ಗಾಳವೆಂದರೆ ಅವಳ ಕುಡಿ ನೋಟ..

ಮೀನಿನಗಾಳ,
ಗಾಳವೆಂದರೆ ಅವಳ ಪಿಸುಮಾತು..
ಗಾಳವೆಂದರೆ..
ಅವಳ ಸೆರಗು ತೀಡಿ
ಬಂದ ತಂಬೆಲರ..ಘಮ..

ಗಾಳವೆಂದರೆ ಅವಳ ಹುಸಿ ಮುನಿಸು..
ಆ ಗಾಳಕ್ಕೆ ಸಿಕ್ಕಿ ಬಿಡಬೇಕು
ಎಂದು ಕನವರಿಸಿ
ಅವನು ಧಾವಿಸಿ ಬಂದಾಗ
ಬೆಸ್ತನೆದೆಯಲ್ಲಿ ಅವಳು ಸ್ವಾತಿಮುತ್ತು…..

ಸುಕೃತಿ ಕಂದ

Related post

Leave a Reply

Your email address will not be published. Required fields are marked *