ತಾಯಿ – ದೇವರು
ನಸುಕಿನಲಿ ಬೇಗೆದ್ದು ಕಂದನ ಜತೆಗೂಡಿ
ಗುಡಿಯ ಬಾಗಿಲಿಗೆ ಎಡತಾಕಿ
ನದಿಯಲಿ ಮನಸಾರೆ ಮಿಂದು ಬಂದಳವ್ವ
ಗುಡಿಯಲ್ಲಿ ಕುಳಿತ ದೇವನಾ ಕಾಣುವಾಸೆಯಲಿ
ಪುಟ್ಟ ಕಂದನ ಎಬ್ಬಿಸಿ ಗಿಲಕಿಯಾಸೆ ತೋರಿಸಿ
ದೂರದಿಂದಲೇ ನಡೆದು ಬಂದಳಾ ಹೆತ್ತವ್ವ
ಖಾಲಿ ಖಾಲಿ ಅಂಗಳದ ದೇಗುಲ ಕಂಡು
ಬಿರು ಬಿರುಸಾಗಿ ಹೆಜ್ಜೆಯ ಹಾಕುತ
ಕಂದನ ಕೈ ಹಿಡಿದು ಓಡುವಳವ್ವ
ಬಿಸಿಲೇರುವ ಮುನ್ನ ದೇವನಾ ಕಂಡು
ಸಕಲ ಭಾಗ್ಯಗಳನು ಬೇಡುತಾ
ತುತ್ತಿನ ಚೀಲವನರಸಿ ಹೋಗುವಳವ್ವ
ಮನೆಯೇ ಮೊದಲ ಪಾಠಶಾಲೆ
ಅಮ್ಮನೇ ಮೊದಲ ಗುರುವು
ಸಂಸ್ಕಾರ ಕಲಿಸುವ ಅಮ್ಮನೇ ಸತ್ಯ ಕಾಣವ್ವ
ಸಿ. ಎನ್. ಮಹೇಶ್
2 Comments
ಸುಂದರ ರಚನೆ ತಾಯಿಯ ಬಗ್ಗೆ👌💐
ಅಮ್ಮನ ಬಗ್ಗೆ ಸುಂದರ ಸಾಲುಗಳು.ಅಮ್ಮ ನ ಹಾರೈಕೆ ಸದಾ ಇರಲಿ.