ಚಿತ್ತರಂಗ – ಪುಸ್ತಕ ಬಿಡುಗಡೆ ಸಮಾರಂಭ ಏಪ್ರಿಲ್ 2

ಚಿತ್ತರಂಗ – ಪುಸ್ತಕ ಬಿಡುಗಡೆ ಸಮಾರಂಭ

ಕಾದಂಬರಿ: ಚಿತ್ತರಂಗ
ಲೇಖಕಿ : ಶ್ರೀಮತಿ ಆಶಾ ರಘು
ಬಿಡುಗಡೆ : ಏಪ್ರಿಲ್ 2 2023
ಸ್ಥಳ: ಅಕ್ಕಮಹಾದೇವಿ ಸಭಾಂಗಣ
ಕನ್ನಡ ಸಾಹಿತ್ಯ ಪರಿಷತ್ತಿನ ಆವರಣ,
ಚಾಮರಾಜಪೇಟೆ, ಬೆಂಗಳೂರು.
ಸಮಯ : 10:30

ಖ್ಯಾತ ಲೇಖಕಿ ಶ್ರೀಮತಿ ಆಶಾ ರಘು ರವರ ಹೊಸ ಕಾದಂಬರಿ “ಚಿತ್ತರಂಗ” ಬಿಡುಗಡೆಗೆ ಸಿದ್ದವಾಗಿದ್ದು ಮುಂದಿನ ಭಾನುವಾರ ಏಪ್ರಿಲ್ 2 ರಂದು ಬಿಡುಗಡೆಗೊಳ್ಳುತ್ತಿದೆ.

ಇದೊಂದು ಎಪ್ಪತ್ತು-ಎಂಭತ್ತರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಹೊಂದಿರುವ ಕಥೆಯಾಗಿದ್ದು. ಚಿತ್ರ ನಿರ್ದೇಶಕನೊಬ್ಬನ ಹಾಗೂ ಅವನೊಂದಿಗೆ ನಿಕಟ ಸ್ನೇಹವಲಯಕ್ಕೆ ಬರುವ ಕಲಾವಿದೆಯರ ಬದುಕಿನ ತೆರೆಮರೆಯ ಅಂತರಂಗ ಭಾವಗಳನ್ನು ಹೊಂದಿರುವ ಈ ಕೃತಿಗೆ ಬೆನ್ನುಡಿಯನ್ನು ಶ್ರೀಯುತ ಗಿರೀಶ್ ರಾವ್ ಅತ್ವಾರ್ (ಜೋಗಿ) ಯವರು ಬರೆದಿದ್ದಾರೆ. ಕಾದಂಬರಿಗೆ ಸೊಗಸಾದ ಮುನ್ನುಡಿಯನ್ನು ಖ್ಯಾತ ವಿಮರ್ಶಕರಾದ ಶ್ರೀಯುತ ಡಾ. ಎಚ್. ಎಸ್ ಸತ್ಯನಾರಾಯಣ ರವರು ಬರೆದಿದ್ದಾರೆ.

ಈ ಕೃತಿಯು ತಾ|| ಏಪ್ರಿಲ್ 2 2023 ರ ಭಾನುವಾರದಂದು ಬೆಂಗಳೂರಿನ ಚಾಮರಾಜಪೇಟೆಯ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ ಬೆಳಿಗ್ಗೆ 10:30 ಕ್ಕೆ ಬಿಡುಗಡೆಯಾಗಲಿದೆ. ಕಾದಂಬರಿಯನ್ನು ಹಿರಿಯ ಚಿತ್ರನಟರಾದ ಶ್ರೀಯುತ ಶ್ರೀನಿವಾಸ ಪ್ರಭು ರವರು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತರಾದ ಶ್ರೀಯುತ ಗಣೇಶ್ ಕಾಸರಗೋಡು ರವರು ಆಗಮಿಸಲಿದ್ದಾರೆ. ಹಿರಿಯ ಲೇಖಕರಾದ ಶ್ರೀಯುತ ಅಗ್ರಹಾರ ಕೃಷ್ಣಮೂರ್ತಿರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಾರೆ.

ಸಮಾರಂಭದಲ್ಲಿ ಕಾದಂಬರಿಯನ್ನು ಕೊಳ್ಳುವವರಿಗೆ ಒಳ್ಳೆಯ ರಿಯಾಯಿತಿಯು ಉಂಟು. ಈ ಕಾದಂಬರಿಯನ್ನು ತರಿಸಿಕೊಳ್ಲಲು ಓದುಗರು ರಘುವೀರ್ ಸಮರ್ಥ್ ರವರ ವಾಟ್ಸಪ್ ಸಂಖ್ಯೆ 9945939436 ಗೆ ಸಂಪರ್ಕಿಸಬಹುದು.

ಕಾದಂಬರಿ ಬಿಡುಗಡೆ ಸಮಾರಂಭಕ್ಕೆ ತಾವೆಲ್ಲರೂ ಆಗಮಿಸಿ ಶುಭ ಕೋರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸವಿನಯ ಪ್ರಾರ್ಥನೆ.

ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *