ವಿಜ್ಞಾನ ಲೋಕ
ನಮ್ಮ ದೇಶ ಧಾರ್ಮಿಕಕೆ ಹೆಸರು
ಅಂತೆಯೇ ವೈಜ್ಞಾನಿಕಕೂ ಹೆಸರು|
ಕರೆಯಬಹುದು ವಿಜ್ಞಾನ ಲೋಕ
ಸದಾ ಅನ್ವೇಷಣೆ ಮಾಡುತಿಹರು||
ಆಪತ್ಧರ್ಮ
ಸಾಲ ಕೇಳುವಾಗ ಮಿತ್ರರು
ತಮ್ಮ ಕಷ್ಟಗಳ ತೋಡಿಕೊಳ್ಳುವರು|
ನಂಬಿಕೆಯಿಂದ ಇವರು
ಆಪತ್ಧರ್ಮವೆಂದು ಕೊಡುವರು||
ಚಿಂತೆ
ಸಾಲ ಕೊಟ್ಟವ ಕಾಲ ಕಳೆದಂತೆ
ಉಂಟಾಗುವುದು ಹಣದ ಚಿಂತೆ|
ಆತ ಜ್ಞಾಪಿಸುವ ಮರಳಿಸುವಂತೆ
ಆತಂಕ ಅವ ಕೊಡದಿದ್ದರೇನಂತೇ||
ಯತ್ನ
ಪಡೆದ ಸಾಲವ ತೀರಿಸಲಿಕ್ಕಾಗಿ
ಹೋಗುವ ಕೆಲಸಕ್ಕೆ ದುಡಿಮೆಗಾಗಿ|
ಮಾಡುವ ಕೆಲಸ ಹೆಚ್ಚುವರಿಯಾಗಿ
ಕೊನೆಗೂ ತೀರಿಸುವ ಸ್ನೇಹಕ್ಕಾಗೀ||

ನಾಗರಾಜು.ಹ
ಇಸ್ರೋ ಬಡಾವಣೆ,
ಬೆಂಗಳೂರು
2 Comments
“ಸಾಹಿತ್ಯ ಮೈತ್ರಿ” ಮಾರ್ಗದ ಮೂಲಕ ನನ್ನ ಕವನಗಳು, ಹನಿಗವನಗಳು, ಚುಟುಕುಗಳು, ರುಬಾಯಿಗಳು, ಟoಕಾಗಳು ಮತ್ತು ಹಾಯ್ಕುಗಳನ್ನು ಪ್ರಸಾರ ಮಾಡುತ್ತಿರುವ ಮಿತ್ರ ಶ್ರೀ ಚಂದ್ರುರವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು!! ನಿಮ್ಮ ಈ ಕಾರ್ಯವನ್ನು ನನ್ನ ಕವಿಮಿತ್ರರೂ ಉಪಯೋಗಿಸಿಕೊಳ್ಳಲು ಮನವರಿಕೆ ಮಾಡಿ ಕೊಡುತ್ತೇನೆ. ತಮ್ಮ ಈ ಮಾರ್ಗ ಯಶಸ್ವಿಯಾಗಲೆಂದು ಆಶಿಸುತ್ತೇನೆ. ಧನ್ಯವಾದಗಳು, ನಮಸ್ತೇ ಮಿತ್ರರೇ!!!
— ನಾಗರಾಜು. ಹ., ಇಸ್ರೋ ಬಡಾವಣೆ, ಬೆಂಗಳೂರು- ೫೬೦೧೧೧
ವಂದನೆಗಳು ಸರ್