“ದಸ್ ಕತ್ತು” – ಹನಿಗವನ ಸಂಕಲನ ಲೋಕಾರ್ಪಣೆ

ದಸ್ ಕತ್ತು” – ಹನಿಗವನ ಸಂಕಲನ ಲೋಕಾರ್ಪಣೆ

ದಸ್ ಕತ್ತು” ಇದು ಹತ್ತು ಪ್ರತಿಭೆಗಳು ರಚಿಸಿರುವ ಹನಿಗವನ ಸಂಕಲನ. ಇಂತಹುದೊಂದು ವಿನೂತನ ಪ್ರಯತ್ನದ ಫಲವಾಗಿ “ದಸ್ ಕತ್ತು” ಹನಿಗವನ ಸಂಕಲನ ಪುಸ್ತಕವು ಡಿಸೆಂಬರ್ 17 ನೇ ತಾರೀಕು 2022 ರಂದು ಬೆಂಗಳೂರಿನ ಎನ್. ಆರ್. ಕಾಲೋನಿಯ “ಸಿ. ಅಶ್ವಥ್ ಕಲಾಭವನ” ದಲ್ಲಿ ಲೋಕಾರ್ಪಣೆಗೊಂಡಿತು.

ಮೊದಲಿಗೆ “ಸುಪ್ರತೀಕ” ರ ಧ್ವನಿಯಲ್ಲಿ ಗಜಮುಖನ ಪ್ರಾರ್ಥನೆಯೊಂದಿಗೆ ಶುರುವಾದ ಕಾರ್ಯಕ್ರಮವು ಎನ್. ರಮಾನಾಥ್ (ಅಣುಕು ರಮಾನಾಥ್) ರವರ ನಿರೂಪಣೆಯಲ್ಲಿ ಮುಂದುವರೆಯಿತು. ಎನ್. ರಮಾನಾಥ್ ರವರು ಡುಂಡಿರಾಜ್ ರವರ ಹನಿಗವನಗಳ ಸಾಮರ್ಥ್ಯವನ್ನು ಪರಿಚಯಿಸುತ್ತ ಹತ್ತು ಹನಿಗವಿಗಳನ್ನು ಒಂದೇ ಪುಸ್ತಕದಲ್ಲಿ ಸೇರುವಂತೆ ಮಾಡಿದ್ದನ್ನು ಪ್ರಶಂಸಿದರು.

ನಂತರ ಹಿರಿಯ ಕವಿ “ಬಿ. ಆರ್. ಲಕ್ಷ್ಮಣ್ ರಾವ್” ಪುಸ್ತಕವನ್ನು ಬಿಡುಗಡೆ ಮಾಡಿ ಹೇಗೆ ಹನಿಗವನಗಳು ಕನ್ನಡ ಮಾತ್ರವಲ್ಲದೆ ಲಂಡನ್ ಸಂಸ್ಕೃತಿಯಲ್ಲೂ ಹಾಸುಹೊಕ್ಕಾಗಿರುವುದನ್ನು ಜ್ಞಾಪಿಸುತ್ತ ಹನಿಗವನಗಳ ರೂಪ ಹೇಗೆ ಹಿರಿಯ ಸಾಹಿತಿಗಳು ಅಳವಡಿಸಿಕೊಂಡಿದ್ದಾರೆ ಎಂದು ಡಿ. ವಿ. ಗುಂಡಪ್ಪ, ದಿನಕರ ದೇಸಾಯಿ ಮುಂತಾದವರ ಪದ್ಯಗಳನ್ನು ಅದಕ್ಕಿರುವ ಶಕ್ತಿಯನ್ನು ಜ್ಞಾಪಿಸಿದರು.

ಹಿರಿಯ ಭಾಷಣಕಾರರು ಹಾಗು ಹಾಸ್ಯ ಲೇಖಕರಾದ “ವೈ ವಿ ಗುಂಡೂರಾವ್” ದಸ್ ಕತ್ತು ಪುಸ್ತಕವನ್ನು ಪರಿಚಯಿಸುತ್ತಾ ವೈ ಎನ್ಕೆ ಯವರ ಕೆಲ ಪಂಚುಗಳನ್ನು ಹಾಗು ಡುಂಡಿರಾಜ್ ರವರ ಕೆಲವು ಹನಿಗವನಗಳನ್ನು ಓದಿ ನೆರೆದಿದ್ದ ಪ್ರೇಕ್ಷಕರ ನಗೆ ಅಬ್ಬರಕ್ಕೆ ಕಾರಣರಾದರು. ಹಾಗೆಯೇ ಎಲ್ಲಾ ಹತ್ತು ಹನಿಗವಿಗಳ ಆಯ್ದ ಪದ್ಯಗಳನ್ನು ಓದಿ ಅವರೆಲ್ಲರ ಪ್ರತಿಭೆಯನ್ನು ಶ್ಲಾಘಿಸಿದರು.

ಈ ಎಲ್ಲಾ ಹತ್ತು ಕವಿಗಳ ಪದ್ಯಗಳನ್ನು ಒಂದೆಡೆ ಸೇರಿಸಿ ಸಂಕಲನಕ್ಕೆ ಕಾರಣರಾದ ಹಿರಿಯ ಕವಿ ಡುಂಡಿರಾಜ್ ರವರು ಹನಿಗವನಗಳ ಸಾಮರ್ಥ್ಯವನ್ನು ವಿವರಿಸುತ್ತಾ ಪುಸ್ತಕ ಸಂಕಲನವು ಹೊರಗೆ ಬರಲು ಪಟ್ಟ ಶ್ರಮವನ್ನು ಹಾಗು ತೇಜು ಪಬ್ಲಿಕೇಷನ್ ಸಂಸ್ಥೆಯ ನೆರವನ್ನು ನೆನೆದರು.

ಪುಸ್ತಕದ ಮುಖಪುಟವನ್ನು ಆಕರ್ಷಕವಾಗಿ ರಚಿಸಿದ ರಘುಪತಿ ಶೃಂಗೇರಿ ಯವರನ್ನು ಪರಿಚಯಿಸಿ ಗೌರವಿಸಲಾಯಿತು.

“ದಸ್ ಕತ್ತು” ಈ ಹನಿಗವನ ಸಂಕಲನದಲ್ಲಿ ಹತ್ತು ಕವಿಪ್ರತಿಭೆಗಳಾದ “ಶ್ರೀಧರ ಕಾಡ್ಲೂರು, ಹರೀಶ್ ನಾಯಕ್, ಮಹಾಂತೇಶ ಮಾಗನೂರ, ಮೋಹನ್ ಕಳಸಾಪುರ, ಶ್ಯಾಮ್ ಪ್ರಸಾದ್, ಭಾಸ್ಕರ ಹೆಬ್ಬಾರ, ನಾಗಭೂಷಣ ಭಟ್ಟ, ಹನುಮಂತಸಿಂಗ ರಜಪೂತ, ಜಿ.ಕೆ. ನಾಯಕ್, ಮನು ಜಿ.ಎಂ.” ಎಲ್ಲರ ಆಯ್ದ ಹನಿಗವನಗಳಿವೆ.

ಹತ್ತು ಹೊಸ ಪ್ರತಿಭೆಗಳಿಗೆ ಸಂಕಲನ ರೂಪದಲ್ಲಿ ವೇದಿಕೆಯನ್ನು ಒದಿಗಿಸಿದಂತಹ ವಿನೂತನ ಪ್ರಯತ್ನಕ್ಕೆ ಕನ್ನಡದ ಓದುಗರು ಪ್ರೋತ್ಸಾಹಿಸಿದ್ದಲ್ಲಿ ಇನ್ನಷ್ಟು ಹೊಸ ಪ್ರತಿಭೆಗಳು ಕನ್ನಡ ಸಾಹಿತ್ಯಲೋಕಕ್ಕೆ ದೊರಕುವುದರಲ್ಲಿ ಸಂದೇಹವೇ ಇಲ್ಲಾ.

ಸಾಹಿತ್ಯಮೈತ್ರಿ ತಂಡ ಈ ವಿನೂತನ ಪ್ರಯತ್ನಕ್ಕೆ ಮತ್ತು ಎಲ್ಲಾ ಹತ್ತು ಹನಿಗವಿಗಳಿಗೆ ಪುಸ್ತಕ ಯಶಸ್ಸಾಗಲಿ ಎಂದು ಶುಭಕೋರುತ್ತದೆ.

ಸಾಹಿತ್ಯಮೈತ್ರಿ ತಂಡ

Related post

6 Comments

  • Congratulations and all the best to all the poets 💐💐

  • Congratulations to all poets and all the best ದಸ್ಕತ್ 💐

  • All the best to ದಸ್ಕತ್ and congratulations to all poets🙏👏

  • Thanks to all

  • All the best and congratulations to the team 💐🙏

  • ಅದ್ಭುತ ಸರ್ ಹತ್ತು ಕವಿಗಳ ಸಂಗಮ ಓದುವದು ನಮಗೆ ಬಂಗಾರ ಎಲ್ಲರಿಗೂ ಶುಭವಾಗಲಿ 💐💐

Leave a Reply

Your email address will not be published. Required fields are marked *