ದಯೆ ಬಾರದೇ ಪರಮಾತ್ಮ

ದಯೆ ಬಾರದೇ ಪರಮಾತ್ಮ

ಹೇ! ಪರಮಾತ್ಮ ದಯೆ ಬಾರದೇ!
ಹೇರಂಭಮಿತ್ರ ಕರುಣೆ ತೋರು!
ಹೇಳಿಕೊಳ್ಳುವೆ ಬಡತನವ ದೂರ ಮಾಡೆಂದು|
ಹೇ! ವೆಂಕಟಾದ್ರಿ ವೆಂಕಟೇಶ್ವರ
ಹೇ! ತಿರುಮಲೇಶ ಶೇಷಾದ್ರಿವಾಸ
ಹೇಳುವೆನು ಕೇಳು ಎನ್ನ ಬವಣೆ ಶ್ರೀನಿವಾಸ||

ಬಡತನವು ಮೀರುತಿಹುದು
ಬಲಿಯಾಗುತಿರುವೇ ಕಷ್ಟಕಾರ್ಪಣ್ಯಕೆ
ಬಂದೊದಗಿದೆ ಎನಗಿನ್ನಾರು ಗತಿ?
ಬರಸಿಡಿಲು ಬಂದೆರಗಿತು
ಬವಣೆಯನು ತಾಳಲಾರೆನು ನಾನು
ಬಡವರಲ್ಲಿ ಕರುಣೆಯನು ಕರುಣಿಸು ಬಾ

ಸತ್ಯ ನಾರಾಯಣನಾಗಿ ಸಜ್ಜನರ
ಸಲಹಲು ಭೂವೈಕುಂಠಕೆ ಬಂದೇ!
ಸಕಲ ಭಾಗ್ಯವ ಬ್ರಾಹ್ಮಣ ವೈಶ್ಯರಲ್ಲದೇ
ಸರ್ವ ಕ್ಷತ್ರಿಯ ಶೂದ್ರರಿಗೂ ಕರುಣಿಸಿದ!!
ಸಪಾದ ಪ್ರಸಾದವನ್ನು ನೀಡಿದೆ
ಸಕಲ ಜೀವಿಗಳು ನಿನ್ನ ಸ್ಮರಿಸುವರು
ಸರ್ವ ರಕ್ಷಕ ನಮ್ಮ ಶ್ರೀಸತ್ಯದೇವಾ||

ನಾನ್ಯಾಕೇ ಬದುಕಿರಲೀ?
ನಾಡು ದೂಷಿಸುತಿದೆ|
ನಾಗಶಯನನ ಕರುಣೆ ಎನಗಿಲ್ಲಾ!!
ನಾಗಭೂಷಣಗೆ ಕರ ಮುಗಿದೆ!
ನಾರೀಶ್ವರನು ಭವ ಬಂಧನವ
ನಾಗಾಭರಣಮಿತ್ರನೇ ಬಲ್ಲ||

ನಾಗರಾಜು. ಹ

Related post