ಚಿತ್ರಲೋಕದ ಅಭಿಜಾತ ಮೇರು ಹುಣಸೂರು ಕೃಷ್ಣಮೂರ್ತಿ

ಚಿತ್ರಲೋಕದ ಅಭಿಜಾತ ಮೇರು ಹುಣಸೂರು ಕೃಷ್ಣಮೂರ್ತಿ

ಲೇಖಕರು: ಡಾ.ಡಿ.ಸತೀಶ ಚಂದ್ರ
ಪ್ರಕಾಶಕರು:ಪ್ರಗತಿ ಪ್ರಕಾಶನ, ಮೈಸೂರು
0821-4287558
9482640555

ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗವು ಕೂಡ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿವೆ ಮೂಕಿ ಚಲನಚಿತ್ರ ಯುಗದಿಂದ ಪ್ರಾರಂಭವಾದಂತ ಚಲನಚಿತ್ರ ರಂಗವು ಟಾಕಿ ಚಿತ್ರಗಳವರೆಗೆ ವಿವಿಧ ಮಜಲುಗಳನ್ನು ಕಂಡಿದೆ. ಪ್ರಸ್ತುತ ,ಹುಣಸೂರು ಕೃಷ್ಣಮೂರ್ತಿಯವರ ಕುರಿತಾದ ಪುಸ್ತಕ “ಚಿತ್ರಲೋಕದ ಅಭಿಜಾತ ಮೇರು ಹುಣಸೂರು ಕೃಷ್ಣಮೂರ್ತಿ” ಕೇವಲ ಹುಣಸೂರು ಕೃಷ್ಣಮೂರ್ತಿಯವರ ಕುರಿತಾದ ವ್ಯಕ್ತಿ ಚಿತ್ರಣವನ್ನು ಅಷ್ಟೇ ಅಲ್ಲದೆ ;ಚಲನಚಿತ್ರ ,ಅದರ ಮಹತ್ವ ;ಮೂಕಿಯಿಂದ ಟಾಕಿಯವರೆಗಿನ ಚಿತ್ರರಂಗದ ಬೆಳವಣಿಗೆ ವಿಜ್ಞಾನ ತಂತ್ರಜ್ಞಾನಗಳ ಬಳಕೆ ಸಂಗೀತ ಸಾಹಿತ್ಯ ಚಿತ್ರಕಲೆ ಹೀಗೆ ಹಲವಾರು ಪೂರಕ ಅಂಶಗಳನ್ನು ನಮ್ಮೆದುರಿಗೆ ಇಡುತ್ತದೆ.

ಪ್ರಸ್ತುತ ಕೃತಿ ಹುಣಸೂರು ಕೃಷ್ಣಮೂರ್ತಿಯವರನ್ನು ಕುರಿತಿದ್ದಾದರೂ ಇಡೀ ಕನ್ನಡ ಚಿತ್ರರಂಗದ ಐದು ದಶಕಗಳ ಕಾಲದ ಸಮಗ್ರ ಮಾಹಿತಿ ಈ ಪುಸ್ತಕದಲ್ಲಿ ದೊರಕುವುದು ವಿಶೇಷ.

ನಟನೆ ,ನಿರ್ದೇಶನ ,ನಿರ್ಮಾಣ ,ಚಿತ್ರಗೀತೆ ಹಾಗೂ ಸಂಭಾಷಣೆ ಹೀಗೆ ಎಲ್ಲಾ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅತ್ಯುತ್ತಮವಾದ ಚಿತ್ರಗಳನ್ನು ನಮಗೆ ಕೊಟ್ಟಿದ್ದಾರೆ ಶ್ರೀ ಹುಣಸೂರು ಕೃಷ್ಣಮೂರ್ತಿ ಅವರು.

ವೈವಿಧ್ಯಮಯ ಕಥಾವಸ್ತುಗಳನ್ನು ಒಳಗೊಂಡ ಹುಣಸೂರು ಕೃಷ್ಣಮೂರ್ತಿ ಅವರ ಚಿತ್ರಗಳು ಪೌರಾಣಿಕ, ಜಾನಪದ ಐತಿಹಾಸಿಕ ಹಾಗೂ ಸಾಮಾಜಿಕವಾಗಿ ಚಿತ್ರಕಥೆ ವಸ್ತುಗಳನ್ನು ಒಳಗೊಂಡು ಜನಮಾನಸದಲ್ಲಿ ನೆಲೆ ನಿಂತಿವೆ. ಪ್ರಸ್ತುತ ಪುಸ್ತಕದಲ್ಲಿ ಕನ್ನಡ ಚಲನಚಿತ್ರ ಸಾಹಿತ್ಯಕ್ಕೆ ಹುಣಸೂರು ಕೃಷ್ಣಮೂರ್ತಿಯವರ ನೀಡಿದ ಕೊಡುಗೆಯನ್ನು ವಿಸ್ತಾರವಾಗಿ ಅವಲೋಕಿಸಲಾಗಿದೆ.
ಅವರು ಬರೆದ ನಾನೂರಕ್ಕೂ ಹೆಚ್ಚು ಹಾಡುಗಳು ನಿರ್ದೇಶಿಸಿದ 40ಕ್ಕೂ ಹೆಚ್ಚು ಚಿತ್ರಗಳು ಹಾಗೂ ಅವರು ನಿರ್ಮಿಸಿದ ಹಲವಾರು ಚಿತ್ರಗಳು ಇವುಗಳ ಬಗ್ಗೆ ಲೇಖಕರು ಬೆಳಕು ಚೆಲ್ಲಿದ್ದಾರೆ.

ಹುಣಸೂರರು ರಚಿಸಿದ ಚಿತ್ರಗೀತೆಗಳಲ್ಲಿ ಮನರಂಜನೆಯ ಜೊತೆ ಜೊತೆಗೆ ಜವಾಬ್ದಾರಿಯುತ ವಿಚಾರಗಳನ್ನು ತಿಳಿಸುವ ಅಂಶಗಳನ್ನು ಲೇಖಕರು ಗುರುತಿಸುತ್ತಾರೆ. ದೇಶಪ್ರೇಮ ಮತ್ತು ಭಾಷಾ ಪ್ರೇಮದ ಜೊತೆ ಜೊತೆಗೆ ಸಾಹಿತ್ಯದ ಬಗ್ಗೆ ಹೆಚ್ಚು ತಿಳುವಳಿಕೆ ಮಾಡುವಂತೆ ಮಾಡಬೇಕಾದ ಕರ್ತವ್ಯ ಚೊಇತ್ರಸಾಹಿತಿ ಆದವನಿಗೆ ಇರಬೇಕು ವಿಚಾರವನ್ನು ಹುಣಸೂರು ಕೃಷ್ಣಮೂರ್ತಿಯವರು ತಮ್ಮ ಚಿತ್ರ ಸಾಹಿತ್ಯದಲ್ಲಿ ಸಾಬೀತುಪಡಿಸಿದ್ದಾರೆ ಎನ್ನುತ್ತಾರೆ ಲೇಖಕರು. ಅಂದಿನ ಚಿತ್ರಗೀತೆಗಳ ಹಾಗೂ ಅದರ ಸ್ವರೂಪದ ಸ್ಪಷ್ಟ ಚಿತ್ರಣನ್ನು ಲೇಖಕರು ಕಟ್ಟಿಕೊಡುತ್ತಾರೆ .
ಒಂದು ಚಲನಚಿತ್ರದ ಯಶಸ್ಸಿನ ಪಾಲಿನಲ್ಲಿ ಗೀತೆ ಎಷ್ಟು ಮುಖ್ಯವಾಗುತ್ತದೆ ಹಾಗೂ ಆ ಗೀತೆಗೆ ಇರುವ ಗಟ್ಟಿತನ ಎಷ್ಟು? ಎನ್ನುವುದನ್ನು ಅರಿತು ಸ್ವರ ಸಂಯೋಜನೆ ಪ್ರಾಸ ರಚನೆ ಕಥೆಯ ಊಟಕ್ಕೆ ಸಹಕಾರಿಯಾಗುವಂತೆ ಅವರು ಚಿತ್ರಗೀತೆಗಳನ್ನು ರಚಿಸಿದ ಬಗೆಯನ್ನು ತುಲನಾತ್ಮಕವಾಗಿ ಲೇಖಕರು ವಿವರಿಸುತ್ತಾರೆ.

ಕನ್ನಡ ಚಲನಚಿತ್ರ ಸಾಹಿತ್ಯ ಮತ್ತು ಚಿತ್ರರಂಗದ ವಿವಿಧ ಮಜಲುಗಳನ್ನು ತಿಳಿದುಕೊಳ್ಳ ಬಯಸುವ ಆಸಕ್ತರಿಗೆ ಈ ಪುಸ್ತಕ ಸಂಗ್ರಹಯೋಗ್ಯ.
ಇಂತಹ ಅತ್ಯುತ್ತಮ ಕೃತಿಯನ್ನು ಸಾಹಿತ್ಯಲೋಕಕ್ಕೆ ನೀಡಿದ ಶ್ರೀ ಸತೀಶ್ ಚಂದ್ರ ಅವರು ಅಭಿನಂದನಾರ್ಹರು.

ಸುನೀಲ್ ಹಳೆಯೂರು

Related post