ಜಯತೀರ್ಥ ಸದಭಿರುಚಿಯ ನಿರ್ದೇಶಕ

ಜಯತೀರ್ಥ ಈಗಿನ ಪ್ರಸಿದ್ಧ ಚಲನಚಿತ್ರ ನಿರ್ದೇಶಕರಲ್ಲೊಬ್ಬರು. “ಒಲವೇ ಮಂದಾರ” ಚಿತ್ರದ ಮೂಲಕ ನಿರ್ದೇಶಕರಾಗಿ ಟೋನಿ, ಬುಲೆಟ್ ಬಸ್ಯಾ, ಬ್ಯೂಟಿಫುಲ್ ಮನಸ್ಸುಗಳು, ಬೆಲ್ ಬಾಟಮ್, ವನಿಲಾ, ಸಿನಿಮಾಗಳ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿ ಚಿತ್ರಗಳನ್ನು ಗೆಲ್ಲಿಸಿ ಈಗ ಸದ್ಯಕ್ಕೆ ತಮ್ಮ ಹೊಸ ಚಿತ್ರ “ಬನಾರಸ್” ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಜಯತೀರ್ಥರವರು  ಈಗಿನ ಜನರಿಗೆ ತಿಳಿದ ಮಟ್ಟಿಗೆ ಒಬ್ಬ ಚಲನಚಿತ್ರ ನಿರ್ದೇಶಕರು ಆದರೆ ಅವರು ಬೆಳದು ಬಂದದ್ದು ಸಂಪೂರ್ಣ ರಂಗಭೂಮಿ ಹಿನ್ನೆಲೆಯಿಂದ ಹಾಗೂ ಊಹಿಸಲಾಗದಷ್ಟು ಅದ್ಬುತ ಕೆಲಸಗಳನ್ನು ರಂಗಭೂಮಿಯಲ್ಲಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಅವರ ರಂಗಭೂಮಿ ಅನುಭವ, ಹಾಗೂ ಯಶಸನ್ನು ಓದುಗರಿಗೆ ಪರಿಚಯಿಸುವ ಉದ್ದೇಶದಿಂದ ಆಕೃತಿ ಕನ್ನಡಕ್ಕಾಗಿ ನಮ್ಮ  ಬರಹಗಾರರಾದ ಕು ಶಿ ಚಂದ್ರಶೇಖರ್ ಮಾಡಿರುವ ಸಂದರ್ಶನವನ್ನು ನಮ್ಮ ಪತ್ರಿಕೆಯಲ್ಲಿ ಎರಡು ಬಾಗಗಳಲ್ಲಿ ಮುಂದಿಡುತ್ತಿದ್ದೇವೆ.

Related post