ನಂಬಿಕೆ
ಸತ್ಯಕ್ಕೆ ಸಾವಿಲ್ಲವೆಂಬ
ನಂಬಿಕೆಯು ತಾನಿಂದು
ಕೊನೆಯುಸಿರೆಳೆಯುತಿದೆ!
ಧರ್ಮಕ್ಕೆ ಜಯವೆಂಬ
ನಂಬುಗೆಯ ಮಂತ್ರವಿಂದು
ಹುಸಿಯದೆನಿಸುತಿದೆ !
ಕಾಯಕವೇ ಕೈಲಾಸವೆಂಬ
ಮಾತಿನ ನಂಬಿಕೆಯಿಂದು
ಮೈಗಳ್ಳತನ ತೋರುತಿದೆ!
ನಮ್ಮನಾಳುವವರೇ
ಗೋಮುಖ ವ್ಯಾಘ್ರರಾಗಿ
ನಂಬಿಕೆಗನರ್ಹರಾಗಿದ್ದಾರೆ!
ಹಣದೆದುರು ಸ್ನೇಹ,
ಪ್ರೀತಿ, ವಿಶ್ವಾಸಗಳೆಂಬುದು
ನಂಬಿಕೆ ಕಳೆದುಕೊಳ್ಳುತಿದೆ !
ನಂಬಿಕೆಯೇ ನಂಬಿಕೆಯ
ಮೇಲಿಟ್ಟ ನಂಬಿಕೆಯನು
ನಂಬದಿದ್ದರೂ;
ಮಾನವೀಯತೆಯಿಂದು
ಗುಟುಕು ಜೀವಹಿಡಿದು
ನಂಬಿಕೆಯ ಕಾಯುತ್ತಿದೆ !

ಶ್ರೀವಲ್ಲಿ ಮಂಜುನಾಥ