ಜಾಗ್ರತೆ

ಜಾಗ್ರತೆ

ನುಚ್ಚು ನೂರಾಗಿ
ಒಡೆದ ಮುಕುರದಲಿ
ಪ್ರತಿಬಿಂಬ ಹುಡುಕಲು
ಕಾಣ್ವುದೇ ಪೂರ್ಣಬಿಂಬ!

ಕೊಳ್ಳೆ ಹಾಕಿದ ಮನದ
ಮುಂಬಾಗಿಲಿಗೆ
ಬೀಗವಿಕ್ಕುವುದರಿಂದ
ಅಲ್ಲಿಹುದೇ ಮನಶಾಂತಿ!

ಸಜಲ ನಯನದೊಳ್
ಇಣುಕಿಕ್ಕಲು, ಇಹುದೇ
ಕಾಂತಿಯುತ ನಗೆಯ
ಬೆಳದಿಂಗಳದರಲಿ !

ಅಂಕೆ , ಶಂಕೆ, ಅಂಜಿಕೆ,
ಅಪನಂಬಿಕೆ ಎಂದೂ
ಸುಳಿಯದಿರುವಂದದಿ
ಕಾಪಿಡೋಣ ಮನವ !!

ಶ್ರೀವಲ್ಲಿ ಮಂಜುನಾಥ

Related post