ನಂಬು ನನ್ನನು ರಾಮನೆ
ರಾಮ ರಾಮ ಎಂದು ಜಪಿಸುತ
ಹನುಮನಾ ಜೊತೆ ನಾನು ಬರುವೆನು
ರಾಮ ಲಕ್ಷ್ಮಣ ಸೀತಾಫಲವನು
ನಿನ್ನ ಪೂಜೆಗೆ ಬಿಡದೆ ತರುವೆನು
ನಂಬು ನನ್ನನು ರಾಮನೆ,,,
ಕೌಸಲ್ಯೆ ಮುದ್ದಿನ ಕಂದನೆ.!!೧!!
ಜಾನಕಿರಾಮ ಎಂದು ಕೂಗುತ
ಜಟಾಯು ಪಕ್ಷಿಯನು ಕರೆಯುವೆ
ಅಳಿಲು ಸೇವೆಯ ನಾನು ಸ್ಮರಿಸುತ
ಶಬರಿಯಂತೆ ನಾನು ಕಾಯುವೆ
ನಂಬು ನನ್ನನು ರಾಮನೆ,,
ಸೀತೆಯನು ವರಿಸಿದ ಚಂದ್ರನೆ.!!೨!!
ನಿನ್ನಂತೆ ಜನರ ಸೇವೆ ಮಾಡುತ
ನಿನ್ನ ಗುಣವೆ ಸ್ಪೂರ್ತಿ ಎನ್ನುವೆ
ಎಕ ಪತ್ನಿಯ ಜೊತೆಗೆ ಬದುಕುತ
ನಿನ್ನ ತನದಲಿ ನಾನು ಬಾಳುವೆ
ನಂಬು ನನ್ನನು ರಾಮನೆ,,
ರಾಮರಾಜ್ಯದ ಭೀಮನೆ.!!೩!!
ವಾಲ್ಮೀಕಿಯು ಬರೆದ ಧರ್ಮಗ್ರಂಥವ
ಓದಿ ತಿಳಿದು ಜಗಕೆ ಸಾರುವೆ
ಅಯೋಧ್ಯೆಯಲ್ಲಿ ನಿನ್ನ ರೂಪವ
ಕಂಡು ನಾನು ಧನ್ಯನಾಗುವೆ
ನಂಬು ನನ್ನನು ರಾಮನೆ,,,
ಬಿಡದೆ ಜಪಿಸುವೆ ನಿನ್ನನೆ.!!೪!!
ಹೇಗೆ ಪ್ರಸಾದ್
ಕುದೂರು ಲಕ್ಕೇನಹಳ್ಳಿ