ದೇವರ ಆತ್ಮಹತ್ಯೆ

ಹುಡುಕದಿರು ಹುಡುಕದಿರು

ಹುಡುಕದಿರು ಎನ್ನನು

ಇಲ್ಲ ಅಲ್ಲಾಹುವಿನ ರೂಪದಲ್ಲಿ

ಮಂದಿರಗಳ ಬಂಧನದಲ್ಲಿ

ಶಿಲುಬೆಯ ಆಕಾರದಲ್ಲಿ

 ವೈಶಾಖದ 25ನೇ ತೇದಿ 2017ರ ಇಸವಿ

ನಾನು ನಿಮ್ಮೆಲ್ಲರ ದೇವರು

ಆತ್ಮಹತ್ಯಾ ಮಾಡಿಕೊಂಡೆನು

ಹುಡುಕದಿರು ನನ್ನನ್ನು

ನಾನಿರುವ ಬೀಡು ಕೇರಳದ ನಾಡು

ಎಂದೆನ್ನ ತಪಾಶಿಸದಿರು

ಪಾಪಿ ಜನರ ಹುಟ್ಟಿಗೆ ಕಾರಣ ನಾನು.

ಪಶ್ಚಾತ್ತಾಪದಿಂದ ಸತ್ತು ನರಕದಲ್ಲಿಹೆನು

ಓ ಎನ್ನಲು ಬಾರೆನು ಕರೆಯದಿರು ಎನ್ನನು

ಗೋಮಾತೆ ಕೊಂದ ದಿನವು ನನ್ನ ಸಾವು ದಿಟವು

ಮನುಜರೆಂದು ಹುಟ್ಟಿಸಿದೆ ತಪ್ಪು ನನ್ನದಲ್ಲವೇ

ಈ ಅಪರಾಧಕ್ಕೆ ನನ್ನ ನ್ಯಾಯದೇಗುಲದೊಳಗೆ

ಸಾವಿನ ತೀರ್ಪು ಬರೆದಿದೆ ಸಮ್ಮತವಿದೆ ಹುಡುಕದಿರು ಹುಡುಕದಿರು ಹುಡುಕದಿರು ನನ್ನನ್ನು

ಪವನ ಕುಮಾರ ಕೆ ವಿ

ಬಳ್ಳಾರಿ

Related post