ಜೋಕಾಲಿ
ಮರೆಯಾಯ್ತು ಹಳ್ಳಿಯ ದಿನಗಳು
ಎಷ್ಟು ಚೆಂದ ಆ ಬಾಲ್ಯದ ದಿನಗಳು
ಈಗ ಅಲ್ಲುಂಟು ಮೊಬೈಲುಗಳು
ಊರ ಮರಕೆ ಚಿಕ್ಕಪ್ಪ ಕಟ್ಟಿದ ಜೋಕಾಲಿ
ಚಿಗುರು ಉತ್ಸಾಹಮಕ್ಕಳ ಮನದಲಿ
ನಾಮುಂದು ತಾಮುಂದು ಎನುವ ಆತುರದಲಿ
ಹುತ್ತಕ್ಕೆರದು ಬಗುರಿಯಾಡಿದ ಬಳಿಕ
ಪಂಚಮಿ ಉಂಡೆಯ ಸವಿಯುತ
ಹೋ ಎಂದು ಕಿರುಚಾಡಿ ತೂಗುತಾ
ಜೋಕಾಲಿಗಿಲ್ಲ ವಯಸಿನಾ ಭೇದ
ಅಡುಗೆ ಮುಗಿಸಿಟ್ಟು ಓಡುವ ಅಮ್ಮ
ತನ್ನ ಕೂಸುಗಳ ಜತೆಯಾಡುವಳಮ್ಮ
ಹಬ್ಬ ಕಳೆದ ಬಳಿಕ ಪಟ್ಟಣ ಸೇರುವಾ ಜನ
ಮರೆಯುವರು ಹಳ್ಳಿಯ ನಲಿವಿನ ದಿನ
ಮೊಬೈಲು ಟ್ಯಾಬುಗಳಿಗೆ ಕಾತರಿಸುವ ಮನ
ಮರಿಬೇಡ ಓ ಮನುಜ ನಿನ ಬಾಲ್ಯವಾ
ಮುಂದಿನ ಪೀಳಿಗೆಗೆ ಇರಲಿ ಹಳ್ಳಿಯ ಹವಾ
ನಗುನಗುತಾ ಸಾಗಲಿ ಜೀವನ ಜೋಕಾಲಿ
ಸಿ.ಎನ್. ಮಹೇಶ್