ಚುಟುಕುಗಳು
ಅಂದದ ವಿಸ್ತಾರ
ಆಸರೆಯ ಸೆಲೆ ತಾಯಿಯ ಮಡಿಲು
ಪ್ರೀತಿಯ ನೆಲೆ ತಂದೆಯ ಹೆಗಲು
ಆಲದಮರದ ಚೆಲುವು ಬಿಳಲಲಿ
ನದಿಗಳಿಗಿರದ ವಿಸ್ತಾರ ಕಡಲಲಿ
ಹೆತ್ತವರ ಹೆಮ್ಮೆ
ಮಡಿಲಲಿ ಬೆಳೆದ ಕಂದ
ತಮ್ಮ ಹೆಗಲಿ ಗೆ ಆಸರೆಯಾದ(ಳು)!
ಕಡಲಿ ನಷ್ಟು ಪ್ರೀತಿ ತೋರುತಾ
ಬದುಕಲಿ ಬಿಳಲಿ ನಂತೆ ಊರುಗೋಲಾದ(ಳು)!!
ಅಗಾಧ ಪ್ರೀತಿ
ಕಡಲಿನಂತಹ ಒಲವಿಗೆ ಹೆಗಲಾಗಿ
ಮರಕೆ ಜೋತುಬೀಳುವ ಬಿಳಲಿನಂತೆ..
ಅಮ್ಮನ ಮಡಿಲು
ಬದುಕಿನ ವಿಸ್ತಾರ
ಮರಕಿರುವಂತೆ ಗಟ್ಟಿ ಬಿಳಲು
ಸಂಸಾರದಲಿ ತಂದೆಯ ಹೆಗಲು!
ಜಗ್ಗಿದರೂ ಅದೆಂದಿಗೂ ಕುಗ್ಗದು..
ಹಾಂ..ಅದೊಂದು ವಿಶಾಲ ಕಡಲು!!
ಇದ ಕಂಡು ಸಂತಸಪಡುವುದು
ತಾಯಿಯ ಮಡಿಲು!!!!
ಸುಮನಾ ರಮಾನಂದ