ದಾನಶೂರ ಕರ್ಣ

ದಾನಶೂರ ಕರ್ಣ

ಕೌoತೆಯ ದೇಶದಲ್ಲಿ ಜನಿಸಿದ
ಕುಂತಿ ದೇವಿಯು ದೂರ್ವಾಸ ರಿಂದ ;
ಪಡೆದ ಪುತ್ರ ಸಂತಾನ ವರದಿಂದ
ಹುಟ್ಟಿದ ರವಿಯ ವರ ಬಲದಿಂದ ||

ಕಿವಿಯಲ್ಲಿ ಕರ್ಣಕುಂಡಲಗಳಿದ್ದರಿಂದ
ಹೆಸರಾದ ಕರ್ಣಎಂಬ ನಾಮದಿಂದ |
ಕುಂತಿ ಅವಿವಾಹಿತೆ ಯಾಗಿದ್ದರಿಂದ
ತೇಲಿಬಿಟ್ಟಳು ಗಂಗೆಗೆ ಮರ್ಯಾದೆಯಿಂದ ||

ಸಿಕ್ಕಿದ ಮಗುವು ಸೂತ ದಂಪತಿಗೆ
ವಸು ಸೇನ ಎಂದು ಕರೆದರು ಆ ಮಗುವಿಗೆ |
ಬೆಳೆದು ನಿಂತ ಬಾಲ ಕಲಿಯಲು ವಿದ್ಯೆಗೆ
ತ್ಯಜಿಸಿದರು ದ್ರೋಣರು ಸೂತ ಬಾಲಗೆ ||

ಪರಶುರಾಮರಲಿಬಂದು ವಿದ್ಯೆ ಕಲಿತ
ಕೌರವರಲ್ಲಿ ದುರ್ಯೋದನನು ದೊರೆತ |
ಪಾoಡವರಲ್ಲಿ ದ್ವೇಷ ಸಾಧಿಸಿದ ನೀತ
ದುಷ್ಟ ಕಾರ್ಯಗಳಿಗೆ ಪಣವಾಗಿ ನಿಂತ ||

ಇಂದ್ರನಿಗೆ ಕರ್ಣ ಕುಂಡಲಗಳ ದಾನವಿತ್ತ
ಬ್ರಾಹ್ಮಣ ರೂಪಿ ನಾಗಶಯನನಿಗಿತ್ತ |
ದಾನವಾಗಿ ತನ್ನಲ್ಲಿನ ಅಮೃತ ಕಳಸವಿತ್ತ
ದಾನ ಶೂರ ಕರ್ಣನೆಂದು ಪ್ರಖ್ಯಾತ ||

ನಾಗರಾಜು. ಹ
ಬೆಂಗಳೂರು

Related post

1 Comment

  • ಮಿತ್ರರೇ, ತಾವು ತಮ್ಮ ಸಾಹಿತ್ಯ ಮೈತ್ರಿ ಯಲ್ಲಿ ಇಂದು ನನ್ನ ಕವನ “ದಾನ ಶೂರ ಕರ್ಣ ” ಕವನವನ್ನು ಪ್ರಕಟಿಸಿದ್ದಕ್ಕೆ ನನ್ನ ಹೃತ್ಪೂರ್ವಕ ವಂದನೆಗಳು “”
    — ಇತಿ ತಮ್ಮ ಮಿತ್ರ
    ನಾಗರಾಜು. ಹ
    ಬೆಂಗಳೂರು

Leave a Reply

Your email address will not be published. Required fields are marked *