ಜರೀಬೇಡ ಕನ್ನಡ ನುಡಿಯ

ಜರೀಬೇಡ ಕನ್ನಡ ನುಡಿಯ

ಅಯ್ಯೋ!? ಹುಚ್ಚಪ್ಪ ಕನ್ನಡ ನುಡಿಯ ಜರಿಯಬೇಡ…….|ಪ|
ಈ, ನಮ್ಮ ಕನ್ನಡ ನಾಡಿನ ಮಣ್ಣನು ಮರೆಯಬೇಡ
ಆ, ಚಂದಿರ ಬೆಳದಿಂಗಳ ಹೊತ್ತು ತರುವುದು ಕೂಡಾ
ಕನ್ನಡ ನುಡಿಯ, ಕಲಿಯಬೇಕೆಂಬ ಬಯಕೆ ನೋಡಾ…….|೧|

ಅಯ್ಯೋ!? ಹುಚ್ಚಪ್ಪ ಕನ್ನಡ ನುಡಿಯ ಜರಿಯಬೇಡ…….|ಪ|
ಈ, ನಮ್ಮ ಕನ್ನಡ ನಾಡಿನ ಮಣ್ಣನು ಮರೆಯಬೇಡ
ಆ, ಮೋಡವು ಕುಣಿದು ಮಳೆ ಸುರಿಸುವುದು ಕೂಡಾ
ಕನ್ನಡ ನುಡಿಯ, ಕಲಿಯಬೇಕೆಂಬ ಬಯಕೆ ನೋಡಾ…….|೨|

ಅಯ್ಯೋ!? ಹುಚ್ಚಪ್ಪ ಕನ್ನಡ ನುಡಿಯ ಜರಿಯಬೇಡ…….|ಪ|
ಈ, ನಮ್ಮ ಕನ್ನಡ ನಾಡಿನ ಮಣ್ಣನು ಮರೆಯಬೇಡ
ಆ ಸೂರ್ಯ ಕಿರಣವ ಬಿಟ್ಟು ಹುಡುಕುವುದು ಕೂಡಾ
ಕನ್ನಡ ನುಡಿಯ, ಕಲಿಯಬೇಕೆಂಬ ಬಯಕೆ ನೋಡಾ…….|೩|

ಅಯ್ಯೋ!? ಹುಚ್ಚಪ್ಪ ಕನ್ನಡ ನುಡಿಯ ಜರಿಯಬೇಡ…….|ಪ|
ಈ, ನಮ್ಮ ಕನ್ನಡ ನಾಡಿನ ಮಣ್ಣನು ಮರೆಯಬೇಡ
ಆ ಮಲ್ಲಿಗೆಯ ಹೂ, ಸುಗಂಧ ಸೊಸುವುದು ಕೂಡಾ
ಕನ್ನಡ ನುಡಿಯ, ಕಲಿಯಬೇಕೆಂಬ ಬಯಕೆ ನೋಡಾ…….|೪|

ಅಯ್ಯೋ!? ಹುಚ್ಚಪ್ಪ ಕನ್ನಡ ನುಡಿಯ ಜರಿಯಬೇಡ……..|ಪ|
ಈ, ನಮ್ಮ ಕನ್ನಡ ನಾಡಿನ ಮಣ್ಣನು ಮರೆಯಬೇಡ
ಆ ಜೇನು ದುಂಬಿ ಸಿಹಿಯ ಸಂಗ್ರಹಿಸುವುದು ಕೂಡಾ
ಕನ್ನಡ ನುಡಿಯ, ಕಲಿಯಬೇಕೆಂಬ ಬಯಕೆ ನೋಡಾ…….|೫|

ಅಯ್ಯೋ!? ಹುಚ್ಚಪ್ಪ ಕನ್ನಡ ನುಡಿಯ ಜರಿಯಬೇಡ…….|ಪ|
ಈ, ನಮ್ಮ ಕನ್ನಡ ನಾಡಿನ ಮಣ್ಣನು ಮರೆಯಬೇಡ
ಆ, ತಾವರೆ ಹೂ, ಕೆಸರಲಿ ಅರಳಿ ನಗುವುದು ಕೂಡಾ
ಕನ್ನಡ ನುಡಿಯ, ಕಲಿಯಬೇಕೆಂಬ ಬಯಕೆ ನೋಡಾ…….|೬|

ಪ್ರೇಮಕವಿ ಗುಡ್ಡಪ್ಪ. ಬಿ
ಉಜ್ಜಿನಿ

Related post

Leave a Reply

Your email address will not be published. Required fields are marked *