ಗೀತಾಚಲಂ ಪ್ರಾಸಕ್ಕೆ ಹೆಚ್ಚು ಒತ್ತುಕೊಟ್ಟು ಬರೆಯುವ ಬರಹಗಾರ್ತಿ, ಹವ್ಯಾಸಕ್ಕಾಗಿ ಬರೆಯುತ್ತಿದ್ದರೂ ಹಲವು ಪ್ರಯೋಗಗಳನ್ನು ಮಾಡುತ್ತಾ ಅದರಲ್ಲೇ ಹೆಚ್ಚು ತೊಡಗಿಕೊಂಡಿರುತ್ತಾರೆ.
ರಂಗೋಲಿ
ರಂಗು ರಂಗಿನ
ರಂಗವಲ್ಲಿ
ಇತ್ತು ಮನೆಯ
ಅಂಗಳದಲ್ಲಿ
ಕಂಡೆ ನಾನು
ಬೆಳದಿಂಗಳಲ್ಲಿ
ಮುದ
ನೀಡಿತೆದೆಯಾಳದಲ್ಲಿ
ಬರೆದವರಾರು
ಈ ಚಿತ್ರವಿಲ್ಲಿ
ಎಂದಾಗ ಬಂದಳು
ಪುಷ್ಪವಲ್ಲಿ
ಚಿಂತೆ – ಚಿತೆ
ಅಂತೆ ಕಂತೆಗಳ
ಸಂತೆಯೊಳಗೆ
ಮಾರಲೊರಟೆ
ನನ್ನದೊಂದು ಚಿಂತೆ
ಕೊಳ್ಳುವವರಾದರೂ
ಬರಬಹುದೆಂದು
ಸಂಜೆ ತನಕ ಕಾದು
ಕುಂತೆ ಆಗ ನಾ ಅರಿತೆ
ನಾನು ಚಿತೆ ಏರುವವರೆಗೆ
ನನ್ನಲ್ಲೇ ಇರುತ್ತೆ ಚಿಂತೆ
ಪ್ರಕೃತಿಯ ಕೋಪ
ಹಾರಾಡುವಂತ ಹಕ್ಕಿಗೆ ನೆಲೆಯಲ್ಲಿ
ಹರಿಯುವಂತ ನದಿಗೆ ಕೊನೆಯೆಲ್ಲಿ
ಬೀಸುವಂತಹ ಗಾಳಿಗೆ ತಡೆಯೆಲ್ಲಿ
ಇರುವುದು ಒಂದು ನಿಯಮವಿಲ್ಲಿ
ಅದು…ಅಳತೆಯನ್ನು ಮೀರಿದರಲ್ಲಿ
ಪ್ರಕೃತಿಯ ಕೋಪವು ಕಾಣುವುದಲ್ಲಿ
ಗೀತಾ ಚಲಂ
ಚಿತ್ರಕೃಪೆ: ವಾಗ್ದೇವಿ ಹಾಗು ಗೂಗಲ್