ತಂಗ್ಯಮ್ಮ

ಬೆನ್ನ ಹಿಂದೆ ಹುಟ್ಟಿದ ಪುಟ್ಟ ನೀನು
ದೂಕುತ್ತಿದ್ದೆನಲ್ಲ ಪುಟ್ಟಿ
ಆಟದಲ್ಲಿ ಕೂಟದಲ್ಲಿ!
ಅಯ್ಯೋ ಅರಿವಿರದೆ ಹೋಯಿತೇ?

ಒಡಹುಟ್ಟಿ ಮನೆಯ ದೀಪ
ಹಚ್ಚಿಸಿದ ಅಪ್ಪನ ಪ್ರೀತಿಯ ಪುಟ್ಟಿ
ನಿನ್ನ ಕೂದಲು ಎಳೆದು
ಜಗಳವಾಡುವ ಆಸೆ

ನಿನ್ನ ಮದುವೆಯಲ್ಲಿ
ಪೀಪಿ ಊದಿ ಮುತ್ತಣ್ಣನಂತೆ
ಬೀಗುವ ಆಸೆಯಿದ್ದರು
ಹೆಗಲಿಗೆ ಮದುವೆಯ ಜವಾಬ್ದಾರಿ?

ಪುಟ್ಟ ಅಳಿಯ ಮನೆಯಲ್ಲಿ
ಅಂಬೆಗಾಲಿಡುವ ಕನಸು
ಮಾಮ ಎಂದು ತಬ್ಬುವ
ಗಾಡಿ ಮೇಲೆ ರೌಂಡ್ ಹೊಡೆಯುವ

ಈ ಅಣ್ಣನ ಪ್ರೀತಿ ಇಷ್ಟೇಯ?
ಅಲ್ಲಲ್ಲಾ…. ಬೇಕಾದಷ್ಟು
ಭೂಮಿ ತಬ್ಬುವಷ್ಟು
ಕೊಡುತ್ತಿದ್ದ ಕೈತುತ್ತು
ಬೇಕು ನನಗೆ ಈಗಲೂ

ಕೊಡುವೆಯಾ ಕಂದ
ಅಣ್ಣನಾದರೂ
ನಿನ್ನ ಪುಟ್ಟ ತಮ್ಮ ನಾನು
ನನ್ನಮ್ಮ ನೀನು.

ಕು ಶಿ

Related post