆಯನ್ನು ಕಟ್ಟಲಾಗಿದೆ, ಕಾಲಕಾಲಕ್ಕೆ ಈ ಕೋಟೆಯನ್ನು ಅವಶ್ಯಕತೆಗೆ ತಕ್ಕಂತೆ ಬದಲಾಯಿಸುತ್ತಾ ಬಂದಿದ್ದಾರೆ. ಕ್ರಿ.ಶ 401ರಲ್ಲಿ ನೆಡೆದ ಯುದ್ದದಲ್ಲಿ ಸ್ಯೆನಿಕರಿಗೆ ಈ ಕೋಟೆ ರಕ್ಷಣೆಯೊದಗಿಸಿತ್ತು. ಪೋಪ್ ಅವರನ್ನು ರಕ್ಷಿಸಲು 14 ಶತಮಾನದಲ್ಲಿ ವ್ಯಾಟಿಕನ್ ಸಿಟಿಯಿಂದ ಇಲ್ಲಿಗೆ ಒಂದು ಸುರಂಗವನ್ನು ಮಾಡಲಾಗಿತ್ತು, ಪುನುರುಜ್ಜೀವನ ಕಾಲದಲ್ಲಿ ಪೋಪರಿಗೆ ಸಂಭಂದ ಪಟ್ಟ ಅಮೂಲ್ಯ ಬೆಲೆಬಾಳುವ ವಸ್ತುಗಳನ್ನು ಇಡಲು ಕೋಟೆಯ ಮಧ್ಯಬಾಗದಲ್ಲಿ ಗುಪ್ತ ಕೋಣೆಯೊಂದನ್ನು ನಿರ್ಮಿಸಲಾಗಿತ್ತು. ಆಪತ್ಕಾಲಕ್ಕೆ ಬೇಕಾಗುವ ಆಹಾರ ನೀರು , ಆಹಾರ ಧಾನ್ಯಗಳ ಹಗೇವು ಮುಂತಾದ ಅಗತ್ಯ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿಡುತ್ತಿದ್ದರು. ಅಪರಾಧಿಗಳನ್ನು ಸೆರೆಯಲ್ಲಿಡಲು ಕೂಡ ಈ ಕೋಟೆಯನ್ನು ಬಳಸಿಕೊಳ್ಳಲಾಗಿತ್ತು. ಕೋಟೆಯ ಮಧ್ಯಬಾಗದಲ್ಲಿರುವ ಸಣ್ಣ ಗೋಪುರದ ಮೇಲೆ ಈ ಕೋಟೆಯನ್ನು ಕಟ್ಟಿಸಿದ ಹ್ಯಾಡ್ರಿಯನ್ ಚಕ್ರವರ್ತಿಯ ಕಂಚಿನ ಪ್ರತಿಮೆ ಇತ್ತು, ಕ್ರಿಶ 590 ರಲ್ಲಿ ರೋಮ್‍ನಲ್ಲಿ ಬೀಕರ ಪ್ಲೇಗ್ ರೋಗ ಬಂದಾಗ ದೇವತೆಯೊಬ್ಬಳು ಆತ್ಮ, ಇಟಲಿ ಈ ಕೋಟೆಯ ಮೇಲೆ ಪ್ರತ್ಯಕ್ಷವಾಗಿ ಮಾಯವಾದಾಗ ಪ್ಲೇಗ್ ರೋಗ ಸಂಪೂರ್ಣ ನಿರ್ನಾಮವಾಯಿತಂತೆ ಹಾಗಾಗಿ ಈ ಕೋಟೆಗೆ ಈಗ ಸಂತ ಏಂಜಲೊ ಕೋಟೆ ಎಂದು ಮರುನಾಮಕರಣ ಮಾಡಲಾಗಿದೆ. ಇಟಲಿ ಉದಯವಾದ ನಂತರ ಈ ಕೋಟೆಯನ್ನು ಸ್ಯೆನಿಕರ ವಾಸಸ್ಥಳವಾಗಿ ಉಪಯೊಗಿಸಲಾಗುತ್ತಿತ್ತು. ರಾಷ್ಟ್ರೀಯ ವಸ್ತು ಸಂಗ್ರಹಾಲಯದ ಪಕ್ಕದಲ್ಲಿರುವ ವೃತ್ತಾಕಾರದ 400 ಮೆಟ್ಟಿಲುಗಳನ್ನು ಹತ್ತಿಕೊಂಡು ಹೋದರೆ ಕ್ರೈಸ್ತ ಗುರುಗಳು ಬಳಸುತ್ತಿದ್ದ ಸುಂದರ ಕೋಣೆಗಳು, ಸುಂದರ ಅಮೃತ ಶಿಲೆಯ ಮೂರ್ತಿಗಳು ಹಾಗು ಕೋಟೆಯ ಕೆಳಬಾಗದಲ್ಲಿ ಅಪರಾದಿಗಳನ್ನು ಶಿಕ್ಷೆ ಕೊಡುತ್ತಿದ್ದ ಸ್ಥಳಗಳಿವೆ.

ಪ್ರಕಾಶ್.ಕೆ.ನಾಡಿಗ್
ಶಿವಮೊಗ್ಗ

Related post

1 Comment

  • Dome of Vatican is largest in the world. Next is at Bijapur. It is the main authority of Catholic Christians. Not for Protestant Christian group

Leave a Reply

Your email address will not be published. Required fields are marked *