ಚಿರತೆ – (Cheetha, Leopard, Jaguar, Panther)
ಒಮ್ಮೆ ಸ್ನೇಹಿತನೊಬ್ಬನಿಗೆ ಮೂರು ಚಿತ್ರಗಳನ್ನು ತೋರಿಸಿ ಇದೇನೆಂದು ಕೇಳಿದೆ.
ಮೂರು ಚಿತ್ರಗಳನ್ನು ಚಿರತೆ ಎಂದೇ ಹೆಸರಿಸಿದ ಹಾಗೂ ‘ಸರ್ ಇದೇನಿದು ತಮಾಷೆ’ ಮೂರು ಚಿರತೆಯಲ್ಲವೇ ಸರ್ ಎಂದ.
ನಾನು ಈ ಮೂರಕ್ಕೂ ಬೇರೆ ಬೇರೆ ಹೆಸರಿದೆ ಎಂದು ಹೇಳಿದೆ.
ಮಲೆನಾಡು ಕಡೆ ಇದನ್ನು ಚಿಟ್ಟೆ ಹುಲಿ ಅಂತಾನೂ ಕರೆಯುತಾರೆ. ಹಳದಿ ಮಿಶ್ರಿತ ಕಂದು ಬಣ್ಣದ ಪ್ರಾಣಿ ಚಿರತೆ. ಆದರೆ ಸಾಮಾನ್ಯವಾಗಿ ನಾವು ಕರೆಯುವುದು ಚಿರತೆಯೆಂದೇ ಇದರ ಮೂಲ ನಾಮ ಪ್ಯಾಂಥೇರಾ (Pantheras). ಹುಲಿ, ಚಿರತೆ, ಸಿಂಹ, ಹಾಗೂ ಅನೇಕ ಬೆಕ್ಕಿನ ಜಾತಿಯ ಪ್ರಾಣಿಗಳಿಗೆ Pantheras ಮೂಲ ನಾಮ.
ಸಾಮಾನ್ಯವಾಗಿ ಚಿರತೆಗಳನ್ನು ಕಂಡೊಡನೆ ಒಂದೇ ಮಾತಿನಲ್ಲಿ ಇದು ಚಿರತೆ ಎಂದುಬಿಡುತ್ತೇವೆ. ಆದರೆ ಚಿರತೆಗಳಲ್ಲಿ ಪ್ರಬೇಧಗಳಿವೆ.
ಚೀತಾ (Cheetha)
ಇವು ಗಾತ್ರದಲ್ಲಿ ಬೆಕ್ಕಿಗಿಂತ ಎರಡು ಪಟ್ಟು ಉದ್ಧ ಹಾಗೂ ಹಗಲ, ಮುಖ ಮಾತ್ರ ಸಣ್ಣದು ಬೆಕ್ಕಿನಂತೆ ಹಾಗೂ ಕಣ್ಣಿನ ಸುತ್ತ ನಮ್ಮ ರಾಮದೇವರ ನಾಮದಂತೆ ಒಂದು ಪಟ್ಟಿ ಹಾಗೂ ಮೈ ತುಂಬಾ ಸಣ್ಣಕಪ್ಪು ಚುಕ್ಕಿಗಳು.
ಇದರ ಗುರುತುವಿಕೆ ಅದರ ಮುಖ.
ಇದರ ವೇಗ ಬೆಳಕಿನ ವೇಗ (lightning Speed) ಅಂತಾನೆ ಹೇಳಬಹುದು.
ಇವು ಕಾಣಸಿಗುವುದು ಆಫ್ರಿಕಾ ಖಂಡದಲ್ಲಿ ಮಾತ್ರ.
ಲೆಪರ್ಡ್ (Leopard)
ನಮ್ಮ ಭಾರತದಲ್ಲಿ ಹಾಗೂ ಇಡೀ ಏಷ್ಯಾ ಖಂಡದ ತುಂಬಾ ಹೇರಳವಾಗಿ ಸಿಗುತ್ತವೆ.
ಇವು ಗಾತ್ರದಲ್ಲಿ ದೊಡ್ಡದು ನಾಲ್ಕು ಅಡಿ ಹಾಗೂ 5 ಅಡಿ ಒಮ್ಮೊಮ್ಮೆ ಏಳು ಅಡಿಗಳಸ್ಟು ಬೆಳೆದಿರುತ್ತವೆ.
ಇದರ ಗುರುತುವಿಕೆ ಮೈಮೇಲಿರುವ ವೃತಾಕಾರದ ಕಪ್ಪು ಚುಕ್ಕೆಗಳು.
ಜಾಗ್ವರ್ (Jaguar)
ಇವು ಗಾತ್ರದಲ್ಲಿ ಲೆಪರ್ಡ್ (Leopard) ತರ ಆದರೆ ಮೈ ತುಂಬಾ ಚೌಕಾಕಾರದ ಕಪ್ಪು ಚುಕ್ಕೆಗಳು, ಹಾಗೂ ಇದರ ಮೂಲ ಅಮೇರಿಕಾ ಖಂಡದ ಅಮೆಜಾನ್ ಕಾಡಿನಲ್ಲಿ ಮಾತ್ರ.
ಈ ಜಾತಿಯ ಇನ್ನೊಂದು ಜೀವಿ ಕರಿ ಚಿರತೆ (Black Panther)
ಇವು ಚಿರತೆಯ ಸಂತತಿಯೇ ಆದರೆ ಹಾರ್ಮೋನ್ ಗಳ ವ್ಯತಾಸದಿಂದ ನೂರರಲ್ಲಿ ಕೇವಲ 5 ಜೀವಿಗಳು ಈ ರೀತಿ ಹುಟ್ಟುತವೆ.
ಇದರ ಕುರಿತು ‘ಕೆನ್ನೆತ್ ಆಂಡರ್ಸನ್’ ರವರು ತಮ್ಮ ” ಬ್ಲ್ಯಾಕ್ ಪ್ಯಾಂಥರ್ಸ್ ಆಫ್ ಶಿವನಪಲ್ಲಿ ” ಕೃತಿಯಲ್ಲಿ ಬರೆದಿದ್ದಾರೆ.
ಸೃಷ್ಟಿ ವಿಸ್ಮಯದಲ್ಲಿ ಭಗವಂತನ ಕೃಪೆ ಅಪಾರ.
ಚಿರತೆ ಪ್ರಭೇದಗಳ ಬಗ್ಗೆ ಇವಿಷ್ಟು ಸಾಮಾನ್ಯ ಜ್ಞಾನ ಇನ್ನು ಬೇಕಾದಲ್ಲಿ ಅಂತರ್ಜಾಲ ಹುಡುಕಿದರೆ ಬೇಕಾದಷ್ಟು ಸಿಗುತ್ತದೆ. ವನ್ಯ ಜೀವಿಯ ಬಗ್ಗೆ ಸಾಮಾನ್ಯ ಜ್ಞಾನ ಪಡೆಯೋಣ ಹಾಗೂ ಪ್ರೀತಿಸೋಣ.
ಆಕೃತಿ ಅಂತರ್ಜಾಲದಲ್ಲಿ ಪ್ರಕಟವಾದ ನನ್ನ ಮೊದಲ ಲೇಖನ (ಮರುಪ್ರಕಟಣೆ)
ಕು ಶಿ ಚಂದ್ರಶೇಖರ್