ಗರ್ಭಕಂಠದ ಕ್ಯಾನ್ಸರ್‌ ( Cervical Cancer )

ಗರ್ಭಕಂಠದ ಕ್ಯಾನ್ಸರ್‌ ( Cervical Cancer )

ಗರ್ಭಕಂಠದ ದ್ವಾರ ಅಥವಾ ಅದರ ಸುತ್ತ ಮುತ್ತ ಕಂಡು ಬರುವ ತೀವ್ರ ಸ್ವರೂಪದ ಗೆಡ್ಡೆ ಆಗುವುದನ್ನು ಗರ್ಭ ಕಂಠದ ಕ್ಯಾನ್ಸರ್ ಎನ್ನುತ್ತಾರೆ. ಇದು ಗರ್ಭಕೋಶದ ಕ್ಯಾನ್ಸರ್ ಅಲ್ಲ ಗರ್ಭಕೋಶದಿಂದ ಮುಂದೆ ಅದರ ಕಂಠ ಇರುತ್ತದೆ ಅದನ್ನು ಸರ್ವಿಕ್ಸ ಎಂದು ಕರೆಯುತ್ತಾರೆ.

ರೋಗ ಲಕ್ಷಣಗಳು

ಗರ್ಭಕಂಠದ ಕ್ಯಾನ್ಸರ್‌‌ನ ಆರಂಭಿಕ ಹಂತಗಳು

1-ಸಂಪೂರ್ಣ ಲಕ್ಷಣ ರಹಿತವಾಗಿರಬಹುದು
2-ಸಾಧಾರಣ  ಯೋನಿ ಸ್ರಾವ,
3-ಸಂಪರ್ಕದಿಂದ ಉಂಟಾಗುವ ರಕ್ತಸ್ರಾವ ಅಥವಾ
4-ಯೋನಿಯ ದುರ್ಮಾಂಸದ (ಅಪರೂಪಕ್ಕೊಮ್ಮೆ) ಬೆಳವಣಿಗೆಯಿಂದ ಗುರುತಿಸಬಹುದಾಗಿದೆ.
5-ಲೈಂಗಿಕ ಸಂಭೋಗ ಕ್ರಿಯೆಯಲ್ಲಿ ತೊಡಗಿದಾಗ ಅಲ್ಪ ಪ್ರಮಾಣದ ನೋವು ಕಾಣಿಸಿಕೊಳ್ಳವುದು

ಮುಂದುವರಿದ ರೋಗದ ಲಕ್ಷಣಗಳು

1-ಮುಂದುವರಿದ ಹಂತದಲ್ಲಿ ಹೊಟ್ಟೆ, ಶ್ವಾಸಕೋಶ 
ಅಥವಾ ಇತರೆ ಭಾಗಗಳಲ್ಲಿ ಕ್ಯಾನ್ಸರ್‌ ಕಾರಕಗಳು ಕಾಣಿಸಿಕೊಳ್ಳುತ್ತವೆ.
2-ಹಸಿವೆ ಆಗದಿರುವುದು,
3-ತೂಕ ಕಡಿಮೆಯಾಗುವುದು,
4-ಬಳಲಿಕೆ,
5-ಅಸ್ಥಿ ಕುಹರದ( bone marrow )ನೋವು,
6-ಬೆನ್ನು ನೋವು,
7-ಒಂದು ಕಾಲು ಊದಿಕೊಳ್ಳುವುದು,
8-ಯೋನಿಯ ಅತಿಯಾದ ರಕ್ತಸ್ರಾವ,
9-ಮೂತ್ರ ಸೋರುವಿಕೆ
10-ಯೋನಿಯಿಂದ ಬಿಳಿ ಸ್ರಾವದ ಅನಿಯಂತ್ರಿತ ಸೋರುವಿಕೆ
11-ಮೂಳೆ ಮುರಿಯುವುದು ಉಲ್ಭಣಾವಸ್ಥೆಯ ಗರ್ಭಕಂಠ ಕ್ಯಾನ್ಸರ್‌‌ನ ಲಕ್ಷಣಗಳಾಗಿವೆ.

ಕಾರಣಗಳು

1-ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ಸೋಂಕು ಎಲ್ಲ ಗರ್ಭಕಂಠದ‌ ಕ್ಯಾನ್ಸರ್‌ ಪ್ರಕರಣಗಳಿಗೆ ಪ್ರಮುಖ ಕಾರಣವಾಗಿದೆ
ಈ ವೈರಸ್ ಗರ್ಭಕಂಠದ ಜೀವಕೋಶಗಳಲ್ಲಿ ವ್ಯತ್ಯಾಸ ಮೂಡುವಂತೆ ಮಾಡುತ್ತದೆ, 
2-ಒಬ್ಬರಿಗಿಂತ ಹೆಚ್ಚು ಸಂಗತಿಗಳೋದಾನೆ ಶರೀರಕ ಸಂಬಂಧ ಹೊಂದುವುದು
3-ಧೂಮಪಾನ, 
4-HIV ಸೋಂಕು, 
5-ಕ್ಲಮೈಡಿಯ ಸೋಂಕು,
6-ಆಹಾರ ಅಭ್ಯಾಸದ ಕ್ರಮ, 
7-ಸಂತಾನ ನಿಯಂತ್ರಣಕ್ಕಾಗಿ ಹಾರ್ಮೋನುಗಳ ನಿರಂತರ ಬಳಕೆ,
8-ಬಹು ಬಾರಿ ಗರ್ಭ ಧರಿಸುವುದು,
9-ಹಾರ್ಮೋನು ಔಷಧ  ಸೇವನೆ
10- ಗರ್ಭಕಂಠದ ಕ್ಯಾನ್ಸರ್‌ ಇದ್ದಿರಬಹುದಾದ ಕುಟುಂಬದ ಇತಿಹಾಸ.
11-ಅನುವಂಶಿಕ ಗುಣಗಳೂ
ಕ್ಯಾನ್ಸರ್ ಅಪಾಯವನ್ನು ಉಂಟುಮಾಡುವ ಸಾಧ್ಯತೆಗಳು ಇವೆ.

ಅಂಗಾಂಶ ಪರೀಕ್ಷಾ ವಿಧಾನಗಳು

1-ಪ್ಯಾಪ್ ಸ್ಮೀಯರ್ ಪರಿಣಾಮಕಾರಿ ಸ್ಕ್ರೀನಿಂಗ್ ವಿಧಾನವಾಗಿದೆ
2-ಗರ್ಭಕಂಠದ ಕ್ಯಾನ್ಸರ್‌ ಅಥವಾ ಆರಂಭಿಕ ಕ್ಯಾನ್ಸರ್‌ ಬದಲಾವಣೆಗಳನ್ನು ದೃಢೀಕರಿಸಲು ಗರ್ಭಕಂಠದ ಅಂಗಾಂಶ ತಪಾಸಣೆಯ ಅಗತ್ಯವಿದೆ. ಇದನ್ನು ಕಾಲ್ಪಸ್ಕೊಪಿಯಿಂದ ಮಾಡಬಹುದು,
3- ಲೂಪ್ ಎಲೆಕ್ಟ್ರಿಕಲ್ ಶಸ್ತ್ರಚಿಕಿತ್ಸಾ ವಿಧಾನದಿಂದ ಗರ್ಭಕಂಠದ ಒಳ ಪದರವನ್ನು ತೆಗೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ.
ಅಂಗಾಂಶ ಪರೀಕ್ಷೆಯು ತೀವ್ರ ತರದ ಗರ್ಭಕಂಠದ ಒಳಚರ್ಮದಲ್ಲಿ ಉಂಟಾಗುವ ಗೆಡ್ಡೆಗಳು ಇರುವುದನ್ನು ದೃಢೀಕರಿಸದರೆ ಮಾತ್ರ ಇವುಗಳನ್ನು ಮಾಡಲಾಗುತ್ತದೆ.

ರೋಗ ದೃಡೀಕರಿಸಿದ ನಂತರ ಸ್ಟೇಜ್ಗಳನ್ನಾಗಿ ವಿಂಗಡಿಸುತ್ತಾರೆ
ಹೀಗೆ ಮಾಡುವುದರಿಂದ ಚಿಕಿತ್ಸಾ ವಿಧಾನಕ್ಕೆ ಅನುಕೂಲ ಆಗುತ್ತದೆ. ಈ ರೋಗದ ಆರಂಭಿಕ ಹಂತಗಳಲ್ಲಿ ಚಿಕಿತ್ಸೆಯು ಶಸ್ತ್ರಚಿಕಿತ್ಸೆಯನ್ನೂ (ಸಾಮಾನ್ಯ ಶಸ್ತ್ರಚಿಕಿತ್ಸೆಸೇರಿದಂತೆ) ಹಾಗೂ ಮುಂದುವರೆದ ಹಂತಗಳಲ್ಲಿ ಕಿಮೊತೆರಪಿ ಹಾಗೂ ರೇಡಿಯೊತೆರಪಿ ಚಿಕಿತ್ಸೆಗಳನ್ನು ಒಳಗೊಂಡಿರುತ್ತದೆ.

ನಿಯಂತ್ರಣ ಲಸಿಕೆ HPV ಲಸಿಕೆಗಳನ್ನು 9 ರಿಂದ 26 ವರ್ಷದೊಳಗಿನ ಹುಡುಗಿಯರು ಹಾಗೂ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಪಡಿಸಲಾಗಿದೆ. ಯಾಕೆಂದರೆ ಈ ಲಸಿಕೆಗಳು ವ್ಯಕ್ತಿಯು ಸೋಂಕಿಗೀಡಾಗುವುದಕ್ಕಿಂತ ಮುಂಚೆ ನೀಡಿದರೆ ಮಾತ್ರ ಕಾರ್ಯ ಮಾಡಬಲ್ಲದು. ಗರ್ಭಕಂಠದಲ್ಲಿ ಕ್ಯಾನ್ಸರ್‌ಗೂ ಮೊದಲು ಆಗುವ ಗರ್ಭಕಂಠದಲ್ಲಿನ ಬದಲಾವಣೆಗಳ ಚಿಕಿತ್ಸೆಗಳಲ್ಲಿ ಕಾಂಡೋಮ್‌ಗಳ ಬಳಕೆಯು ಅನುಕೂಲವಾಗಬಲ್ಲವುವೀರ್ಯದಲ್ಲಿರುವ ಪ್ರಾಸ್ಟಗ್ಲ್ಯಾಂಡಿನ್‌‌ ಅಂಶವು ಗರ್ಭಕಂಠ ಮತ್ತು ಗರ್ಭಕೋಶದ ಗೆಡ್ಡೆಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ಹಾಗಾಗಿ ಕಾಂಡೋಮ್‌ ಬಳಸುವುದರಿಂದ ರೋಗಪೀಡಿತ ಸ್ತ್ರೀಯರಿಗೆ ಪ್ರಯೋಜನವಾಗುವ ಸಾಧ್ಯತೆಗಳಿವೆ ಎಂದು ಅಧ್ಯಯನವೊಂದು ಅಭಿಪ್ರಾಯ ಪಟ್ಟಿದೆಸತ್ವಯುತ ತರಕಾರಿ ಹಾಗೂ ಹಣ್ಣುಗಳು Vit A, vit C, vit ಎ, ಮೀನೆಣ್ಣೆ,ಫಾಕ್ ಆಸಿಡ್ carotinoids ಇವು ರೋಗ ನಿಯಂತ್ರಣಕ್ಕೆ ಸಹಕಾರಿ ಈ ಕ್ಯಾನ್ಸರ್ ಬಗ್ಗೆ ತಿಳುವಳಿಕೆ ಹರಡಿ ಮುನ್ನೆಚ್ಚೆರಿಕೆ ಕ್ರಮ ಕೈಗೊಂಡು,2 ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಂಡು ಎಚ್ಚರಿಕೆಯಿಂದ ಇರುವುದು ರೋಗ ತಡೆಯುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಡಾ ರುಕ್ಮಿಣಿ ವ್ಯಾಸರಾಜ

Related post