ಕ್ಷಮೆ
ಪರತಂತ್ರದ ಸೆರೆಯಲ್ಲಿದ್ದಾಗಲೂ
ಭಾರತ…ಹೀಯಾಳಿಸಿ ಕೊರಗಲಿಲ್ಲ..
ವೀರ ಕಲಿಗಳು .. ತಾಯ ರಕ್ಷಣೆಗೆ ನಿಂತರು..
ಪ್ರಾಣ ತೆತ್ತರು..ಇದು ದಿಟ..
ಆದರೇನು ಮಾಡುವುದು ತಾಯಿ ಭಾರತಿ..ಇಂದು ನಿನ್ನ
ಕುಡಿಗಳು ಮರೆತವು..ಇತಿಹಾಸ..
ತಾಯ ನಾಡನ್ನೆ ಜರಿದು
ಮಾಡಿತಿಹರು ಅಪಹಾಸ್ಯ..
ಶಿಕ್ಷಣವೆಂದರೆ ಇದೇನಾ??
ಶಿಕ್ಷಿತರೆಂದರೆ ಹೀಗೇನಾ??
ಮೂಡುತಿದೆ ಶಂಕೆ…..
ಕ್ಷಮಿಸಿ ಬಿಡು ತಾಯಿ ಮೌಲ್ಯಗಳ ಮರೆತದ್ದಕ್ಕೆ..
ಶಕ್ತಿ ಕೊಡು ನನ್ನಮ್ಮ.. ಸರಿದಾರಿಯಲಿ ನಡೆವುದಕೆ
ಸುಕೃತಿ ಕಂದ
1 Comment
Very nice 👌👍👌