ತೀಟೆ ತಿಮ್ಮನ ಕ್ವಾಟ್ಲೆ
ತೀಟೆ ತಿಮ್ಮನ ಕ್ವಾಟಲೆ ಯಾಕೊ
ಮಿತಿ, ಮಿತಿ, ಮಿತಿ, ಮಿತಿ ಮೀರಿತ್ತು
ಅವನನು ಕುಲುಕಿ,ಇವಳನು ಕೆಣಕಿ
ಶಾಲೆಯು ಜಾತ್ರೆಯ ತರವಿತ್ತು
ಇವನೆ ತೀಟೆ ತಿಮ್ಮ,,,
ಕಪಿರಾಯನ ಪ್ರೀತಿಯ ತಮ್ಮ.!!೧!!
ಚಂದ್ರನ ಚಡ್ಡಿಯ ಎಳೆಯುವನು
ಭಾಗ್ಯ ಬ್ಯಾಗನು ಎಸೆಯುವನು
ಮಂಜನ ತಿಂಡಿಯ ಮುಕ್ಕುವನು
ಗೌರಿಗೆ ಗೊಣ್ಣೆಯ ತಿಕ್ಕುವನು
ಇವನೆ ತೀಟೆ ತಿಮ್ಮ,,,
ಕಪಿರಾಯನ ಪ್ರೀತಿಯ ತಮ್ಮ.!!೨!!
ಆ ಕಡೆ, ಇ ಕಡೆ ಅಲೆದಾಟ
ಪುಸ್ತಕ ಹರಿದು ರಂಪಾಟ
ಒದದೆ ಬರೆಯದೆ ಹುಡುಗಾಟ
ಅಯ್ಯೋ ಇವನದು ಬಲುಕಾಟ
ಇವನೆ ತೀಟೆ ತಿಮ್ಮ,,,
ಕಪಿರಾಯನ ಪ್ರೀತಿಯ ತಮ್ಮ.!!೩!!
ಮಗ್ಗಿಯ ಕಲಿಯದ ಮಂಗಣ್ಣ
ಸುಳ್ಳು ಹೇಳುವ ಸುಬ್ಬಣ್ಣ
ಮಾತಿಗೆ ಕೂತರೆ ಮಲ್ಲಣ್ಣ
ಜಗಳಕೆ ನಿಂತರೆ ಜಗ್ಗಣ್ಣ
ಇವನೆ ತೀಟೆ ತಿಮ್ಮ,,,
ಕಪಿರಾಯನ ಪ್ರೀತಿಯ ತಮ್ಮ.!!೪!!
ಗುರುಗಳು ಬಂದರೆ ಬೆದರುವನು
ತೆಪ್ಪಗೆ ಎಲ್ಲೊ ಕೂರುವನು
ಎನೂ ಅರಿಯದೆ ನಟಿಸುವನು
ಕುರುಡ ಪಾಠವ ಪಠಿಸುವನು
ಇವನೆ ತೀಟೆ ತಿಮ್ಮ,,,
ಕಪಿರಾಯನ ಪ್ರೀತಿಯ ತಮ್ಮ.!!೫!!
ಎಲ್ಲರು ದೂರನು ಹೇಳುವರು
ಗುರುಗಳು ಕೋಪದಿ ನೋಡುವರು
ಕೋಣವ ಬಗ್ಗಿಸಿ ಬಡಿಯುವರು
ಅಮ್ಮನ ಕರೆಸಿ ಉಗಿಯುವರು
ಇವನೆ ತೀಟೆ ತಿಮ್ಮ,,,
ಕಪಿರಾಯನ ಪ್ರೀತಿಯ ತಮ್ಮ.!!೬!!
ಹೇಗೆ ಪ್ರಸಾದ್
ಕುದೂರು ಲಕ್ಕೇನಹಳ್ಳಿ