ಜನ ಮೆಚ್ಚಿದ ಸಾಹಿತ್ಯೋತ್ಸವ – 2023

ಜನ ಮೆಚ್ಚಿದ ಸಾಹಿತ್ಯೋತ್ಸವ – 2023

ಕನ್ನಡ ಸಾಹಿತ್ಯಲೋಕದಲ್ಲಿ ವಿಶಿಷ್ಟವೆಂದೇ ಹೇಳಬಹುದಾದ ಸಮಾರಂಭವೊಂದು ಅವ್ವ ಪುಸ್ತಕಾಲಯ, ಸಾಹಿತ್ಯಲೋಕ ಪಬ್ಲಿಕೇಷನ್ಸ್ ಮತ್ತು ಸಾಹಿತ್ಯಮೈತ್ರಿ ಸಹಯೋಗದಲ್ಲಿ ಜನವರಿ 29 ರ ಭಾನುವಾರದಂದು ಬೆಂಗಳೂರು ಸಾಹಿತ್ಯಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನೆರವೇರಿತು. ಶ್ರೀಯುತ ಅನಂತ್ ಕುಣಿಗಲ್ ರವರ ಬಹುದಿನಗಳ ಕನಸಿನಂತೆ ಸಾಹಿತ್ಯೋತ್ಸವ 2023 ಬಹಳ ವಿಜೃಂಭಣೆಯಿಂದ ನೆರವೇರಿತು. 15 ಪುಸ್ತಕಗಳ ಬಿಡುಗಡೆ, ಕೃತಿ ಸಂವಾದ, ಭರತನಾಟ್ಯ, ಕವಿಗೋಷ್ಠಿ, ಪ್ರಶಸ್ತಿ ಪ್ರದಾನ, ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಒಳಗೊಂಡಿತ್ತು.

ಶ್ರೀ ವಿದ್ವಾನ್ ಮಂಜುನಾಥ ಪುತ್ತೂರು ಅವರ ಭರತನಾಟ್ಯದಿಂದ ಶುರುವಾಗಿ, ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟನೆಯಾಯಿತು. ಅವ್ವ ಪುಸ್ತಕಾಲಯದ ರೂವಾಯಿಗಳಾದ ಅನಂತ ಕುಣಿಗಲ್ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕು. ಸ್ಪೂರ್ತಿ ಮುರಳೀಧರ್ ಮತ್ತು ಕು. ಏಕತಾ ಭಟ್ ಅವರು ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ವಿವಿಧ ಲೇಖಕಿಯರು ಮತ್ತು ಲೇಖಕರ ಒಟ್ಟು 15 ಪುಸ್ತಕಗಳನ್ನು ಖ್ಯಾತ ಕಾದಂಬರಿಕಾರರದ ಶ್ರೀಯುತ ಕೆ. ಎನ್. ಗಣೇಶಯ್ಯನವರು ಬಿಡುಗಡೆಗೊಳಿಸಿ ಎಲ್ಲರಿಗೂ ಶುಭಕೋರಿದರು. ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಶ್ರೀಯುತ ಕೇಶವ ಮಳಗಿಯವರು ಬಿಡುಗಡೆಗೊಂಡ ಎಲ್ಲಾ ಕೃತಿಗಳ ಲೇಖಕ ಲೇಖಕಿಯರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಶ್ರೀ ನಂದಕುಮಾರ್ ಜಿ. ಕೆ, ವಾಸುದೇವ ನಾಡಿಗ್, ಶ್ರೀಮತಿ ಧಾರಣಿ ಮಾಯಾ, ಶ್ರೀಮತಿ ಶುಭಾ ನಾಡಿಗ್,  ಶ್ರೀಯುತ ಅರ್.ಬಿ. ಗುರು ಬಸವರಾಜು,  ಶ್ರೀಮತಿ ದರ್ಶಿನಿ ಪ್ರಸಾದ್, ಬಿಡುಗಡೆಗೊಂಡ ಕೃತಿಗಳ ಪರಿಚಯ ಮಾಡಿಕೊಟ್ಟರು.

ಮಧ್ಯಾಹ್ನ ಭೋಜನದ ನಂತರ ನೆಡೆದ ಡಾ. ಸೂರ್ಯನಾರಾಯಣ ಶರ್ಮ ರವರ “ಪಾರ್ಶವಾಯುವಿನಿಂದ ಚೈತನ್ಯದೆಡೆಗೆ” ಕೃತಿಯ ಸಂವಾದದಲ್ಲಿ ಶ್ರೀ ಅರ್.ಬಿ. ಬಸವರಾಜು, ಡಾ. ರಾಘವೇಂದ್ರ ಬಿ. ಕೆ, ಡಾ.ಗುರುಚರಣ್ ಅಡೂರು ಶ್ರೀ ರವೀಂದ್ರ ಕುಲಕರ್ಣಿ, ಶ್ರೀ ಸತ್ಯನಾರಾಯಣ ಪಾರ್ಶವಾಯು ಕಾಯಿಲೆಯ ಕುರಿತು ವಿವರಿಸಿ ಜಾಗೃತಿ ಮೂಡಿಸಿ ನೆರದಿದ್ದ ಪ್ರೇಕ್ಷಕರ ಪ್ರಶ್ನೆಗಳಿಗೂ ಸಹ ಉತ್ತರಿಸಿದರು.

ಅವ್ವ ಪುಸ್ತಕಾಲಯದ ಹೊಸ ಲೋಗೋವನ್ನು ಬಿಡುಗಡೆಗೊಳಿಸಲಾಯಿತು. ನಂತರ ನೆಡೆದ ಕವಿಗೋಷ್ಠಿಯಲ್ಲಿ
ಶ್ರೀ ನಾರಾಯಣ ಸ್ವಾಮಿ, ಶ್ರೀಮತಿ ಯಶಸ್ವಿನಿ ಶ್ರೀಧರಮೂರ್ತಿ, ಶ್ರೀಮತಿ ಆಶಾ ಸಚಿನ್, ಶ್ರೀ ದೀಕ್ಷಿತ್ ನಾಯರ್, ಹೇಮಂತ್ ಶೃಂಗನಾಡು, ಪೂಜಾ ಎಂಪಿ, ತೇಜ ಎಸ್ ಬಿ, ವಿಕ್ರಮ ಬಿ.ಕೆ ಮುಂತಾದವರು ಅವ್ವನ ಕುರಿತ ತಮ್ಮ ಕವನಗಳನ್ನು ಸಭೆಯಲ್ಲಿ ವಾಚಿಸಿದರು.

ಮಧ್ಯಾಹ್ನದ ಅವ್ವ ಪುಸ್ತಕಾಲಯ ಕಾರ್ಯಕ್ರಮದ ಅಥಿತಿಗಳಾದ ಶ್ರೀ ನಿಡುಸಾಲೆ ಪುಟ್ಟಸ್ವಾಮಯ್ಯ, ಶ್ರೀಮತಿ ಎಂ.ಅರ್ ಕಮಲ, ಶ್ರೀಮತಿ ಆಶಾ ರಘು, ಶ್ರೀ ಬೇಲೂರು ರಘುನಂಧನ್, ಶ್ರೀಮತಿ ಶುಭಾ ನಾಡಿಗ್, ಶ್ರೀಮತಿ ಚಂದ್ರಿಕಾ ಪುರಾಣಿಕ್, ಶ್ರೀಮತಿ ಚಿತ್ರಲೇಖ, ಕಾರ್ಯಕ್ರಮಕ್ಕೆ ಶುಭ ಹಾರೈಸಿ ಈ ಮೂರು ತಂಡಗಳ ಸಹಯೋಗದಲ್ಲಿ ಪ್ರತಿ ವರ್ಷವೂ ಸಾಹಿತ್ಯೋತ್ಸವ ನೆಡೆಯಲಿ ಎಂದು ಆಶೀರ್ವದಿಸಿದರು.

ಅವ್ವ ಪುಸ್ತಕಾಲಯವು ಕಳೆದ ವರ್ಷ ನೆಡೆಸಿದ ಅವೂವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಕೃತಿಗಳ ಆಯ್ಕೆಯಲ್ಲಿ  ಶ್ರೀ ಶಶಿಧರ್ ಹಾಲಾಡಿಯವರ ಚಿತ್ತ ಹರಿದತ್ತ ಕೃತಿಗೆ ಪ್ರಶಸ್ತಿ ಹಾಗೂ ಶ್ರೀಮತಿ ಗಾಯತ್ರಿ ರಾಜ್, ಶ್ರೀಮತಿ ಜಯಶ್ರೀ ದೇಶಪಾಂಡೆ, ಶ್ರೀ ಅರುಣ್ ಕಿಲ್ಲೂರು, ಶ್ರೀಮತಿ ಭಾರತಿ ಬಿ.ವಿ. ಶ್ರೀ ಪ್ರದೀಪ್ ಬೇಲೂರ್ ರವರ ಕೃತಿಗಳು ಮೆಚ್ಚಿಗೆ ಬಹುಮಾನಕ್ಕೆ ಆಯ್ಕೆಯಾಗಿದ್ದವು. ಇವರೆಲ್ಲರನ್ನು ಅಥಿತಿಗಳು ಸನ್ಮಾನಿಸಿದರು.

ಕೊನೆಯದಾಗಿ ಶ್ರೀ ಬೇಲೂರು ರಘುನಂದನ್ ರವರ ಪುತ್ರ ಗೋಕುಲ ಸಹೃದಯ ರವರಿಂದ ಏಕವ್ಯಕ್ತಿ ನಾಟಕವಾದ “ಚಿಟ್ಟೆ” ಪ್ರದರ್ಶಿಸಿಸಲಾಯಿತು. ಏಳನೇ ಕ್ಲಾಸ್ ಓದುತ್ತಿರುವ ಸಹೃದಯ್ ಪ್ರತಿಭಾನ್ವಿತ ಕಲಾವಿದನಾಗಿದ್ದು ತನ್ನ ಅದ್ಭುತ ಅಭಿನಯದಿಂದ ಅಲ್ಲಿ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಳಿಸುವಲ್ಲಿ ಯಶಸ್ವಿಯಾದರು. ಸುನಿಲ್ ಹಳೆಯೂರು ಹಾಗು ಅನಂತ್ ಕುಣಿಗಲ್ ಒಟ್ಟು ಕಾರ್ಯಕ್ರಮದ ವಂದನಾರ್ಪಣೆಗಳನ್ನು ಸಭಿಕರಿಗೆ ಸಲ್ಲಿಸಿದರು

ಒಟ್ಟಿನಲ್ಲಿ ಇದೊಂದು ಬರಿ ಸಾಹಿತ್ಯ ಕಾರ್ಯಕ್ರಮ ಮಾತ್ರವಲ್ಲದೆ, ಭಾವನಾತ್ಮಕವಾಗಿ ಕುಟುಂಬ ಕಾರ್ಯಕ್ರಮದಂತೆ ಯಾವುದೇ ಅಡೆತಡೆಗಳಿಲ್ಲದೆ ಸಾಂಗವಾಗಿ ನೆರವೇರಿತು.

ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *