ಛತ್ರಪತಿ – ನಾ ಕಂಡಂತೆ ಶಿವಾಜಿ

ಛತ್ರಪತಿ – ನಾ ಕಂಡಂತೆ ಶಿವಾಜಿ

ಛತ್ರಪತಿ – ನಾ ಕಂಡಂತೆ ಶಿವಾಜಿ

ಲೇಖಕರು : ಶ್ರೀ ಗುರುಪ್ರಸಾದ ಭಟ್

ಪ್ರಕಾಶಕರು : ವಿವಿದ್ ಲಿಪಿ ಪ್ರಕಾಶನ

ಲೇಖಕರ ಸಂಪರ್ಕ ಸಂಖ್ಯೆ : 9819324363

ಯಾವುದೇ ಒಂದು ವ್ಯಕ್ತಿ ಅಥವಾ ವಿಷಯದ ಬಗ್ಗೆ ಬರೆಯಲು ಹೊರಟರೆ ನಮಗೆ ಆ ವ್ಯಕ್ತಿ ಅಥವಾ ವಿಷಯದ ಬಗ್ಗೆ ಆಳವಾದ ಜ್ಞಾನ ಇರುವುದು ಬಹಳ ಮುಖ್ಯ. ಹಾಗಲ್ಲದೆ, ಕೇಳಿದ ಓದಿದ ಸಂಗತಿಗಳನ್ನು ಬರೆದುಬಿಟ್ಟರೆ ಅದು ಅಂತಹ ಮಹತ್ವವನ್ನು ಪಡೆದುಕೊಳ್ಳುವುದಿಲ್ಲ. ಈ ಮೇಲಿನ ಮಾತುಗಳಿಗೆ ಹೊರತಾಗಿ ನಿಲ್ಲುವುದು ಶ್ರೀಯುತ ಗುರುಪ್ರಸಾದ್ ಭಟ್ಟರ ಛತ್ರಪತಿ – ನಾ ಕಂಡಂತೆ ಶಿವಾಜಿ ಕೃತಿ.

ಇತ್ತೀಚಿನ ದಿನಗಳಲ್ಲಿ ಶಿವಾಜಿ ಮಹಾರಾಜರ ಕುರಿತಾಗಿ ಕನ್ನಡದಲ್ಲಿ ಬಂದ ಕೃತಿಗಳಲ್ಲಿ ಅತ್ಯಂತ ಮಹತ್ವ ಪಡೆದುಕೊಳ್ಳುವ ಕೃತಿ ಛತ್ರಪತಿ.

ಬಾಲ್ಯದಲ್ಲಿ ಛತ್ರಪತಿ ಶಿವಾಜಿಯವರನ್ನು ಕುರಿತು ಒಂದೆರಡು ಪುಟಗಳ ಪ್ರಬಂಧ ಬರೆಯಲು ಅವಕಾಶ ಸಿಕ್ಕಿದ್ದೇ ಗುರುಪ್ರಸಾದ್ ಭಟ್ಟರಿಗೆ ಶಿವಾಜಿಯವರನ್ನ ಅರಿಯುವ ಪ್ರಯತ್ನಕ್ಕೆ ನಾಂದಿ ಹಾಡಿತು. ಶಿವಾಜಿ ಎಂದರೆ ಮಹಾನ್ ರಾಷ್ಟ್ರಾಭಿಮಾನಿ ಹಿಂದವೀ ಸ್ವರಾಜ್ಯದ ಕಲ್ಪನೆಯನ್ನು ಇಟ್ಟುಕೊಂಡು ಅದನ್ನು ಸಾಕ್ಷಾತ್ಕರಿಸಲು ತನ್ನ ಇಡೀ ಜೀವನದುದ್ದಕ್ಕೂ ಹೋರಾಟವನ್ನು ನಡೆಸಿದ ಮಹಾನ್ ಚೇತನ.

ಪ್ರಸ್ತುತ ಕೃತಿಯಲ್ಲಿ ಶ್ರೀಯುತ ಗುರುಪ್ರಸಾದ್ ಭಟ್ಟರು ಶಿವಾಜಿ ಮಹಾರಾಜರ ಜನನ,ಬಾಲ್ಯದಿಂದ ಮೊದಲುಗೊಂಡು ಅವರು ಧೀಮಂತ ನಾಯಕನಾಗಿ ಗುರುತಿಸಿಕೊಳ್ಳುವ ವರೆಗೆ ಛತ್ರಪತಿ ಶಿವಾಜಿ ನಡೆದು ಬಂದ ದಾರಿಯನ್ನು ಬಹಳ ವಿಸ್ತೃತವಾಗಿ ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಈ ಕೃತಿಯನ್ನು ಓದುತ್ತಾ ಹೋದಂತೆ ನಾವು ಕೂಡ ಶಿವಾಜಿ ಮಹಾರಾಜರ ಕಾಲಘಟ್ಟದಲ್ಲಿ ಇದ್ದೆವು, ಅವರ ಒಡನಾಟಕ್ಕೆ ಬಂದಿದ್ದ ಹಲವು ಜನರಲ್ಲಿ ನಾವು ಒಬ್ಬರಾಗಿದ್ದೆವು ಎಂದು ಭಾವನೆ ಬರುತ್ತದೆ. ಈ ಕೃತಿಯನ್ನು ರಚಿಸಲು ಅವರು ತೆಗೆದುಕೊಂಡಿದ್ದು ಸರಿ ಸುಮಾರು ಎರಡು ದಶಕಗಳು .ಶಿವಾಜಿ ಅವರ ಕುರಿತು ಓದಿದ್ದು ವಿವಿಧ ಭಾಷೆಗಳ 75ಕ್ಕೂ ಹೆಚ್ಚು ಕೃತಿಗಳು.ಎಲ್ಲಕ್ಕೂ ಮಿಗಿಲಾಗಿ ಶಿವಾಜಿಯವರ ಕಾಲಘಟ್ಟದಲ್ಲಿ ಅವರು ಓಡಾಡಿದ್ದ ಜಾಗಗಳಿಗೆ ಭೇಟಿ ಕೊಟ್ಟು,ಅದಕ್ಕೆ ಸಂಬಂಧಪಟ್ಟಂತಹ ದಾಖಲೆ ಪತ್ರಗಳು ಎಲ್ಲವನ್ನೂ ಜಾಗರೂಕತೆಯಿಂದ ಮತ್ತು ಅತ್ಯಂತ ಪ್ರೀತಿಯಿಂದ ಓದುತ್ತಾ ಶಿವಾಜಿಯವರು ನಡೆದಾಡಿದ ಭೂಮಿಯಲ್ಲಿ ತಾನು ಕೂಡ ಸುತ್ತಾಡಿ ಶಿವಾಜಿಯವರ ಚೈತನ್ಯವನ್ನು ತನ್ನಲ್ಲಿ ಆವಾಹನೆ ಮಾಡಿಕೊಂಡವರು.

ಶಿವಾಜಿ ಮಹಾರಾಜರನ್ನು ಆದರಿಸುತ್ತಾ,ಆರಾಧಿಸುತ್ತಾ ಶಿವಾಜಿ ಅವರನ್ನೇ ತನ್ನ ಉಸಿರಾಗಿಸಿಕೊಂಡ ಗುರುಪ್ರಸಾದ್ ಭಟ್ಟರು ಅತ್ಯಂತ ಮಹತ್ವಪೂರ್ಣ ಕೃತಿಯನ್ನು ಕನ್ನಡ ಭಾಷೆಗೆ ನೀಡಿದ್ದಾರೆ.ಅವರ ಬರಹಗಳಲ್ಲಿ ಯಾವುದೇ ರೀತಿಯ ಉತ್ಪ್ರೇಕ್ಷೆ ಕಾಣುವುದೇ ಇಲ್ಲ.

ಸುನೀಲ್ ಹಳೆಯೂರು

Related post

Leave a Reply

Your email address will not be published. Required fields are marked *