ಜೇನು ಹುಳದ ಮುಳ್ಳು
ಹಿಂದೆಲ್ಲ ಜೇನುಹುಳಗಳಿಗೆ ಬೆನ್ನ ಹಿಂದೆ ಮುಳ್ಳು ಇರಲಿಲ್ಲ. ಅದಕ್ಕೆ ಮುಳ್ಳು ಹೇಗೆ ಬಂತು ಎಂದು ನಿಮಗೆ ಗೊತ್ತಾ? ಕಾಡಲ್ಲಿ ಆಲದ ಮರದ ಮೇಲೆ ಸಾವಿರಾರು ಜೇನುಗೂಡು ಕಟ್ಟಿತ್ತು. ಜೇನುಗಳು ನಿರುಪದ್ರವಿಯಾಗಿದ್ದವು. ಊರಿನ ಜನರೆಲ್ಲಾ ಮರದ ಬಳಿ ಬಂದು ತುಪ್ಪವನ್ನು ತೆಗೆದುಕೊಂಡು ಹೋಗುತ್ತಿದ್ದರು. ಜೇನುಗಳಿಗೆ ಮತ್ತೆ ಮತ್ತೆ ಗೂಡು ಕಟ್ಟಲು ಕಷ್ಟವಾಗುತಿತ್ತು. ಇದಕ್ಕೆ ಜೇನುಗಳ ರಾಣಿ ಪರಿಹಾರ ಹುಡುಕುತ್ತಾ ಕುಳಿತಿತು.
ಅದೇ ಸಮಯಕ್ಕೆ ಮಂತ್ರಿ ಜೇನಿಗೆ ಒಂದು ಉಪಾಯ ಹೊಳೆಯಿತು. ಮಂತ್ರಿ ರಾಣಿ ಜೇನಿನ ಬಳಿ ಬಂದು “ಮಹಾರಾಣಿ ನಮಗೆ ನಮ್ಮ ಬೆನ್ನ ಹಿಂದೆ ಒಂದು ಮುಳ್ಳು ಸಿಕ್ಕರೆ ನಾವು ನಮ್ಮ ಜೇನುತುಪ್ಪ ತೆಗೆದುಕೊಳ್ಳುವರಿಗೆ ಚುಚ್ಚಬಹುದು” ಎಂದಿತು ಅದಕ್ಕೆ ರಾಣಿಜೇನು ನೀನು ಹೇಳುವುದು ಸರಿ, ಅದರೆ ನಮಗೆ ಮುಳ್ಳನ್ನು ಯಾರು ಕೊಡುತ್ತಾರೆ? ಎಂದಿತು, ಎಲ್ಲಾ ಜೇನು ಹುಳುಗಳು ಇದರ ಬಗ್ಗೆ ಚಿಂತಿಸಲಾರಂಬಿಸಿದವು, ಕೊನೆಗೆ ಮಂತ್ರಿ ಜೇನು ರಾಣಿ ನಾವು ಕಾಡಿನದೇವತೆಯ ಬಳಿಗೆ ಹೋಗೊಣಾ ಎಂದಿತು,ಹಾಗೆಯೇ ಅಗಲಿ ಎಂದು ಎಲ್ಲಾ ಜೇನುಹುಳಗಳು ಕಾಡಿನದೇವತೆಯ ಬಳಿಗೆ ಬಂದವು, ಬರುವಾಗ ದೇವತೆಗೆ ಜೇನುಗಳೆಲ್ಲಾ ಸೇರಿ ಜಗತ್ತಿನಲ್ಲಿಯೇ ಅತ್ಯುತ್ತಮವಾದ ಜೇನುತುಪ್ಪವನ್ನು ತಂದಿದ್ದವು. ಇದನ್ನು ಸ್ವೀಕರಿಸಿದ ಕಾಡಿನ ದೇವತೆ ಅಲ್ಲಿಯವರೆಗೂ ಅಷ್ಟು ಸ್ವಾದಿಸ್ಟವಾದ ಜೇನನ್ನು ತಾನು ತಿಂದಿರಲಿಲ್ಲವೆಂದಳು, ಕೊನೆಗೆ ಬಂದ ವಿಷಯವೇನೆಂದು ಕೇಳಿದಳು, ಅದಕ್ಕೆ ರಾಣಿ ಜೇನು ನಾವುಗಳೆಲ್ಲರೂ ಗೂಡು ಕಟ್ಟಿ ಸ್ವಾದಿಷ್ಟ ಜೇನುತುಪ್ಪವನ್ನು ತಯಾರಿಸುತ್ತೆವೆ, ಅದರೆ ಮಾನವ ಕ್ಷಣಮಾತ್ರದಲ್ಲಿ ಬಂದು ನನ್ನ ತುಪ್ಪವನ್ನೆಲ್ಲಾ ಔಯ್ಯುತ್ತಾನೆ, ನಾವು ನಿರುಪದೃವಿಗಳು, ನಮ್ಮನ್ನು ನಾವು ರಕ್ಷಿಸಿಕೊಳ್ಳಲು
ಹೇಗಾದರೂ ಸಹಾಯ ಮಾಡಬೇಕೆಂದು ಕೇಳಿತು. ನಾನು ನಿಮಗೆ ಯಾವರೀತಿ ಸಹಾಯ ಮಾಡಬಹುದು ನೀವೇ ಹೇಳಿ ಎಂದಳು ಕಾಡಿನ ದೇವತೆ.
ಅದಕ್ಕೆ ಮಂತ್ರಿ ನಮಗೆ ರಕ್ಷಿಸಿಕೊಳ್ಳಲು ನಮಗೊಂದು ಮುಳ್ಳನ್ನು ಕೊಡು ಎಂದಿತು, ಆಗ ಕಾಡಿನ ದೇವತೆ ಮುಳ್ಳನ್ನು ಎಲ್ಲಿ ಧರಿಸುತ್ತಿರಿ ಎಂದುಕೇಳಿತು, ಅಗ ಜೇನುಗಳೆಲ್ಲಾ ಯೋಚಿಸಿ ನಮ್ಮ ಹೊಟ್ಟೆಯ ಕೆಳಗೆ ಮುಳ್ಳನ್ನು ಕೊಡಬೇಕೆಂದು ಕೇಳಿದವು, ಅದಕ್ಕೆ ಕಾಡಿನ ದೇವತೆ ನಾನೇನೋ ಅಲ್ಲಿ ಮುಳ್ಳಿರುವಂತೆ ನಿಮಗೆ ವರವನ್ನು ಕೊಡಬಲ್ಲೆ ಅದರೆ ನೀವು ಯಾರಿಗಾದರೂ ಆ ಮುಳ್ಳಿನಿಂದ ಚುಚ್ಚಿದರೆ ನೀವು ಸತ್ತು ಹೋಗುತ್ತಿರಿ ಎಂದಳು, ಅದಕ್ಕೆ ಜೇನುಗಳೆಲ್ಲಾ ಯೋಚಿಸಿ ಪರವಾಗಿಲ್ಲಾ ನಾವು ಸತ್ತರೂ ನಮ್ಮ ಸಂತಿತಿ ವೃದ್ದಿಯಾಗುತ್ತದಲ್ಲಾ ಪರವಾಗಿಲ್ಲಾ ಎಂದವು, ಕಾಡಿನ ದೇವತೆ ತಥಾಸ್ತು ಎಂದಳು.
ಅಂದಿನಿಂದ ಜೇನುಹುಳಗಳಿಗೆ ಹಿಂಬದಿಯಲ್ಲಿ ಮುಳ್ಳಿರುತ್ತದೆ, ಅದು ಯಾರಿಗಾದರೂ ಕಚ್ಚಿದರೆ ಮುಳ್ಳು ಕಚ್ಚಿದವರಿಗೆ ಚುಚ್ಚುತ್ತದೆ ಹಾಗು ಮುಳ್ಳಿದ್ದ ಜಾಗದಿಂದ ನಂಜು ಸೋರಿ ಹೋಗುವುದರಿಂದ ಜೇನುಹುಳಗಳು ಸತ್ತುಹೋಗುತ್ತದೆ.
ಅಭಯ್.ಪಿ.ನಾಡಿಗ್
ಜೈನ್ ಪಬ್ಲಿಕ್ ಶಾಲೆ
ಊರುಕೆರೆ
ತುಮಕೂರು-572106