ಧನ್ಯತೆ
ಮುಂಬೆಳಗಿನ ನೋಟ
ಕಿಚ ಕಿಚ ಕೊಕ್ಕೊ ಕೋ ಚಿಲಿಪಿಲಿ
ಸ್ವರ ಮಾಧುರ್ಯ
ಕಿವಿ ಹಿಂಡಿ ಕಿವ್ವನೆ ಪಿಸು ಮಾತು
ಉಸಿರಿ ಹೋದಂತೆ ತಂಗಾಳಿ
ಎಲ್ಲೋ ಅಸ್ಪಷ್ಟ ವೇದ ಘೋಷ
ಈ ಪ್ರಕೃತಿಯಲಿ ಮೀಟುತಿದೆ ಮನದ ಸ್ವರ
ಅಗೋ ಮೆಲ್ಲನೆ ವಣ೯ ಬದಲಿಸಿ
ಸೂಯ೯ಬಂದ ಅವನೂ ಕರ್ತವ್ಯ
ಮರೆತು ಶಾಂತನಾದ
ಮೋಡದೊಳಗೆ ಅವಿತು ಕುಳಿತ
ಅಘಟಿತ ವಿಧ್ಯಾಮಾನಕ್ಕೆ ಸಾಕ್ಷಿಯಾದ
ಪ್ರಕೃತಿ ನಿನದೆಂತ ಚೆಲುವು
ನೀ ಕೃಪೆತೋರಲು
ಸಕಲ ಜೀವ ರಾಶಿಗೆ ಗೆಲುವು
ಪವನ ಕುಮಾರ್ ಕೆ. ವಿ.
ಬಳ್ಳಾರಿ