ದಾನಶೂರ ಕರ್ಣ
ಕೌoತೆಯ ದೇಶದಲ್ಲಿ ಜನಿಸಿದ
ಕುಂತಿ ದೇವಿಯು ದೂರ್ವಾಸ ರಿಂದ ;
ಪಡೆದ ಪುತ್ರ ಸಂತಾನ ವರದಿಂದ
ಹುಟ್ಟಿದ ರವಿಯ ವರ ಬಲದಿಂದ ||
ಕಿವಿಯಲ್ಲಿ ಕರ್ಣಕುಂಡಲಗಳಿದ್ದರಿಂದ
ಹೆಸರಾದ ಕರ್ಣಎಂಬ ನಾಮದಿಂದ |
ಕುಂತಿ ಅವಿವಾಹಿತೆ ಯಾಗಿದ್ದರಿಂದ
ತೇಲಿಬಿಟ್ಟಳು ಗಂಗೆಗೆ ಮರ್ಯಾದೆಯಿಂದ ||
ಸಿಕ್ಕಿದ ಮಗುವು ಸೂತ ದಂಪತಿಗೆ
ವಸು ಸೇನ ಎಂದು ಕರೆದರು ಆ ಮಗುವಿಗೆ |
ಬೆಳೆದು ನಿಂತ ಬಾಲ ಕಲಿಯಲು ವಿದ್ಯೆಗೆ
ತ್ಯಜಿಸಿದರು ದ್ರೋಣರು ಸೂತ ಬಾಲಗೆ ||
ಪರಶುರಾಮರಲಿಬಂದು ವಿದ್ಯೆ ಕಲಿತ
ಕೌರವರಲ್ಲಿ ದುರ್ಯೋದನನು ದೊರೆತ |
ಪಾoಡವರಲ್ಲಿ ದ್ವೇಷ ಸಾಧಿಸಿದ ನೀತ
ದುಷ್ಟ ಕಾರ್ಯಗಳಿಗೆ ಪಣವಾಗಿ ನಿಂತ ||
ಇಂದ್ರನಿಗೆ ಕರ್ಣ ಕುಂಡಲಗಳ ದಾನವಿತ್ತ
ಬ್ರಾಹ್ಮಣ ರೂಪಿ ನಾಗಶಯನನಿಗಿತ್ತ |
ದಾನವಾಗಿ ತನ್ನಲ್ಲಿನ ಅಮೃತ ಕಳಸವಿತ್ತ
ದಾನ ಶೂರ ಕರ್ಣನೆಂದು ಪ್ರಖ್ಯಾತ ||
ನಾಗರಾಜು. ಹ
ಬೆಂಗಳೂರು
1 Comment
ಮಿತ್ರರೇ, ತಾವು ತಮ್ಮ ಸಾಹಿತ್ಯ ಮೈತ್ರಿ ಯಲ್ಲಿ ಇಂದು ನನ್ನ ಕವನ “ದಾನ ಶೂರ ಕರ್ಣ ” ಕವನವನ್ನು ಪ್ರಕಟಿಸಿದ್ದಕ್ಕೆ ನನ್ನ ಹೃತ್ಪೂರ್ವಕ ವಂದನೆಗಳು “”
— ಇತಿ ತಮ್ಮ ಮಿತ್ರ
ನಾಗರಾಜು. ಹ
ಬೆಂಗಳೂರು