ದೃಶ್ಯ ಕಲಾಗುರು ಕಿಶೋರ್ ಕುಮಾರ್ ಹಿರೇಮಠ್

ತುಮಕೂರು ಜಿಲ್ಲೆ ಲಲಿತ ಕಲೆಗಳ ತವರೂರು ಸಾಹಿತ್ಯ, ಸಂಗೀತ, ನೃತ್ಯ, ನಾಟಕಗಳನ್ನು ಕಟ್ಟಿ ಬೆಳೆಸಿದ ಕೀರ್ತಿ ನಮ್ಮ ಕಲಾ ಸಾಧಕರಿಗೆ ಸಲ್ಲುತ್ತದೆ. ಸಾಂಪ್ರದಾಯಿಕ ರೂಪದಲ್ಲಿದ್ದ ಚಿತ್ರಕಲೆಯನ್ನು ಜಾಗತಿಕ ಮಟ್ಟಕ್ಕೆ ಉನ್ನತೀಕರಿಸಿ ಕಲಾ ಶಿಕ್ಷಣ  ನೀಡಿ ಸಾವಿರಾರುಕಲಾವಿದರು, ಶಿಕ್ಷಕರನ್ನು ನಿರ್ಮಿಸಿದ ಕೀರ್ತಿ ಇಂದು ಕಲಾಗುರು “ಕಿಶೋರ್ ಕುಮಾರ್” ರವರಿಗೆ ಸಲ್ಲುತ್ತದೆ.

ಮೂಲತಃ ಗುಲಬರ್ಗಾ ಜಿಲ್ಲೆ ಷಹಪುರದ ಬಾವೈಕ್ಯ ಗ್ರಾಮದ “ಸೂರಯ್ಯ ಹಿರೇಮಠ ಹಾಗು ಸುಶೀಲಮ್ಮ” ನವರ ಮಗನಾಗಿ ಹುಟ್ಟಿದ “ಕಿಶೋರ್ ಕುಮಾರ್” ಗುಲಬರ್ಗಾದ ‘ಐಡಿಯಲ್ ಸ್ಕೂಲ್‍ ಆಪ್‍ ಆರ್ಟ್‍ನ’ ವಿ.ಜಿ. ಅಂದಾನಿ ಹಾಗೂ ಖಂಡೇರಾವ್‍ ರವರ ಮಾರ್ಗದರ್ಶನದಲ್ಲಿ ಚಿತ್ರಕಲಾ ಪದವಿ ಪಡೆದು 1982ರಲ್ಲಿ ತುಮಕೂರಿನ ಬಾಪೂಜಿ ವಿದ್ಯಾಸಂಸ್ಥೆಯ ರವೀಂದ್ರ ಕಲಾ ನಿಕೇತನ ಕಲಾ ಶಾಲೆಗೆ ಉಪನ್ಯಾಸಕರಾಗಿ ನೇಮಕಗೊಂಡು ನಿರಂತರ ನಲವತ್ತು ವರ್ಷ(40) ಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇವರಅವಧಿಯಲ್ಲಿ ಸಾವಿರಾರು ಕಲಾವಿದರನ್ನು ರಾಜ್ಯ, ಹಾಗು ರಾಷ್ಟ್ರಮಟ್ಟದಲ್ಲಿ ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಕಲಾವಿದರಾಗಿ ತಮ್ಮ ನೂರಾರು ಕಲಾಕೃತಿಗಳ ಮೂಲಕ ಸಮಕಾಲೀನ, ಸಾಂಸ್ಕೃತಿಕ ವಿದ್ಯಮಾನಗಳನ್ನು ತಮ್ಮದೇ ಶೈಲಿಯಲ್ಲಿ ತಾನು ಹುಟ್ಟಿ ಬೆಳೆದ ಪರಿಸರ, ಸಂಪ್ರದಾಯಗಳನ್ನು ಕಲಾಕೃತಿಗಳ ಮೂಲಕ ಅಭಿವ್ಯಕ್ತಿಸುವ ಮನೋಧರ್ಮ ಇವರದು, ಮನುಷ್ಯನ ಕ್ರೌರ್ಯ, ಯುದ್ಧ, ಸಾವು, ನೋವು, ಹಸಿವು ದಾರಿದ್ರ್ಯ, ಬಿಕ್ಷುಕ, ಬೀದಿ ಮಕ್ಕಳು ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆಯೂ ತಮ್ಮದೇ ಶೈಲಿಯ ರೇಖೆ, ಬಣ್ಣಗಳ ಮೂಲಕ ಅಭಿವ್ಯಕ್ತಿಸಿದ್ದಾರೆ. ಸಮಕಾಲಿನ ಕಲೆಯಲ್ಲಿ. ಗ್ರಾಫಿಕ್ ಚಿತ್ರಗಳು, ಭಾವಚಿತ್ರ, ನಿಸರ್ಗ ಚಿತ್ರ ಸಾಂಪ್ರದಾಯಿಕ ಚಿತ್ರಗಳನ್ನು ರಚಿಸಿದ್ದಾರೆ ಅಲ್ಲದೆ ತುಮಕೂರು ಜಿಲ್ಲೆಯ ಅದ್ಭುತ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ರಾಜ್ಯಮಟ್ಟದ ಗ್ರಾಫಿಕ್‍ ಕಾರ್ಯಗಾರ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೇಂದ್ರ ಲಲಿತ ಕಲಾ ಅಕಾಡಮಿ ನಾಗಪುರ, ನವದೆಹಲಿಗಳಲ್ಲಿ ನಡೆದ ಕಲಾ ಶಿಬಿರಗಳಲ್ಲಿ ಭಾಗವಹಿಸಿ ಕಲಾಕೃತಿಗಳನ್ನು ರಚಿಸಿದ್ದಾರೆ.

ಕರ್ನಾಟಕ ಲಲಿತಕಲಾ ಅಕಾಡಮಿ ಪ್ರಶಸ್ತಿ ಮೈಸೂರು ದಸರಾ ಪ್ರಶಸ್ತಿ ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಬಾಜನರಾಗಿದ್ದರೆ.

ಇವರ ಕಲಾ ಸೇವೆಯನ್ನು ಪರಿಗಣಿಸಿ ಇದೇ ದಿನಾಂಕ : 21-11-2021 ರಂದು ತುಮಕೂರಿನ ರವೀಂದ್ರ ಕಲಾ ನಿಕೇತನದಲ್ಲಿ ಇವರ ಆತ್ಮೀಯ ಕಲಾ ಬಳಗವು “ಇವರಜೊತೆಒಂದು ದಿನ”ಎಂಬ ಕಾರ್ಯಕ್ರಮದಲ್ಲಿ ಇವರ ಕಲಾಕೃತಿಗಳ ಪ್ರದರ್ಶನ, ಸ್ಲೇಡ್ ಶೋ ಸಂವಾದ ವಿಚಾರ ಸಂಕಿರಣಗಳ ಮೂಲಕ ಇವರನ್ನುಅಭಿನಂದಿಸುತ್ತಿದೆ.

ಸರ್ವರಿಗೂ ಸುಸ್ವಾಗತ

ಕೋಟೆಕುಮಾರ್

Related post

Leave a Reply

Your email address will not be published. Required fields are marked *