ಕಲಿಕೆಯಲ್ಲಿ ತೊಡಗುವ ಮೊದಲು
ಶಿಷ್ಯಂದಿರು ಒಂದು ಮರದ ಕೊರಡು!
ಅದನು ಗುರುವು ತಮ್ಮಲ್ಲಿನ
ಅಪಾರ ಪಾಂಡಿತ್ಯ ಹಾಗೂ
ಶಿಷ್ಯನ ಮೇಲಿನ ಪ್ರೀತಿಯಿಂದ
ಸ್ಪರ್ಶಿಸಿ, ಸಲಹಿ, ಬೋಧಿಸಿ,
ಸಂರಕ್ಷಿಸಿ ಗಂಧದ ತುಂಡಾಗಿಸುತ್ತಾರೆ…
ಹಂತ ಹಂತವಾಗಿ ಅದರಲ್ಲಿ
ಸುಗಂಧವನ್ನು ತುಂಬಿಸುತ್ತಾರೆ.
ಇದು ಕೊರಡಲ್ಲವೆಂದೂ
ಸುಗಂಧಭರಿತ ಕೊರಡೆಂದೂ
ಶಿಷ್ಯನಿಗೆ ಅರ್ಥೈಸಿ
ತಿಳಿಯ ಪಡಿಸುತ್ತಾರೆ…
ಅಲ್ಲದೇ ನಿನ್ನ ಶಕ್ತಿಯ ಪ್ರಕಾರ
ಇದನ್ನು ತೇಯಿ
ತೇಯುತ್ತಲ್ಲೇ ಇರು.
ಎಷ್ಟೆಷ್ಟು ತೇಯುವಿಯೋ
ಅಷ್ಟಷ್ಟೂ ನಿನ್ನ ಪರಿಸರವು
ಸುಗಂಧಭರಿತವಾಗುವುದು
ಎನ್ನುವರು ಗುರು….
ಗುರುಭ್ಯೋ ನಮಃ 🙏
ತುಂಕೂರ್ ಸಂಕೇತ್
ಸಕಲ ಗುರುಗಳಿಗೆಲ್ಲಾ ಕೋಟಿ ನಮನ 🙏
1 Comment
ಈ ಲೇಖನ ನೋಡಿ ತುಂಬಾ ಸಂತೋಷವಾಯಿತು