ತರಕಾರಿ….ತರಕಾರಿ
ಗಂಟಲು ಬಿರಿಯುವ ಹಾಗೆ ಕೂಗುತ
ಮಣಗಳಭಾರದ ಗಾಡಿಯ ನೂಕುತ
ಹಾದಿ ಬೀದಿಗಳಲ್ಲಿ ತಿರುಗುತಾ
ಬಿಸಿಲು ಮಳೆಯೆನ್ನದೇ ಓಡಾಡುತಾ
ಸೂರ್ಯನುದಯಿಸುವಾ ಮುನ್ನವೇ
ಮಂಡಿಯನು ಇವನು ತಲುಪುವುನಲ್ಲವೇ
ನಮಗೆಲ್ಲಾ ತಾಜಾ ತರಕಾರಿ ತರುವನಲ್ಲವೇ
ಅಬ್ಬಾ ಅದೆಷ್ಟು ಶಕ್ತಿಶಾಲಿ ಇವನಲ್ಲವೇ
ಪ್ರತಿದಿನವೂ ಮನೆಮುಂದೆ ಬರುವ ಗೆಳೆಯನು
ಹಣ್ಣು ತರಕಾರಿಗಳನು ಹೊತ್ತು ತರುವವನು
ಮಾರುಕಟ್ಟೆಯಾ ದರಕೇ ಮಾರುವವನು
ನಾವ್ಮಾಡುವ ಚೌಕಾಸಿಗೆ ಬಗ್ಗುವವನು
ಆದರೂ ನಮಗೊಂದು ವ್ಯಾಮೋಹ
ದೂರದ ಮಹಲಿನಲಿ ಓಡಾಡುವ ಬಯಕೆ
ತಣ್ಣನೆಯ ಗಾಳಿಯಲಿ ತರಕಾರಿ ಕೊಳ್ಳುತಾ
ನಿಗದಿಯಾದ ಬೆಲೆಯನ್ನು ಸರದಿಯಲ್ಲಿ ನೀಡುತಾ
ಮನೆ ತಲುಪಿ ತರಕಾರಿ ತೆಗೆದು ಹೊರಗಿಟ್ಟಾಗ
ದರದ ಬಿಲ್ಲಿನ ಪರಿಶೀಲನೆ ಮಾಡುವಾಗ
ಪಾರ್ಕಿಂಗು, ಪೆಟ್ರೋಲು ಎಲ್ಲ ಸೇರಿಸಿದಾಗ
ನೆನಪಾದ ಬೆಳಗಿನ ತರಕಾರಿ ಗಾಡಿಯ ಗೆಳೆಯ
ಮನವೆಂದಿತು ಇನ್ನೆಂದೂ ಕಾಡುವೆನು ನಿನ್ನ
ನೀ ತರುವ ತರಕಾರಿ ಹಣ್ಣುಗಳೇ ಚೆನ್ನ…

ಸಿ.ಎನ್. ಮಹೇಶ್