ನಂಬಿಕೆ

ನಂಬಿಕೆ

ನಂಬಿಕೆಯೆನುವುದು ಜೀವನಾಧಾರ
ನಂಬಿಕೆಯೆನುವುದು ನಮಗಾಧಾರ
ನಂಬಿಕೆಯ ಉಳಿಸಿಕೊಂಡರೆ ಸಾಕಾರ
ನಂಬಿಕೆಯೇ ಎಲ್ಲದಕೂ ಪರಿಹಾರ

ರಾಗಗಳ ಬಗ್ಗೆ ಜ್ಞಾನವಿದ್ದ ಹಾಡುಗಾರನೊಬ್ಬ
ಒತ್ತೆಯಿಟ್ಟ ತಾ ಸಾಧಿಸಿದ್ಧ ಭೈರವಿಯನ್ನ
ರಾಗವ ಒತ್ತೆ ಇರಿಸಿಕೊಂಡ ವರ್ತಕನೊಬ್ಬ
ಕಛೇರಿಯೊಂದರಲಿ ಭೈರವಿ ಹಾಡಿಸಿ ಮಾಡಿದ ಸಾಲಮನ್ನ
ಹಾಡುಗಾರ ಉಳಿಸಿಕೊಂಡ ನಂಬಿಕೆಯನ್ನ

ಲೋಕದ ಆಧಾರವು ನಂಬಿಕೆಯಣ್ಣ
ದೇವನರಿವು ನಮಗೆ ನೀಡಿದೆಯಣ್ಣ
ನಂಬಿಕೆಯೇ ನಮ್ಮ ತಳಹದಿಯಣ್ಣ
ಇದು ಉಳಿದರೆ ವ್ಯಾಜ್ಯಗಳಿರದಣ್ಣ

ತಾನು ತಾನೆಂಬ ಅರಿವು ಮೂಡಿಹುದು
ತನ್ನ ಶಕ್ತಿಯ ಜ್ಞಾನದ ಮೂಲವಿದು
ಪರರ ಬಲಗಳ ಬಗ್ಗೆಯೂ ತೋರಿಸುವುದು
ನಂಬಿಕೆ ಎಂಬ ಮೂರಕ್ಷರದ ಶಕ್ತಿಯಿದು

ಉಳಿಯಲಿ ನಂಬಿಕೆ ಎಲ್ಲರಲೂ
ನಂಬಿಕೆಯುಳಿದರೆ ಸಮರಸವು ಎಲ್ಲಕಡೆ
ನಂಬಿಕೆಯು ತರಲಿ ಶಾಂತಿ ಸರ್ವರಲೂ
ನಂಬಿಕೆಯೇ ಭದ್ರಬುನಾದಿ ಮಾನವತ್ವದೆಡೆ

ಸಿ.ಎನ್. ಮಹೇಶ್

Related post

Leave a Reply

Your email address will not be published. Required fields are marked *